River Rafting: ಕಾಳಿ ನದಿಯಲ್ಲಿ ಬೋಟ್​ ಮುಳುಗಡೆ, ಮಕ್ಕಳು ಸೇರಿ 12 ಪ್ರವಾಸಿಗರು ಗ್ರೇಟ್​ ಎಸ್ಕೇಪ್​- ವಿಡಿಯೋ ಇದೆ

ಬೋಟ್​ ಬಾರ ಹೆಚ್ಚಾಗಿ ಮುಳುಗುವ ಹಂತ ತಲುಪಿದ್ದು, ನೀರಿನಲ್ಲಿ ಬಿದ್ದಿದ್ದ ಮಕ್ಕಳು ಸೇರಿ 12 ಜನ ಪ್ರವಾಸಿಗರನ್ನು ತಕ್ಷಣ ರಕ್ಷಣೆ ಮಾಡಲಾಗಿದೆ. ಪ್ರವಾಸಿಗರು ಲೈಫ್ ಜಾಕೇಟ್ ಹಾಕಿದ ಪರಿಣಾಮ ಅನಾಹುತ ತಪ್ಪಿದೆ. ಘಟನೆ ಸಂಬಂಧ ಜೋಯಿಡಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

River Rafting: ಕಾಳಿ ನದಿಯಲ್ಲಿ ಬೋಟ್​ ಮುಳುಗಡೆ, ಮಕ್ಕಳು ಸೇರಿ 12 ಪ್ರವಾಸಿಗರು ಗ್ರೇಟ್​ ಎಸ್ಕೇಪ್​- ವಿಡಿಯೋ ಇದೆ
ಮಕ್ಕಳು ಸೇರಿ12 ಜನ ಪ್ರವಾಸಿಗರ ರಕ್ಷಣೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Apr 15, 2022 | 4:45 PM

ಕಾರವಾರ: ನಿಗದಿ ಪ್ರಮಾಣಕ್ಕಿಂತ ಹೆಚ್ಚಿನ ಜನರನ್ನು ರಿವರ್ ರ್ಯಾಪ್ಟಿಂಗ್ (River Rafting) ಬೋಟ್​ನಲ್ಲಿ ಕುಳ್ಳಿರಿಸಿ ರ್ಯಾಪ್ಟಿಂಗ್ ಮಾಡಿದ ಪರಿಣಾಮ ನದಿಯಲ್ಲಿ ಬೋಟ್ ಮುಳುಗುವ ಹಂತ ತಲುಪಿ ಮಕ್ಕಳು ಸೇರಿದಂತೆ 12 ಜನ ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ನಡೆದಿದೆ. ರಬ್ಬರ್ ಬೋಟ್​ನಲ್ಲಿ ಆರು ಜನಕ್ಕಿಂತ ಹೆಚ್ಚು ಜನರನ್ನು ಹಾಕಿ ರಿವರ್ ರ್ಯಾಪ್ಟಿಂಗ್ ಮಾಡುವಂತಿಲ್ಲ. ಆದರೆ ಖಾಸಗಿ ಆಯೋಜಕರು ಅನುಮತಿ ಇಲ್ಲದೇ 12 ಜನ ಪ್ರವಾಸಿಗರನ್ನು ಬೋಟ್​ನಲ್ಲಿ ರ್ಯಾಪ್ಟಿಂಗ್​ಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಬೋಟ್​ ಬಾರ ಹೆಚ್ಚಾಗಿ ಮುಳುಗುವ ಹಂತ ತಲುಪಿದ್ದು, ನೀರಿನಲ್ಲಿ ಬಿದ್ದಿದ್ದ ಮಕ್ಕಳು ಸೇರಿ 12 ಜನರು ಕೊಚ್ಚಿ ಹೋಗುವ ಮುನ್ನ ಕೂದಲೆಳೆ ಅಂತರದಲ್ಲಿ ಪ್ರವಾಸಿಗರನ್ನು ತಕ್ಷಣ ರಕ್ಷಣೆ ಮಾಡಲಾಗಿದೆ. ಪ್ರವಾಸಿಗರು ಲೈಫ್ ಜಾಕೇಟ್ ಹಾಕಿದ ಪರಿಣಾಮ ಅನಾಹುತ ತಪ್ಪಿದೆ. ಘಟನೆ ಸಂಬಂಧ ಜೋಯಿಡಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಲ್ಲಿನ ನಡುವೆ ಸಿಲುಕಿಕೊಂಡಿದ್ದ ಟ್ಯೂಬ್ ಬೋಟ್‌ನಿಂದ ಪ್ರಯಾಣಿಕರನ್ನು ಹರಸಾಹಸಪಟ್ಟು ಸಿಬ್ಬಂದಿ ಹೊರಗೆಳೆದಿದ್ದು, ರಕ್ಷಣೆಯ ವೇಳೆ ನೀರು ಕುಡಿದು ಯುವತಿ ಅಸ್ವಸ್ಥಳಾಗಿದ್ದಾಳೆ. ಕುಟುಂಬ ಹಾಗೂ ಗೆಳೆಯರ ಜತೆ ಹೆಚ್ಚಾಗಿ ದಾಂಡೇಲಿ ಹಾಗೂ ಜೊಯಿಡಾ ಭಾಗಕ್ಕೆ ಪ್ರಯಾಣಿಕರು ಭೇಟಿ ನೀಡುತ್ತಾರೆ. ಆದರೆ, ರ್ಯಾಫ್ಟಿಂಗ್ ನಡೆಸುವ ಖಾಸಗಿ ಸಂಸ್ಥೆಗಳ ದುರಾಸೆಗೆ ಜನರು ಜೀವ ಭೀತಿ ಎದುರಿಸುವಂತ್ತಾಗಿದೆ. ಈ ಹಿಂದೆ ಕೂಡಾ ಖಾಸಗಿ ಟೂರ್ ಆಪರೇಟರ್ಸ್ ಲೈಫ್ ಜಾಕೆಟ್ ಇಲ್ಲದೇ ರ್ಯಾಫ್ಟಿಂಗ್ ಮಾಡಿಸಿದ್ದರು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹರಿದಾಡಿದ ಬಳಿಕ ಜಿಲ್ಲಾಡಳಿತ ಇವರ ಮೇಲೆ ಕ್ರಮ ಕೈಗೊಂಡಿತ್ತು.

ಇದನ್ನೂ ಓದಿ:

West Bengal Gang Rape: ಹನ್ಸ್​ಖಾಲಿ ಸಾಮೂಹಿಕ ಅತ್ಯಾಚಾರ ಪ್ರಕರಣ; ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ನಾಯಕರ ಒತ್ತಾಯ

IPL 2022 MI vs LSG Live Streaming: ಗೆಲ್ಲಲೇಬೇಕಾದ ಒತ್ತಡದಲ್ಲಿ ಮುಂಬೈ; ಪಂದ್ಯದ ಬಗೆಗಿನ ಪೂರ್ಣ ಮಾಹಿತಿ

Published On - 4:22 pm, Fri, 15 April 22