West Bengal Gang Rape: ಹನ್ಸ್ಖಾಲಿ ಸಾಮೂಹಿಕ ಅತ್ಯಾಚಾರ ಪ್ರಕರಣ; ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ನಾಯಕರ ಒತ್ತಾಯ
ಮಮತಾ ಬ್ಯಾನರ್ಜಿ 14 ವರ್ಷದ ಬಾಲಕಿಯ ಅತ್ಯಾಚಾರದ ಬಗ್ಗೆ ಖಂಡನೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ, ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹಿಸುತ್ತೇವೆ. ಮಮತಾ ಬ್ಯಾನರ್ಜಿ ತಮ್ಮ ಸ್ಥಾನವನ್ನು ತ್ಯಜಿಸಬೇಕು ಎಂದು ಬಿಜೆಪಿ ನಾಯಕಿ ಖುಷ್ಬು ಸುಂದರ್ ಒತ್ತಾಯಿಸಿದ್ದಾರೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆಸಿ, ಆಕೆ ಸಾವನ್ನಪ್ಪಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ. ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹನ್ಸ್ಖಾಲಿಗೆ ಆಗಮಿಸಿದ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ರಚಿಸಿರುವ ಐವರು ಸದಸ್ಯರ ಸತ್ಯಶೋಧನಾ ಸಮಿತಿಯು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ಕ್ಷಮೆ ಯಾಚಿಸಲು ಒತ್ತಾಯಿಸಿದೆ. ಈ ಘಟನೆಯ ಕುರಿತು ಸಿಎಂ ಮಮತಾ ಬ್ಯಾನರ್ಜಿ ಅವರು ಖಂಡನೀಯ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಲಾಗಿದೆ.
ಸತ್ಯಶೋಧನಾ ಸಮಿತಿಯು ಪಶ್ಚಿಮ ಬಂಗಾಳದಲ್ಲಿ ಕ್ಷೀಣಿಸುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಟಿಎಂಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಹಾಗೇ, ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ತಕ್ಷಣವೇ ಹೇರುವಂತೆ ಒತ್ತಾಯಿಸಿತು. ಪಶ್ಚಿಮ ಬಂಗಾಳದಲ್ಲಿ ಮಹಿಳಾ ಮುಖ್ಯಮಂತ್ರಿಯಿದ್ದರೂ ಮಹಿಳಾ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಿಲ್ಲ. ಮಮತಾ ಬ್ಯಾನರ್ಜಿ 14 ವರ್ಷದ ಬಾಲಕಿಯ ಅತ್ಯಾಚಾರದ ಬಗ್ಗೆ ಖಂಡನೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಈ ವಿಷಯವನ್ನು ಕಡೆಗಣಿಸಿದ್ದಾರೆ. ಹೀಗಾಗಿ, ಅವರು ಕ್ಷಮೆ ಕೇಳಲೇಬೇಕು. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹಿಸುತ್ತೇವೆ. ಮಮತಾ ಬ್ಯಾನರ್ಜಿ ತಮ್ಮ ಸ್ಥಾನವನ್ನು ತ್ಯಜಿಸಬೇಕು ಎಂದು ಬಿಜೆಪಿ ನಾಯಕಿ ಖುಷ್ಬು ಸುಂದರ್ ಒತ್ತಾಯಿಸಿದ್ದಾರೆ.
Hanskhali rape-murder | A woman CM (Mamata Banerjee) is making condemnable statements about the rape of a 14-year-old & overlooking the matter. She should apologize. We demand President’s rule in the state; she should quit her seat: Khushbu Sundar, BJP pic.twitter.com/OmgIZWMrtm
— ANI (@ANI) April 15, 2022
ಈ ಸಮಿತಿಯಲ್ಲಿ ಬಿಜೆಪಿ ಸಂಸದೆ ರೇಖಾ ವರ್ಮಾ, ಉತ್ತರ ಪ್ರದೇಶದ ಸಚಿವೆ ಬೇಬಿ ರಾಣಿ ಮೌರ್ಯ, ತಮಿಳುನಾಡು ಶಾಸಕಿ ವನತಿ ಶ್ರೀನಿವಾಸನ್, ಖುಷ್ಬು ಸುಂದರ್ ಮತ್ತು ಪಶ್ಚಿಮ ಬಂಗಾಳದ ಶಾಸಕಿ ರೂಪಮಿತ್ರ ಚೌಧರಿ ಇದ್ದಾರೆ. ಬಿಜೆಪಿಯ ಸತ್ಯಶೋಧನಾ ತಂಡವು ಹಂಸಖಾಲಿಯಲ್ಲಿ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದೆ.
ಏಪ್ರಿಲ್ ಆರಂಭದಲ್ಲಿ ನಾಡಿಯಾ ಜಿಲ್ಲೆಯ ಹನ್ಸ್‌ಖಾಲಿಯಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಬಳಿಕ ಆಕೆ ಸಾವನ್ನಪ್ಪಿದ್ದಳು. ಸಂತ್ರಸ್ತೆಯ ಕುಟುಂಬವು ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಪಂಚಾಯತ್ ನಾಯಕನ ಮಗನ ಕೈವಾಡವಿದೆ ಎಂದು ಆರೋಪ ಮಾಡಿದೆ. ಈ ಪ್ರಕರಣದ ತನಿಖೆ ನಡೆಸಲು ಕೊಲ್ಕತ್ತಾ ಹೈಕೋರ್ಟ್ ಮಂಗಳವಾರ ಸಿಬಿಐಗೆ ಅನುಮತಿ ನೀಡಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಈ ಘಟನೆಗೆ ಪ್ರತಿಕ್ರಿಯೆ ನೀಡುವಾಗ, ಅಪ್ರಾಪ್ತ ಬಾಲಕಿಯ ಮೇಲೆ ನಿಜವಾಗಿಯೂ ಅತ್ಯಾಚಾರವೆಸಗಿದ್ದಾರೆಯೇ? ಅಥವಾ ಪ್ರೇಮ ಪ್ರಕರಣದಲ್ಲಿ ಆಕೆ ಗರ್ಭಿಣಿಯಾಗಿದ್ದಾಳೆಯೇ? ಎಂದು ಪ್ರಶ್ನಿಸಿದ್ದರು. “ಅವಳು ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ನಿಮಗೆ ಹೇಗೆ ಗೊತ್ತು? ಸಾವಿಗೆ ಕಾರಣವನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಅವಳು ಗರ್ಭಿಣಿಯಾಗಿದ್ದಳೋ ಅಥವಾ ಪ್ರೇಮ ಸಂಬಂಧ ಹೊಂದಿದ್ದಳೋ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದಳೋ? ಎಂದು ನಾನು ಆ ಬಾಲಕಿಯ ಕುಟುಂಬಸ್ಥರನ್ನು ಕೇಳಿದೆ. ಇದು ಪ್ರೇಮ ಪ್ರಕರಣ ಎಂದು ಕುಟುಂಬದವರಿಗೂ ತಿಳಿದಿತ್ತು ಎಂದು ಮಮತಾ ಬ್ಯಾನರ್ಜಿ ಹೇಳಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು.
ಇದನ್ನೂ ಓದಿ: Crime News: ಅತ್ಯಾಚಾರ ಕೊಲೆಗಿಂತಲೂ ಘೋರವಾದುದು; ಪೋಕ್ಸೋ ನ್ಯಾಯಾಲಯದಿಂದ ಅತ್ಯಾಚಾರಿಗೆ 10 ವರ್ಷ ಜೈಲು ಶಿಕ್ಷೆ
ಮಹಾರಾಷ್ಟ್ರದಲ್ಲಿ ಬೆಂಗಾಲ್ ಮಾನಿಟರ್ ಹಲ್ಲಿಯ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರ ಬಂಧನ