Omicron XE Variant: ಹೊಸ ಒಮಿಕ್ರಾನ್ ಎಕ್ಸ್​ಇ ರೂಪಾಂತರದ ಲಕ್ಷಣ, ಪರಿಣಾಮಗಳೇನು?

ಜ್ವರ, ಗಂಟಲು ನೋವು, ಕೆಮ್ಮು ಮತ್ತು ಶೀತ, ಚರ್ಮದ ಕಿರಿಕಿರಿ ಮತ್ತು ಕರುಳಿನ ತೊಂದರೆಗಳು ಎಕ್ಸ್​ಇ ರೂಪಾಂತರದ ಪ್ರಮುಖ ಲಕ್ಷಣಗಳಾಗಿವೆ.

Omicron XE Variant: ಹೊಸ ಒಮಿಕ್ರಾನ್ ಎಕ್ಸ್​ಇ ರೂಪಾಂತರದ ಲಕ್ಷಣ, ಪರಿಣಾಮಗಳೇನು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 15, 2022 | 2:30 PM

ನವದೆಹಲಿ: ಅನೇಕ ದೇಶಗಳು ಕೋವಿಡ್ 4ನೇ ಅಲೆಯ (Covid 4th Wave) ವಿರುದ್ಧ ಹೋರಾಡುತ್ತಿದ್ದರೂ ಹೊಸತಾಗಿ ಕಾಣಿಸಿಕೊಂಡಿರುವ XE ರೂಪಾಂತರಿ ಮತ್ತಷ್ಟು ಆತಂಕ ಮೂಡಿಸಿದೆ. ಹೊಸ ಕೊವಿಡ್ ಅಲೆಯ ಸೋಂಕಿನ ಭೀತಿಯು ಭಾರತದಲ್ಲಿ ಹೆಚ್ಚಾಗಿದೆ. XE ರೂಪಾಂತರದ ಪ್ರಕರಣಗಳು ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಜನರನ್ನು ಚಿಂತೆಗೀಡು ಮಾಡಿದೆ. ಮುಂಬೈನಲ್ಲಿ ಒಮಿಕ್ರಾನ್ XE (Omicron XE) ರೂಪಾಂತರದ ಮೊದಲ ಪ್ರಕರಣ ದಾಖಲಾಗಿತ್ತು. ಬಳಿಕ ಗುಜರಾತ್ ಸೇರಿದಂತೆ ಇತರೆಡೆ ಕೂಡ ಈ ರೂಪಾಂತರಿ ಆತಂಕ ಸೃಷ್ಟಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಸ್ತುತ ಒಮಿಕ್ರಾನ್ ರೂಪಾಂತರದ ಭಾಗವಾಗಿ XE ರೂಪಾಂತರವನ್ನು ಟ್ರ್ಯಾಕ್ ಮಾಡುತ್ತಿದೆ. ಇದರ ಲಕ್ಷಣಗಳೆಂದರೆ ಜ್ವರ, ಗಂಟಲು ನೋವು, ಕೆಮ್ಮು ಮತ್ತು ಶೀತ, ಚರ್ಮದ ಕಿರಿಕಿರಿ, ಕರುಳಿನ ತೊಂದರೆ ಮತ್ತು ಒಣ ಕೆಮ್ಮು. XE ಎರಡು ಹೆಚ್ಚು ಪ್ರಚಲಿತವಿರುವ ಒಮಿಕ್ರಾನ್ BA.1 ಮತ್ತು BA.2 ರೂಪಾಂತರಗಳ ಸಂಯೋಜನೆಯಾಗಿದೆ. ಇದು ಒಮಿಕ್ರಾನ್​ಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ. ಇದರರ್ಥ ಎಕ್ಸ್​ಇ ರೂಪಾಂತರವು ಹಿಂದಿನ ಓಮಿಕ್ರಾನ್ ತಳಿಗಳಿಗಿಂತ ವೇಗವಾಗಿ ಹರಡುತ್ತದೆ ಮತ್ತು ಮೊದಲಿಗಿಂತ ಹೆಚ್ಚು ಜನರಿಗೆ ಸೋಂಕು ಉಂಟುಮಾಡುತ್ತದೆ.

ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್​ನಲ್ಲಿ ಈ ಹೊಸ ಕೊವಿಡ್ ರೂಪಾಂತರದ ಆವಿಷ್ಕಾರವಾಗಿತ್ತು. ಇದು ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದೆ ಎನ್ನಲಾಗಿದೆ.

XE ರೂಪಾಂತರ ಎಂದರೇನು? XE ಅನ್ನು ಮೊದಲ ಬಾರಿಗೆ ಇಂಗ್ಲೆಂಡ್​​ನಲ್ಲಿ ಜನವರಿ 2022ರಲ್ಲಿ ಕೊವಿಡ್-19 ಹೊಸ ರೂಪಾಂತರವಾಗಿ ಕಂಡುಹಿಡಿಯಲಾಯಿತು. ಅಂದಿನಿಂದ 600ಕ್ಕೂ ಹೆಚ್ಚು ಕೊವಿಡ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. WHO ಇದನ್ನು BA.2 ರೂಪಾಂತರಕ್ಕಿಂತ ಹತ್ತು ಪಟ್ಟು ಹೆಚ್ಚು ಸಾಂಕ್ರಾಮಿಕ ಎಂದು ಪರಿಗಣಿಸಿದೆ.

ಒಮಿಕ್ರಾನ್ ರೂಪಾಂತರದ ಭಾಗವಾಗಿ XE ರೂಪಾಂತರವನ್ನು ಪತ್ತೆಹಚ್ಚಲಾಗಿದೆ. ಜ್ವರ, ಗಂಟಲು ನೋವು, ಕೆಮ್ಮು ಮತ್ತು ಶೀತ, ಚರ್ಮದ ಕಿರಿಕಿರಿ ಮತ್ತು ಕರುಳಿನ ತೊಂದರೆಗಳು ಈ ರೂಪಾಂತರದ ಪ್ರಮುಖ ಲಕ್ಷಣಗಳಾಗಿವೆ. XE ರೂಪಾಂತರವು ಶೇ. 10ರಷ್ಟು ಹೆಚ್ಚು ಹರಡುತ್ತದೆ ಮತ್ತು ಮೂಲ ವೈರಸ್‌ಗೆ ಹೋಲಿಸಿದರೆ 1.1ರ ಹೆಚ್ಚಿನ ಸಮುದಾಯ ಪ್ರಸರಣ ಪ್ರಯೋಜನವನ್ನು ಹೊಂದಿದೆ. ಆದರೆ ರೋಗದ ತೀವ್ರತೆಯಲ್ಲಿ XE ಹೆಚ್ಚು ಗಂಭೀರವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಇದುವರೆಗಿನ ಎಲ್ಲಾ ಓಮಿಕ್ರಾನ್ ರೂಪಾಂತರಗಳು ಇಲ್ಲಿಯವರೆಗೆ ಕಡಿಮೆ ತೀವ್ರತೆಯನ್ನು ಹೊಂದಿವೆ.

XE ಎಂಬುದು BA.1 ಮತ್ತು BA.2 ಓಮಿಕ್ರಾನ್ ತಳಿಗಳ ‘ಮರುಸಂಯೋಜಕ’ ರೂಪಾಂತರವಾಗಿದೆ. ಕೋವಿಡ್‌ನ ಬಹು ರೂಪಾಂತರಗಳಿಂದ ರೋಗಿಯು ಸೋಂಕಿಗೆ ಒಳಗಾದಾಗ ಮರುಸಂಯೋಜಕ ರೂಪಾಂತರಗಳು ಹೊರಹೊಮ್ಮುತ್ತವೆ. ರೂಪಾಂತರಗಳು ಪುನರಾವರ್ತನೆಯ ಸಮಯದಲ್ಲಿ ತಮ್ಮ ಆನುವಂಶಿಕ ವಸ್ತುಗಳನ್ನು ಮಿಶ್ರಣ ಮಾಡುತ್ತವೆ ಮತ್ತು ಹೊಸ ರೂಪಾಂತರವನ್ನು ರೂಪಿಸುತ್ತವೆ.

XE ರೂಪಾಂತರದ ಲಕ್ಷಣಗಳು: ಆಯಾಸ, ಆಲಸ್ಯ, ಜ್ವರ, ತಲೆನೋವು, ದೇಹದ ನೋವು, ಬಡಿತ ಮತ್ತು ಹೃದಯ ಸಮಸ್ಯೆಗಳಂತಹ ಒಮಿಕ್ರಾನ್‌ನ ರೋಗಲಕ್ಷಣಗಳೇ ಎಕ್ಸ್​ಇ ರೂಪಾಂತರದ ರೋಗಲಕ್ಷಣಗಳಾಗಿವೆ.

ಇಂಗ್ಲೆಂಡ್​​ನಲ್ಲಿ ಕೊರೊನಾವೈರಸ್ ಸೋಂಕಿನ ಹೊಸ ರೂಪಾಂತರಿ ಪತ್ತೆಯಾಗಿತ್ತು. ಈ ಹೊಸ ರೂಪಾಂತರಿಯು ಒಮಿಕ್ರಾನ್ ತಳಿಯ ಬಿಎ.2 ಉಪ ತಳಿಗಿಂತಲೂ ಶೇ. 10ರಷ್ಟು ಹೆಚ್ಚು ಹರಡುವಿಕೆಯನ್ನು ಹೊಂದಿದೆ. ಎಲ್ಲ ಕೋವಿಡ್ 19 ರೂಪಾಂತರಗಳಲ್ಲಿಯೂ ಒಮಿಕ್ರಾನ್‌ನ ಬಿಎ.2 ಅತ್ಯಂತ ಹೆಚ್ಚು ಪ್ರಸರಣ ಹೊಂದುವ ಸೋಂಕು ಎಂದು ಈವರೆಗೂ ನಂಬಲಾಗಿತ್ತು. ಆದರೆ, ಈ ಹೊಸ ರೂಪಾಂತರಿ ಒಮಿಕ್ರಾನ್​ಗಿಂತಲೂ ವ್ಯಾಪಕವಾಗಿ ಹರಡಲಿದೆ ಎನ್ನಲಾಗಿದೆ. ಒಮಿಕ್ರಾನ್ ತಳಿಯ ಬಿಎ.1 ಮತ್ತು ಬಿಎ.2 ಉಪತಳಿಗಳ ರೂಪಾಂತರವನ್ನು ಗುರುತಿಸಲಾಗಿದ್ದು, ಇದಕ್ಕೆ ಎಕ್ಸ್‌ಇ ವೇರಿಯಂಟ್ (XE Variant) ಎಂದು ಹೆಸರಿಡಲಾಗಿದೆ. ಇದು ‘ಮರು ಸಂಯೋಜಿತ’ ಎಂದು ಉಲ್ಲೇಖಿಸಲಾಗಿದೆ. ಎಕ್ಸ್‌ಇ ರೂಪಾಂತರಿಯು BA.2 ತಳಿಗಿಂತಲೂ ಶೇ 9.8ರಷ್ಟು ಹೆಚ್ಚು ಹರಡುವಿಕೆಯನ್ನು ಹೊಂದಿದೆ. ಕೆಲವು ದೇಶಗಳಲ್ಲಿ ಕೊವಿಡ್-19 ಕಡಿಮೆಯಾಗಲು ಪ್ರಾರಂಭಿಸಿದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ (WHO) ಒಮಿಕ್ರಾನ್‌ನ ಹೊಸ ರೂಪಾಂತರಿಯಾದ ‘XE’ ಆತಂಕ ಮೂಡಿಸಿದೆ.

ಇದನ್ನೂ ಓದಿ: ನೆರೆ ರಾಜ್ಯದಲ್ಲಿ ಹೊಸ ತಳಿ XE ಪತ್ತೆ ಬೆನ್ನಲ್ಲೆ ಕರ್ನಾಟಕದಲ್ಲಿಯೂ ಹೈ ಅಲರ್ಟ್; ಎಂದಿನಂತೆ ಮಾಸ್ಕ್​ ಕಡ್ಡಾಯವೆಂದ ಸುಧಾಕರ್‌

Covid XE Variant: ಭಾರತದಲ್ಲಿ ಕೊವಿಡ್ ರೂಪಾಂತರಿ XE ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆ ಎಂದ ಬಿಎಂಸಿ; ಇದಕ್ಕೆ ಪುರಾವೆಗಳಿಲ್ಲ ಎಂದ ಕೇಂದ್ರ ಸರ್ಕಾರ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್