Covid XE Variant: ಭಾರತದಲ್ಲಿ ಕೊವಿಡ್ ರೂಪಾಂತರಿ XE ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆ ಎಂದ ಬಿಎಂಸಿ; ಇದಕ್ಕೆ ಪುರಾವೆಗಳಿಲ್ಲ ಎಂದ ಕೇಂದ್ರ ಸರ್ಕಾರ
XE ರೂಪಾಂತರಿ ಬಗ್ಗೆ ಮಾತನಾಡಿದ ಕೊವಿಡ್ -19 ಕಾರ್ಯಪಡೆಯ ಸದಸ್ಯ ಡಾ ಶಶಾಂಕ್ ಜೋಶಿ ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಮುಂಬೈ: ಹೊಸ ಕೊವಿಡ್ -19 ರೂಪಾಂತರಿ XEನ (Covid-19 variant XE ) ಭಾರತದ ಮೊದಲ ಪ್ರಕರಣವು ನಗರದಲ್ಲಿ ಪತ್ತೆಯಾಗಿದೆ ಎಂದು ಮುಂಬೈನ ನಾಗರಿಕ ಸಂಸ್ಥೆ ಹೇಳಿದ ಕೆಲವೇ ಗಂಟೆಗಳ ನಂತರ, ಕೇಂದ್ರ ಆರೋಗ್ಯ ಸಚಿವಾಲಯವು “ಪ್ರಸ್ತುತ ಪುರಾವೆಗಳು ಹೊಸ ರೂಪಾಂತರದ ಉಪಸ್ಥಿತಿಯನ್ನು ಸೂಚಿಸುವುದಿಲ್ಲ” ಎಂದು ಹೇಳಿದೆ. ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾಕ್ಕೆ (South Africa )ಪ್ರಯಾಣಸಿ ಬಂದಿದ್ದ 50 ವರ್ಷ ವಯಸ್ಸಿನ ಸಂಪೂರ್ಣ ಲಸಿಕೆಯನ್ನು ಹೊಂದಿರುವ ಮಹಿಳೆಯಲ್ಲಿ ಕೊವಿಡ್ ರೂಪಾಂತರಿ XE ಪತ್ತೆಯಾಗಿದ್ದು ಇದು ಭಾರತದಲ್ಲಿನ ಮೊದಲ ಪ್ರಕರಣವೆಂದು ಹೇಳಲಾಗಿತ್ತು. ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಒದಗಿಸಿದ ಮಾಹಿತಿಯ ಪ್ರಕಾರ, ಶೂಟಿಂಗ್ ತಂಡದ ಸದಸ್ಯರಾಗಿರುವ ವೇಷಭೂಷಣ ವಿನ್ಯಾಸಕಿಯಾಗಿರುವ ಮಹಿಳೆ ಫೆಬ್ರವರಿ 10 ರಂದು ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದರು. ಇತರ ಒಮಿಕ್ರಾನ್ ರೂಪಾಂತರಿಗಳಿಗಿಂತ XE ರೂಪಾಂತರವು 10 ಪ್ರತಿಶತ ಹೆಚ್ಚು ಹರಡುತ್ತದೆ ಎಂದು ನಂಬಲಾಗಿದೆ. ಮುಂಬೈಗೆ ಆಗಮಿಸಿದ ಮಹಿಳೆ ಲಕ್ಷಣರಹಿತರಾಗಿದ್ದರು ಮತ್ತು ಕೊವಿಡ್ -19 ಗೆ ನೆಗೆಟಿವ್ ಪರೀಕ್ಷೆ ಮಾಡಲಾಗಿತ್ತು. “ಆದರೆ ಮಾರ್ಚ್ 2 ರಂದು, ಸಬರ್ಬನ್ ಡಯಾಗ್ನೋಸ್ಟಿಕ್ಸ್ ನಡೆಸಿದ ಪರೀಕ್ಷೆಯಲ್ಲಿ ಅವರು ಪಾಸಿಟಿವ್ ಆಗಿರುವುದು ತಿಳಿಯಿತು.ಅವರನ್ನು ಹೋಟೆಲ್ ಕೋಣೆಯಲ್ಲಿ ಕ್ವಾರಂಟೈನ್ ಮಾಡಲಾಯಿತು ಎಂದು ಬಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ. 24 ಗಂಟೆಗಳ ಒಳಗೆ ಮರುದಿನ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿತ್ತು ಎಂದು ಬಿಎಂಸಿ ಹೇಳಿದೆ.
ಇದಾದ ನಂತರ ಬಿಎಂಸಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ತನ್ನ ಹನ್ನೊಂದನೇ ಬ್ಯಾಚ್ ಜೀನೋಮ್ ಸೀಕ್ವೆನ್ಸಿಂಗ್‌ನಲ್ಲಿ ಹೊಸ ರೂಪಾಂತರಿ XE ಪತ್ತೆಯಾಗಿದೆ. ಒಟ್ಟು 230 ಮಾದರಿಗಳನ್ನು ಅನುಕ್ರಮಗೊಳಿಸಲಾಗಿದೆ. ಅದರಲ್ಲಿ 228 ಮಾದರಿಗಳನ್ನು ಒಮಿಕ್ರಾನ್‌ನೊಂದಿಗೆ ಗುರುತಿಸಲಾಗಿದೆ ಎಂದಿದೆ.
.@MoHFW_INDIA Clarification on Reported Case of #COVID XE Variant in #Mumbai:
➡️ Hours after report of detection of XE variant of Coronavirus in Mumbai, @MoHFW_INDIA has said present evidence does not suggest the presence of the new variant.@PIB_India@COVIDNewsByMIB
(1/3)?
— PIB in Maharashtra ?? (@PIBMumbai) April 6, 2022
ಆದಾಗ್ಯೂ, ಕೇಂದ್ರ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ ಮಹಾರಾಷ್ಟ್ರದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ XEVariant ಎಂದು ಹೇಳಲಾಗುವ ಮಾದರಿಗೆ ಸಂಬಂಧಿಸಿದಂತೆ FastQ ಫೈಲ್‌ಗಳನ್ನು INSACOG ನ ಜೀನೋಮಿಕ್ ತಜ್ಞರು ವಿವರವಾಗಿ ವಿಶ್ಲೇಷಿಸಿದ್ದಾರೆ. ಅವರು ಜೀನೋಮಿಕ್ ರಚನೆಯನ್ನು ಊಹಿಸಿದ್ದಾರೆ. ಈ ರೂಪಾಂತರಿ ‘XE’ ರೂಪಾಂತರದ ಜೀನೋಮಿಕ್ ಚಿತ್ರದೊಂದಿಗೆ ಪರಸ್ಪರ ಸಂಬಂಧ ಹೊಂದಿಲ್ಲ ಎಂದು ಹೇಳಿದೆ.
XE ರೂಪಾಂತರಿ ಬಗ್ಗೆ ಮಾತನಾಡಿದ ಕೊವಿಡ್ -19 ಕಾರ್ಯಪಡೆಯ ಸದಸ್ಯ ಡಾ ಶಶಾಂಕ್ ಜೋಶಿ ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. ಇದು ಒಮಿಕ್ರಾನ್‌ನ ರೂಪಾಂತರವಾಗಿರುವುದರಿಂದ, ಇದು ಶ್ವಾಸಕೋಶವನ್ನು ಬಾಧಿಸುವುದಿಲ್ಲ. XE ರೂಪಾಂತರವು ತೀವ್ರವಾದ ಸೋಂಕನ್ನು ಉಂಟುಮಾಡುವುದಿಲ್ಲ ಎಂದು ನಂಬಲಾಗಿದೆ. ಆದರೆ ವಿಶೇಷವಾಗಿ ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್ ಬಳಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ಭಾರತದಲ್ಲಿ 1,086 ಕೊವಿಡ್ ಪ್ರಕರಣಗಳು ಮತ್ತು 71 ಸಾವುಗಳು ವರದಿಯಾಗಿದ್ದು, ಒಟ್ಟು ಕೊವಿಡ್ -19 ಪ್ರಕರಣಗಳ ಸಂಖ್ಯೆ 4,30,30,925ಕ್ಕೆ ತಲುಪಿದೆ. ಸಾವಿಗೀಡಾದವರ ಸಂಖ್ಯೆ 5,21,487 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 11,871 ಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.03 ಪ್ರತಿಶತವನ್ನು ಒಳಗೊಂಡಿವೆ, ಆದರೆ ರಾಷ್ಟ್ರೀಯ ಕೊವಿಡ್ -19 ದರವು 98.76 ಪ್ರತಿಶತದಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆಯು ಕೊವಿಡ್ -19 ಒಮಿಕ್ರಾನ್ ರೂಪಾಂತರದ ಹೊಸ ತಳಿ , ಯುಕೆನಲ್ಲಿ ಮೊದಲು ಪತ್ತೆಯಾಯಿತು. ಇದು ಕೊರೊನಾವೈರಸ್ ನ ಹಿಂದಿನ ತಳಿಗಳಿಗಿಂತ ಹೆಚ್ಚು ಹರಡುತ್ತದೆ ಎಂದು ತೋರುತ್ತದೆ. ಆದರೆ ಕೊವಿಡ್ -19 ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಾಗಿ ಉಳಿದಿದೆ ಎಂದು ಹೇಳಿತ್ತು.
ಇದನ್ನೂ ಓದಿ: Covid XE Variant: ಇಂಗ್ಲೆಂಡ್ನಲ್ಲಿ ಒಮಿಕ್ರಾನ್ಗಿಂತ ವೇಗವಾಗಿ ಹರಡುವ ಹೊಸ ಕೊವಿಡ್ ರೂಪಾಂತರಿ ಪತ್ತೆ
Published On - 10:25 pm, Wed, 6 April 22