Viral Video: ದೇವಸ್ಥಾನದ ಒಡವೆ ಕದಿಯಲು ತಾನೇ ಕೊರೆದ ರಂಧ್ರದಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ; ಆಮೇಲೇನಾಯ್ತು?

Viral Video: ದೇವಸ್ಥಾನದ ಒಡವೆ ಕದಿಯಲು ತಾನೇ ಕೊರೆದ ರಂಧ್ರದಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ; ಆಮೇಲೇನಾಯ್ತು?
ದೇವಸ್ಥಾನದೊಳಗೆ ನುಗ್ಗಿದ ಕಳ್ಳ

ಪಾಪ ರಾವ್ ಎಂಬ 30 ವರ್ಷದ ವ್ಯಕ್ತಿ ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದ. ಆ ಕಳ್ಳ ದೇವಸ್ಥಾನದ ರಂಧ್ರ ಕೊರೆದು, ಕಿಟಕಿಯನ್ನು ಒಡೆದು ವಿಗ್ರಹಗಳಲ್ಲಿದ್ದ ಆಭರಣಗಳನ್ನು ದೋಚಿದ್ದ. ಆದರೆ, ಹೊರಬರುವಾಗ ಅದೇ ರಂಧ್ರದಲ್ಲಿ ಸಿಲುಕಿಕೊಂಡಿದ್ದ.

TV9kannada Web Team

| Edited By: shivaprasad.hs

Apr 07, 2022 | 10:07 AM

ಹೈದರಾಬಾದ್: ‘ಮಾಡಿದ್ದುಣ್ಣೋ ಮಾರಾಯ’ ಎಂಬ ಮಾತೊಂದಿದೆ. ಆ ಮಾತು ಆಂಧ್ರಪ್ರದೇಶದ (Andhra Pradesh) ಈ ಪ್ರಕರಣದಲ್ಲಿ ನಿಜವಾಗಿದೆ. ಕಳ್ಳನೊಬ್ಬ ಆಂಧ್ರಪ್ರದೇಶದ ದೇವಾಲಯದಿಂದ (Temple) ಆಭರಣಗಳನ್ನು ಕದಿಯಲು ತಾನೇ ಕೊರೆದ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ. ದೇವಸ್ಥಾನದ ಗೋಡೆಯಲ್ಲಿ ಕೊರೆದಿದ್ದ ರಂಧ್ರದಲ್ಲಿ ಸಿಲುಕಿ, ಹೊರಬರಲಾಗದೆ ಸಹಾಯಕ್ಕಾಗಿ ಕೂಗಾಡಲು ಆರಂಭಿಸಿದ ಕಳ್ಳ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಶ್ರೀಕಾಕುಳಂನ ಕರಾವಳಿ ಜಿಲ್ಲೆಯ ಜಾಮಿ ಯೆಲ್ಲಮ್ಮ ದೇವಸ್ಥಾನದಿಂದ ಆಭರಣದೊಂದಿಗೆ ಪರಾರಿಯಾಗಲು ಯತ್ನಿಸಿದ ಆರೋಪಿ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ.

ಪಾಪ ರಾವ್ ಎಂಬ 30 ವರ್ಷದ ವ್ಯಕ್ತಿ ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದ. ಆ ಕಳ್ಳ ದೇವಸ್ಥಾನದ ಕಿಟಕಿಯನ್ನು ಒಡೆದು ವಿಗ್ರಹಗಳಲ್ಲಿದ್ದ ಆಭರಣಗಳನ್ನು ದೋಚಿದ್ದ. ಅದಕ್ಕಾಗಿ ದೇವಸ್ಥಾನದ ಹೊರಗೆ ರಂಧ್ರವನ್ನು ಕೊರೆದಿದ್ದ. ಆದರೆ, ಚಿನ್ನಾಭರಣಗಳನ್ನು ದೋಚಿಕೊಂಡು ವಾಪಾಸ್ ಬರುವಾಗ ಅದೇ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ. ಪಾಪ್ ರಾವ್ ಸಹಾಯಕ್ಕಾಗಿ ಜೋರಾಗಿ ಕೂಗಿದ್ದರಿಂದ ಅಲ್ಲಿಗೆ ಬಂದ ಗ್ರಾಮಸ್ಥರಿಗೆ ಆ ಕಳ್ಳನೆಂಬುದು ಗೊತ್ತಾಗುತ್ತಿದ್ದಂತೆ ಆತನನ್ನು ಹೊರಗೆಳೆದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಪಾಪ ರಾವ್ ಎಂದು ಗುರುತಿಸಲಾದ 30 ವರ್ಷದ ಕಳ್ಳ ಆಲ್ಕೋಹಾಲ್ ಕುಡಿಯುವ ಚಟವನ್ನು ಹೊಂದಿದ್ದು, ಅದಕ್ಕಾಗಿ ಅವನು ಕಳ್ಳತನ ಮಾಡಲು ಪ್ರಯತ್ನಿಸಿದ್ದ. ಆ ಗ್ರಾಮದ ಜಾಮಿ ಏಳಮ್ಮ ದೇವಸ್ಥಾನದ ಗೋಡೆಯಲ್ಲಿ ರಂಧ್ರವನ್ನು ಕೊರೆದು, ಅದರ ಮೂಲಕ ದೇವಸ್ಥಾನದಲ್ಲಿದ್ದ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲು ಪ್ರಯತ್ನಿಸಿದ್ದ.

ಸುಮಾರು 20 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಕದ್ದೊಯ್ದ ನಂತರ ಕಳ್ಳನು ತಾನು ಬಂದ ದಾರಿಯಲ್ಲೇ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಈ ವೇಳೆ ಸಣ್ಣ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ. ಸಹಾಯಕ್ಕಾಗಿ ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕಾಗಮಿಸಿ ನೋಡಿದಾಗ ಕಳ್ಳ ಹೊರಬರಲಾಗದೆ ಪರದಾಡುತ್ತಿದ್ದ. ಆಲ್ಕೋಹಾಲ್ ಕುಡಿಯಲು ಹಣವಿಲ್ಲದ ಕಾರಣ ಆತ ಮನೆಗಳು, ದೇವಸ್ಥಾನಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ.

ಇದನ್ನೂ ಓದಿ: Viral Video: ಬಾಯಾರಿದ ಕೋತಿಗೆ ನೀರು ಕುಡಿಸಿದ ಟ್ರಾಫಿಕ್ ಪೊಲೀಸ್; ಹೃದಯಸ್ಪರ್ಶಿ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ

Viral Photo: ಕೈಗಾಡಿಯಲ್ಲಿ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೃದ್ಧ; ಚಿಕಿತ್ಸೆ ವೇಳೆ ವೃದ್ಧೆ ಸಾವು

Follow us on

Related Stories

Most Read Stories

Click on your DTH Provider to Add TV9 Kannada