ಭಾರತೀಯ ಸೇನೆಗೆ ಸೇರುವ ತವಕದಿಂದ 350 ಕಿ.ಮೀ ಓಡಿ ದೆಹಲಿ ತಪುಪಿದ ರಾಜಸ್ಥಾನ ಯುವಕ; ಇಲ್ಲಿದೆ ವೈರಲ್ ವಿಡಿಯೋ

ರಾಜಸ್ಥಾನ ಮೂಲದ ಸುರೇಶ್ ಭಿಚಾರ್ ಎನ್ನುವ ಯುವಕ ಸಿಕರ್ ಪ್ರದೇಶದಿಂದ ನವದೆಹಲಿಗೆ ಓಡಿ, ಒಟ್ಟು 50 ಗಂಟೆಗಳಲ್ಲಿ 350 ಕಿ.ಮೀ ದೂರವನ್ನು ಪೂರ್ಣಗೊಳಿಸಿದ್ದಾರೆ.

ಭಾರತೀಯ ಸೇನೆಗೆ ಸೇರುವ ತವಕದಿಂದ 350 ಕಿ.ಮೀ ಓಡಿ ದೆಹಲಿ ತಪುಪಿದ ರಾಜಸ್ಥಾನ ಯುವಕ; ಇಲ್ಲಿದೆ ವೈರಲ್ ವಿಡಿಯೋ
ಸುರೇಶ್ ಭಿಚಾರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 06, 2022 | 5:00 PM

viral video: ದೆಹಲಿ ಎನ್​​ಸಿಆರ್​ನಲ್ಲಿ ಪ್ರತಿ ದಿನ 10 ಕಿಲೋಮೀಟರ್ ಓಡುತ್ತಿದ್ದಂತಹ ಹುಡುಗನ ವಿಡಿಯೋ ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆತನ ಭಾರತೀಯ ಸೇನೆಗೆ ಸೇರಲಿರುವ ಉತ್ಸಾಹ ಮತ್ತು ಪ್ರೇರಣೆಯನ್ನು ಜನರು ಶ್ಲಾಘಿಸಿದ್ದರು. ಈಗ ಅಂತಹದ್ದೇ ಒಂದು ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅಲ್ಲಿ ರಾಜಸ್ಥಾನದ ವ್ಯಕ್ತಿಯೊಬ್ಬರು ಸಿಕಾರ್ ಪಟ್ಟಣದಿಂದ ಸರಿಸುಮಾರು 350 ಕಿಲೋಮೀಟರ್ ದೂರದಲ್ಲಿರುವ ನವದೆಹಲಿಗೆ ಓಡುತ್ತ ಬಂದಿದ್ದಾರೆ. ಈ ಯುವಕ ಹೀಗೆ ಅಷ್ಟೂ ದೂರದಿಂದ ಓಡಿ ಬರಲು ಕಾರಣ ಕೇಳಿದರೇ ನೀವು ನಿಜಕ್ಕೂ ಶಾಕ್ ಆಗುತ್ತಿರಿ. ಆ ವ್ಯಕ್ತಿ ಹೀಗೆ ಓಡಿ ಬರಲು ಕಾರಣ ಭಾರತೀಯ ಸೇನೆಗೆ ಸೇರಲು. ರಾಜಸ್ಥಾನ ಮೂಲದ ಸುರೇಶ್ ಭಿಚಾರ್ ಎನ್ನುವ ಯುವಕ ಸಿಕರ್ ಪ್ರದೇಶದಿಂದ ನವದೆಹಲಿಗೆ ಓಡಿ, ಒಟ್ಟು 50 ಗಂಟೆಗಳಲ್ಲಿ 350 ಕಿ.ಮೀ ದೂರವನ್ನು ಪೂರ್ಣಗೊಳಿಸಿದ್ದಾರೆ. ಭಾರತೀಯ ಸೇನೆಯ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವರು ಇಲ್ಲಿಯವರೆಗೆ ಓಡಿಬಂದಿರುವುದು ಕಾರಣವಾಗಿದೆ.

ಭಿಚಾರ್ ಹೆದ್ದಾರಿಯಲ್ಲಿ ಓಡುತ್ತಿರುವ ವಿಡಿಯೋ ಕ್ಲಿಪ್​ನ್ನು ಸುದ್ದಿ ಸಂಸ್ಥೆ ಎಎನ್​ಐ ಪೋಸ್ಟ್ ಮಾಡಿದ್ದು, ಇದೀಗ ಸಾಕಷ್ಟು ವೈರಲ್ ಆಗಿದೆ. 24 ವರ್ಷದ ಯುವಕ ನೇಮಕಾತಿ ಪರೀಕ್ಷೆಯನ್ನು ಮುಂದೂಡಿರುವ ಕುರಿತು ದೆಹಲಿಯಲ್ಲಿ ಸೇನಾ ಆಕಾಂಕ್ಷಿಗಳು ನಡೆಸುತ್ತಿದ್ದ ಪ್ರದರ್ಶನದಲ್ಲಿ ಸೇರಲು ಓಡಿಬಂದಿದ್ದಾರೆ. ಎಎನ್​ಐ ವರದಿಗಳ ಪ್ರಕಾರ, ನನಗೆ 24 ವರ್ಷ. ನಾನು ನಾಗೌರ್ ಜಿಲ್ಲೆಯಿಂದ (ರಾಜಸ್ಥಾನ) ಬಂದಿದ್ದೇನೆ. ನನಗೆ ಭಾರತೀಯ ಸೇನೆಗೆ ಸೇರುವ ಉತ್ಸಾಹವಿದೆ. 2 ವರ್ಷಗಳಿಂದ ನೇಮಕಾತಿ ಆಗುತ್ತಿಲ್ಲ. ನಾಗೌರ್, ಸಿಕರ್, ಜುಂಜುನು ಯುವಕರು ಮುದುಕರಾಗುತ್ತಿದ್ದಾರೆ. ಯುವಕರ ಉತ್ಸಾಹವನ್ನು ಹೆಚ್ಚಿಸಲು ಓಡಿ ದೆಹಲಿಗೆ ಬಂದಿದ್ದೇನೆ ಭಿಚಾರ್ ಹೇಳಿದ್ದಾರೆ. ತನ್ನ ಫಿಟ್‌ನೆಸ್ ಕಾಪಾಡಿಕೊಳ್ಳಲು ಮತ್ತು ಇತರ ಯುವಕರನ್ನು ಭಾರತೀಯ ಸೇನೆಗೆ ಸೇರಲು ಮತ್ತು ಅವರ ದೇಶಕ್ಕೆ ಸೇವೆ ಸಲ್ಲಿಸಲು ಪ್ರೇರೇಪಿಸಲು ನಾನು ದೂರದಿಂದ ಓಡಲು ಪ್ರಾರಂಭಿಸಿದ್ದೇನೆ ಎಂದು ಭಿಚಾರ್ ಹೇಳಿದರು. ಸೇನೆಯ ಮೇಲಿನ ಉತ್ಸಾಹವನ್ನು ಮುಂದುವರಿಸಲು ಅವರು ಪ್ರತಿದಿನ 5 ರಿಂದ 7 ಗಂಟೆಗಳ ಕಾಲ ಓಡುತ್ತಿದ್ದರು ಎಂದು ಅವರು ಹೇಳಿದರು.

ನಾನು ಬೆಳಿಗ್ಗೆ 4 ಗಂಟೆಗೆ ಓಟವನ್ನು ಪ್ರಾರಂಭಿಸುತ್ತಿದ್ದೆ. 11 ಗಂಟೆಗೆ ಪೆಟ್ರೋಲ್ ಪಂಪ್ ತಲುಪಿದ ನಂತರವೇ ನಿಲ್ಲಿಸಿದೆ. ಅಲ್ಲಿ ನಾನು ವಿಶ್ರಾಂತಿ ಪಡೆದೆ ಮತ್ತು ಹತ್ತಿರದ ಪ್ರದೇಶಗಳಲ್ಲಿನ ಸೇನಾ ಆಕಾಂಕ್ಷಿಗಳಿಂದ ಆಹಾರ ಸ್ವೀಕರಿಸಿದ್ದೇನೆ ಎಂದು ಸುರೇಶ್ ಹೇಳಿದರು. ಭಾರತೀಯ ಸೇನೆಗೆ ಸೇರುವುದು ಅವರ ಮುಖ್ಯ ಗುರಿಯಾಗಿದ್ದರೂ, ಭಿಚಾರ್ ಅವರು ಪ್ರಾದೇಶಿಕ ಸೇನೆಯ (ಟಿಎ) ಭಾಗವಾಗಲು ಆಶಿಸುತ್ತಿದ್ದಾರೆ. ತನ್ನ ಶಿಕ್ಷಣದ ವೆಚ್ಚವನ್ನು ಪೂರೈಸಲು, ಅವರ ಪೋಷಕರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಹಂಚಿಕೊಂಡಿದ್ದಾರೆ. ಸುರೇಶನ ಕಥೆಯು ವೈರಲ್ ಆಗಿದೆ. ಅನೇಕ ನೆಟಿಗರು ಸೈನ್ಯಕ್ಕೆ ಸೇರುವ ಆತನ ಉತ್ಸಾಹವನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:

ಹಣಕ್ಕಾಗಿ ಗುಟ್ಟಾಗಿ ವೀರ್ಯ ದಾನ ಮಾಡಿದ ಗಂಡ; ವಿಷಯ ತಿಳಿದು ಡೈವೋರ್ಸ್​ಗೆ ಪಟ್ಟು ಹಿಡಿದ ಹೆಂಡತಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ