ಶೋಕಿಗಾಗಿ ಕಳ್ಳತನಕ್ಕೆ ಇಳಿದು ಮೂರು ಅಂಗಡಿಯಲ್ಲೂ ವಿಫಲ; ಲಾಕರ್ ಓಪನ್ ಮಾಡಲು ಹರಸಾಹಸ, ಆರೋಪಿ ಅರೆಸ್ಟ್

ಖದೀಮರ ಗ್ಯಾಂಗ್ವೊಂದು ಇಂದಿರಾನಗರದಿಂದ ಕದ್ದ ಬೈಕ್ನಲ್ಲಿ ಬಂದು ದೊಡ್ಡ ಏರಿಯಾದಲ್ಲಿ ದೊಡ್ಡ ಶಾಪ್ಗೆ ಎಂಟ್ರಿ ಕೊಟ್ಟು ಲಕ್ಷ ಲಕ್ಷ ಹಣ ಲೂಟಿ ಮಾಡುವ ಕನಸು ಕಂಡಿದ್ದರು. ಆದ್ರೆ ಒಂದು ಗಂಟೆಗಳ ಕಾಲ ಎಷ್ಟೇ ಹರಸಾಹಸ ಮಾಡಿದರೂ ಲಾಕರ್ ತೆರಯಲಾಗದೆ ಪರದಾಡಿದ್ದಾರೆ.

ಶೋಕಿಗಾಗಿ ಕಳ್ಳತನಕ್ಕೆ ಇಳಿದು ಮೂರು ಅಂಗಡಿಯಲ್ಲೂ ವಿಫಲ; ಲಾಕರ್ ಓಪನ್ ಮಾಡಲು ಹರಸಾಹಸ, ಆರೋಪಿ ಅರೆಸ್ಟ್
ಶೋಕಿಗಾಗಿ ಕಳ್ಳತನಕ್ಕೆ ಇಳಿದು ಮೂರು ಅಂಗಡಿಯಲ್ಲೂ ವಿಫಲ; ಲಾಕರ್ ಓಪನ್ ಮಾಡಲು ಹರಸಾಹಸ, ಆರೋಪಿ ಅರೆಸ್ಟ್
Follow us
| Updated By: ಆಯೇಷಾ ಬಾನು

Updated on: Apr 05, 2022 | 9:44 AM

ಬೆಂಗಳೂರು: ಮಾಜಿ ಸಿಎಂ ಮನೆ ಪಕ್ಕದಲ್ಲೇ ಕಳ್ಳತನ ಯತ್ನ ನಡೆದಿದ್ದು ಲಾಕರ್ನಲ್ಲಿದ್ದ ಲಕ್ಷ ಲಕ್ಷ ಹಣ ಕಳ್ಳತನಕ್ಕೆ ಯತ್ನಿಸಿ ಲಾಕರ್ ಓಪನ್ ಮಾಡಲಾಗದೆ ಕಳ್ಳರು ಹರಸಾಹಸಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೀಸೆ ಚಿಗುರುವ ವಯಸ್ಸಿನ ಕದೀಮರು ಲಾಕರ್ ತೆರೆಯಲು ಪರದಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಖದೀಮರ ಗ್ಯಾಂಗ್ವೊಂದು ಇಂದಿರಾನಗರದಿಂದ ಕದ್ದ ಬೈಕ್ನಲ್ಲಿ ಬಂದು ದೊಡ್ಡ ಏರಿಯಾದಲ್ಲಿ ದೊಡ್ಡ ಶಾಪ್ಗೆ ಎಂಟ್ರಿ ಕೊಟ್ಟು ಲಕ್ಷ ಲಕ್ಷ ಹಣ ಲೂಟಿ ಮಾಡುವ ಕನಸು ಕಂಡಿದ್ದರು. ಆದ್ರೆ ಒಂದು ಗಂಟೆಗಳ ಕಾಲ ಎಷ್ಟೇ ಹರಸಾಹಸ ಮಾಡಿದರೂ ಲಾಕರ್ ತೆರಯಲಾಗದೆ ಪರದಾಡಿದ್ದಾರೆ. ಒಂದೇ ರಾತ್ರಿ ಸರಣಿಗಳ್ಳತನ ಯತ್ನ ಮಾಡಿದ್ದಾರೆ. ಬೆಂಗಳೂರಿನ ಸಂಜಯ್ ನಗರದಲ್ಲಿ ಒಂದಲ್ಲಾ.. ಎರಡಲ್ಲಾ.. ಸತತ ಮೂರು ಅಂಗಡಿಗಳನ್ನು ದೋಚುವ ಯತ್ನ ಮಾಡಿದ ಖದೀಮರು ಕೈಗೆ ಚಿಕ್ಕ ಪುಡಿಕಾಸು, ವಸ್ತುಗಳನ್ನು ಕದ್ದಿದ್ದಾರೆ.

ಮೊದಲಿಗೆ ಸಂಜಯ್ ನಗರದ ಎರಡು ಅಂಗಡಿಯಲ್ಲಿ ನಡೆಸಿದ ಕಳ್ಳತನ ಪ್ರಯತ್ನ ವಿಫಲವಾಗಿದೆ. ಆದ್ರೆ ಆರ್ ಎಂವಿ 2ನೇ ಸ್ಟೇಜ್ನ ಅಂಗಡಿ ಓಪನ್ ಆಗಿದ್ದು ಲಾಕರ್ ಓಪನ್ ಮಾಡಲು ಆಗದೇ ಈ ಕಳ್ಳರ ಗ್ಯಾಂಗ್ ತಡಕಾಡಿದೆ. ಮಿಡ್ ನೈಟ್ ನಲ್ಲಿ ಕಳ್ಳರ ಪರದಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲವು ನಿಮಿಷಗಳ ಕಾಲ ತಡಕಾಡಿ ಕೊನೆಗೆ ಚಿಲ್ಲರೆ ಇದ್ದ ಬಾಕ್ಸ್ ಹಾಗೂ ಚಾಕ್ಲೆಟ್ ಕದ್ದಿದ್ದಾರೆ. ಚಾಕ್ಲೆಟ್ ತಿನ್ನುತ ಧನಸಹಾಯದ ಚಿಕ್ಕ ಬಾಕ್ಸ್ ಕದ್ದು ಹೋಗ ಕಳ್ಳರ ಗ್ಯಾಂಗ್ನ ದೃಶ್ಯಗಳು ಸೆರೆಯಾಗಿವೆ. ಮರುದಿನ ಅಂಗಡಿ ಮಾಲೀಕ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸದ್ಯ ದೂರು ದಾಖಲಾದ ನಂತರ ತನಿಖೆ ಕೈಗೊಂಡ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ರೋಹಿತ್ ಗಿರಿ (21) ಬಂಧಿತ ಆರೋಪಿ. ಈ ಹಿಂದೆ ಜೈಲು ಸೇರಿ ಬಂದರು ಬುದ್ಧಿ ಕಲಿಯದ ಕಿಲಾಡಿ. ಸಿಗರೇಟಿನ ಶೋಕಿಗಾಗಿ ಅಂಗಡಿಗೆ ಕನ್ನ ಹಾಕಲು ಹೋಗಿ ಪೊಲೀಸರ ಕೈಗಿ ಸಿಕ್ಕಿಬಿದ್ದಿದ್ದಾನೆ. ಈತನ ಜೊತೆ ಸಾಥ್ ನೀಡಿದ್ದ ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: ದೇಹದಲ್ಲಿರುವ ನಂಜಿನಾಂಶವನ್ನು ಹೊರಹಾಕಲು ಈ ಆಹಾರವನ್ನು ಸೇವಿಸಿ

ಚಕಾ ಚಕ್ ಹಾಡಿಗೆ ಪುಟ್ಟ ಪೋರಿಯ ಮುದ್ದಾದ ಡ್ಯಾನ್ಸ್​; ಕ್ಯೂಟಿ, ಹಾಟಿ, ಸ್ವೀಟಿ ಎಂದ ನೆಟ್ಟಿಗರು

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ