ಚಕಾ ಚಕ್ ಹಾಡಿಗೆ ಪುಟ್ಟ ಪೋರಿಯ ಮುದ್ದಾದ ಡ್ಯಾನ್ಸ್​; ಕ್ಯೂಟಿ, ಹಾಟಿ, ಸ್ವೀಟಿ ಎಂದ ನೆಟ್ಟಿಗರು

ಚಕಾ ಚಕ್ ಹಾಡಿಗೆ ಪುಟ್ಟ ಪೋರಿಯ ಮುದ್ದಾದ ಡ್ಯಾನ್ಸ್​; ಕ್ಯೂಟಿ, ಹಾಟಿ, ಸ್ವೀಟಿ ಎಂದ ನೆಟ್ಟಿಗರು
ಡ್ಯಾನ್ಸ್​ ಮಾಡುತ್ತಿರುವ ಪುಟ್ಟ ಹುಡುಗಿ

ಹುಡುಗಿಯ ನೃತ್ಯ ಮತ್ತು ಅಭಿನಯಕ್ಕಾಗೆ ಜನರು ಪ್ರಶಂಸಿಸಿದ್ದು, ಕಾಮೆಂಟ್‌ಗಳ ವಿಭಾದಲ್ಲಿ ಬೆಂಕಿ ಮತ್ತು ಹೃದಯದ ಎಮೋಜಿಗಳಿಂದ ತುಂಬಿ ಹೋಗಿದೆ. ಅವಳು ತುಂಬಾ ಮುದ್ದಾಗಿದ್ದಾಳೆ ಎಂದು ಬಳಕೆದಾರರು ಕಾಮೆಂಟ್ ಕೂಡ ಮಾಡಿದ್ದಾರೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 05, 2022 | 9:23 AM

ಕಳೆದ ವರ್ಷ ಅತ್ರಾಂಗಿ ರೇ ಚಿತ್ರದ ಚಕಾ ಚಕ್ (Chaka Chack) ಹಾಡಿಗೆ ಜನರು ತಮ್ಮ ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ಹಾಡಿನ ಹುಕ್ ಸ್ಟೆಪ್‌ಗೆ ಡ್ಯಾನ್ಸ್ ಮಾಡಿದ ಸಾಕಷ್ಟು ವಿಡಿಯೋಗಳನ್ನು ನೀವು ನೋಡಿರಬಹುದು. ಈಗ ಅದೇ ಹಾಡಿಗೆ ಮುದ್ದಾದ ಪುಟ್ಟ ಹುಡುಗಿಯೊಬ್ಬಳು ಮಸ್ತ್ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೀವು ಈ ವಿಡಿಯೋ ನೋಡಿಲ್ಲ ಅಂದ್ರೇ ಮಿಸ್ ಮಾಡದೇ ಒಮ್ಮೆ ನೋಡಿ ಬಿಡಿ. ಈ ವಿಡಿಯೋವನ್ನು ಮಾರ್ಚ್ 16 ರಂದು ಇನ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದುವರೆಗೆ 1.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆಕೆಯ ಡ್ಯಾನ್ಸ್​  ಕ್ಯೂಟ್​ ಕ್ಯೂಟ್​ ಆಗಿದ್ದು ಖಂಡಿತವಾಗಿಯೂ ಇಷ್ಟವಾಗುತ್ತೆ. ವಿಡಿಯೋದ ಹಿನ್ನೆಲೆಯಲ್ಲಿ ಟಿವಿಯಲ್ಲಿ ಹಾಡು ಪ್ಲೇ ಆಗುತ್ತಿದ್ದಂತೆ ಪುಟ್ಟ ಹುಡುಗಿ ಸಾರಾ ಅಲಿ ಖಾನ್ ತರ ಹೆಜ್ಜೆಗಳನ್ನು ಅನುಕರಿಸುತ್ತಾರೆ. ಬಳೆಗಳನ್ನು ಧರಿಸಿ, ಹುಡುಗಿ ಎಲ್ಲಾ ಸ್ಟೇಪ್ಸ್​ ಮತ್ತು ಅಭಿವ್ಯಕ್ತಿಯನ್ನು ನಕಲಿಸುತ್ತಿದ್ದರೆ, ಅದು ನೋಡಲು ತುಂಬಾ ಮುದ್ದಾಗಿದೆ. ಅವ್ಯನ್ನಕೆನೀಶಾ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಇದನ್ನು ಪೋಸ್ಟ್ ಮಾಡಲಾಗಿದ್ದು, ಅವಳ ಅಭಿವ್ಯಕ್ತಿಯನ್ನು ನೋಡಲು ವಿಡಿಯೋವನ್ನು ಕೊನೆಯವರೆಗೂ ನೋಡಿ ಎಂದು ಬರೆದುಕೊಂಡಿದ್ದಾರೆ.

ಹುಡುಗಿಯ ನೃತ್ಯ ಮತ್ತು ಅಭಿನಯಕ್ಕಾಗೆ ಜನರು ಪ್ರಶಂಸಿಸಿದ್ದು, ಕಾಮೆಂಟ್‌ಗಳ ವಿಭಾದಲ್ಲಿ ಬೆಂಕಿ ಮತ್ತು ಹೃದಯದ ಎಮೋಜಿಗಳಿಂದ ತುಂಬಿ ಹೋಗಿದೆ. ಅವಳು ತುಂಬಾ ಮುದ್ದಾಗಿದ್ದಾಳೆ ಎಂದು ಬಳಕೆದಾರರು ಕಾಮೆಂಟ್ ಕೂಡ ಮಾಡಿದ್ದಾರೆ. ಕ್ಯೂಟಿ, ಹಾಟಿ, ಸ್ವೀಟಿ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ. ಸಾರಾ ಅಲಿ ಖಾನ್, ಧನುಷ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ಅತ್ರಾಂಗಿ ರೇ ಕಳೆದ ವರ್ಷ ಡಿಸೆಂಬರ್ 24 ರಂದು ಬಿಡುಗಡೆಯಾಗಿತ್ತು. ಚಿತ್ರದ ಹಾಡುಗಳು ಸಾಕಷ್ಟು ಹಿಟ್ ಆಗಿದ್ದು, ಚಿತ್ರ ಮಿಶ್ರ ವಿಮರ್ಶೆಗಳನ್ನು ಪಡೆಯಿತು.

ಇದನ್ನೂ ಓದಿ:

ತನ್ನ ಕಿರಿಯ ಸಹೋದರಿಯನ್ನು ಶಾಲೆಗೆ ಕರೆದುಕೊಂಡು ಹೋಗಿ ಆರೈಕೆ ಮಾಡಿದ 10 ವರ್ಷದ ಮಣಿಪುರ ಬಾಲಕಿ; ಇಲ್ಲಿದೆ ನೋಡಿ ಹೃದಯಸ್ಪರ್ಶಿ ಫೋಟೋ

Viral Photo: ರಾಜಸ್ಥಾನ ಹಿಂಸಾಚಾರ; ಸುಡುವ ಕಟ್ಟಡದಿಂದ ಜೀವದ ಹಂಗು ತೊರೆದು ಮಗುವನ್ನು ಕಾಪಾಡಿದ ಪೊಲೀಸ್

Follow us on

Related Stories

Most Read Stories

Click on your DTH Provider to Add TV9 Kannada