ತನ್ನ ಕಿರಿಯ ಸಹೋದರಿಯನ್ನು ಶಾಲೆಗೆ ಕರೆದುಕೊಂಡು ಹೋಗಿ ಆರೈಕೆ ಮಾಡಿದ 10 ವರ್ಷದ ಮಣಿಪುರ ಬಾಲಕಿ; ಇಲ್ಲಿದೆ ನೋಡಿ ಹೃದಯಸ್ಪರ್ಶಿ ಫೋಟೋ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಫೋಟೋವನ್ನು ಹಂಚಿಕೊಂಡಿದ್ದು ಈ ಶಕ್ತಿಯುತ ಚಿತ್ರವು ನಮ್ಮ ಮಕ್ಕಳ, ವಿಶೇಷವಾಗಿ ಹುಡುಗಿಯರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ.
ಸ್ಪೂರ್ತಿದಾಯಕ ಜೀವನಗಳು ಮತ್ತು ಕಾರ್ಯಗಳು ಎಂದಿಗೂ ಗುರುತಿಸಲ್ಪಡದಿರುವ ಸ್ಥಳವೆಂದರೆ ಇಂಟರ್ನೆಟ್ ಎಂದು ಹೇಳಬಹುದು. ಈಗ ಇಂತಹದೇ ಒಂದು ಸ್ಪೂರ್ತಿದಾಯಕ ಕಥೆಯೊಂದನ್ನು ತಂದಿದೆ. ಬಾಲಕಿ ತಮ್ಮ ಕಿರಿಯ ಸಹೋದರಿ (Younger Sister) ಯನ್ನು ನೋಡಿಕೊಳ್ಳುತ್ತಿರುವ ಪರಿ ಅತ್ಯಂತ ಹೃದಯಸ್ಪರ್ಶಿ ಸಂಗತಿಯಾಗಿದೆ. ಏಕೆಂದರೆ ಇದು ಅಂತಹ ಚಿಕ್ಕ ವಯಸ್ಸಿನಲ್ಲಿ ಆಕೆಯ ಸಹಾನುಭೂತಿ ಮತ್ತು ಜವಾಬ್ದಾರಿ ಪ್ರಜ್ಞೆಯನ್ನು ತೋರಿಸುತ್ತದೆ. ಮಣಿಪುರದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ತೊಂಗಮ್ ಬಿಸ್ವಜಿತ್ ಸಿಂಗ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಈ ಫೋಟೋವು ಈಗ ಸಖತ್ ವೈರಲ್ ಆಗಿದ್ದು, ಸಾಕಷ್ಟು ಜನರ ಹೃದಯ ಸ್ಪರ್ಶಿಸಿದೆ. ಫೋಟೋದಲ್ಲಿ 10 ವರ್ಷದ ಬಾಲಕಿ ಶಾಲೆಗೆ ಹೋಗಿದ್ದು, ಜೊತೆಗೆ ಏನು ಅರಿಯದ ಈಗಷ್ಟೇ ಅಂಬೆಗಾಲಿಡುತ್ತಿರುವ ತನ್ನ ತಂಗಿಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ಶಾಲೆಯಲ್ಲೇ ಆರೈಕೆ ಮಾಡಿದ್ದಾಳೆ. ಈ ಫೋಟೋ ನೋಡಿದ ಬಳಿಕ ನಿಮ್ಮ ಹೃದಯವು ಕರಗಿ ಹೋಗುತ್ತದೆ. ಎಲ್ಲೆಡೆ ಬಾಲಕಿಯ ಬದ್ಧತೆಯನ್ನು ಶ್ಲಾಘಿಸಲಾಗುತ್ತಿದೆ.
Her dedication for education is what left me amazed!
This 10-year-old girl named Meiningsinliu Pamei from Tamenglong, Manipur attends school babysitting her sister, as her parents were out for farming & studies while keeping her younger sister in her lap. pic.twitter.com/OUIwQ6fUQR
— Th.Biswajit Singh (@BiswajitThongam) April 2, 2022
ಏಪ್ರಿಲ್ 2 ರಂದು ತೊಂಗಂ ಬಿಸ್ವಜಿತ್ ಸಿಂಗ್ ಫೋಟೋವನ್ನು ಪೋಸ್ಟ್ ಮಾಡಿದ್ದು, ಇದುವರೆಗೆ 15,000 ಲೈಕ್‌ಗಳನ್ನು ಪಡೆದುಕೊಂಡಿದೆ. ಶಿಕ್ಷಣಕ್ಕಾಗಿ ಅವಳ ಸಮರ್ಪಣೆ ನನ್ನನ್ನು ಬೆರಗುಗೊಳಿಸಿದೆ! ಮಣಿಪುರದ ತಮೆಂಗ್‌ಲಾಂಗ್‌ನ ಈ 10 ವರ್ಷದ ಮೈನಿಂಗ್‌ಸಿನ್ಲಿಯು ಪಮೇಯ್ ಎಂಬ ಬಾಲಕಿ ತನ್ನ ಸಹೋದರಿಯನ್ನು ಶಿಶುಪಾಲನಾ ಕೇಂದ್ರದಲ್ಲಿ ಶಾಲೆಗೆ ಹೋಗುತ್ತಾಳೆ. ಏಕೆಂದರೆ ಆಕೆಯ ಪೋಷಕರು ಕೃಷಿ ಕೆಲಸಕ್ಕೆ ಹೋಗುತ್ತಾರೆ. ಹಾಗಾಗಿ ಅವಳನ್ನು ತನ್ನ 10 ವರ್ಷದ ಬಾಲಕಿಯ ಮಡಿಲಲ್ಲಿ ಬಿಟ್ಟು ಹೋಗುತ್ತಾರೆ ಎಂದು ಸಚಿವರು ಫೋಟೋ ಜೊತೆಗೆ ಟ್ವೀಟ್ ಮಾಡಿದ್ದಾರೆ.
ಅಂತಹ ಸಮರ್ಪಿತ ಮಕ್ಕಳು ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಾರೆ ಆದರೆ ಈ ರಾಷ್ಟ್ರದ ಶಕ್ತಿಗೆ ಕಾರಣವಾಗಿರುವ ಅಂತಹ ಬಲವಾದ ಮಕ್ಕಳನ್ನು ನಮಗೆ ನೀಡುತ್ತಲೇ ಇರುವ ಈ ರಾಷ್ಟ್ರದ ಬಗ್ಗೆ ಹೆಮ್ಮೆ ಆಗುತ್ತದೆ ಎಂದು ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇದು ಸಂಪೂರ್ಣವಾಗಿ ಹೃತ್ಪೂರ್ವಕವಾಗಿದೆ ಮತ್ತು ಈ ಚಿಕ್ಕ ವಯಸ್ಸಿನಲ್ಲಿ ಅವಳ ಸಮರ್ಪಣೆ ಶ್ಲಾಘನೀಯವಾಗಿದೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ಟ್ವೀಟ್‌ನಲ್ಲಿ ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ಗಮನಿಸಿದ ನಂತರ ಅವರು ಹುಡುಗಿಯ ಕುಟುಂಬವನ್ನು ಪತ್ತೆಹಚ್ಚಿ ಅವಳನ್ನು ಇಂಫಾಲ್‌ಗೆ ಕರೆತರುವಂತೆ ಹೇಳಿದರು. ಪದವಿ ಮುಗಿಯುವವರೆಗೆ ಅವರ ವಿದ್ಯಾಭ್ಯಾಸವನ್ನು ತಾವೇ ಖುದ್ದಾಗಿ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಫೋಟೋವನ್ನು ಹಂಚಿಕೊಂಡಿದ್ದು ಈ ಶಕ್ತಿಯುತ ಚಿತ್ರವು ನಮ್ಮ ಮಕ್ಕಳ, ವಿಶೇಷವಾಗಿ ಹುಡುಗಿಯರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಶಿಕ್ಷಣಕ್ಕಾಗಿ ತನ್ನ ಸಮರ್ಪಣೆ ಮತ್ತು ತನಗಾಗಿ ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಸಂಪೂರ್ಣ ನಿರ್ಣಯಕ್ಕಾಗಿ ಬಾಲಕಿ ಮೈನಿಂಗ್‌ಸಿನ್ಲಿಯು ಪಮೇಯ್ ಸಂಪೂರ್ಣವಾಗಿ ವಿಸ್ಮಯಗೊಳಿಸಿದ್ದಾಳೆ ಅವಳಿಗೆ ನನ್ನ ಆಶೀರ್ವಾದಗಳು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:
Viral Photo: ರಾಜಸ್ಥಾನ ಹಿಂಸಾಚಾರ; ಸುಡುವ ಕಟ್ಟಡದಿಂದ ಜೀವದ ಹಂಗು ತೊರೆದು ಮಗುವನ್ನು ಕಾಪಾಡಿದ ಪೊಲೀಸ್
Viral Video : ಸಖತ್ ವೈರಲ್ ಆಗುತ್ತಿದೆ ಮದುಮಗಳ ಲೆಜಾ ಲೆಜಾ ಡ್ಯಾನ್ಸ್!