AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ರಾಜಸ್ಥಾನ ಹಿಂಸಾಚಾರ; ಸುಡುವ ಕಟ್ಟಡದಿಂದ ಜೀವದ ಹಂಗು ತೊರೆದು ಮಗುವನ್ನು ಕಾಪಾಡಿದ ಪೊಲೀಸ್

ರಾಜಸ್ಥಾನದ ಕರೌಲಿ ಪ್ರದೇಶದಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಈ ಫೋಟೋವನ್ನು ಸೆರೆಹಿಡಿಯಲಾಗಿದೆ. ಗಲಭೆಕೋರರು ಬೆಂಕಿ ಹಚ್ಚಿದ ಸುಡುವ ಕಟ್ಟಡಗಳ ನಡುವೆ ಸಿಲುಕಿದ್ದ ಮಗುವನ್ನು ಪೊಲೀಸ್ ಕಾನ್​ಸ್ಟೆಬಲ್ ರಕ್ಷಿಸಿದ್ದಾರೆ.

Viral Photo: ರಾಜಸ್ಥಾನ ಹಿಂಸಾಚಾರ; ಸುಡುವ ಕಟ್ಟಡದಿಂದ ಜೀವದ ಹಂಗು ತೊರೆದು ಮಗುವನ್ನು ಕಾಪಾಡಿದ ಪೊಲೀಸ್
ಮಗುವನ್ನು ರಕ್ಷಿಸುತ್ತಿರುವ ಪೊಲೀಸ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 04, 2022 | 7:36 PM

ಜೈಪುರ: ಒಂದು ಫೋಟೋ ಸಾವಿರ ಪದಗಳನ್ನು ಹೇಳುತ್ತದೆ ಎಂಬ ಮಾತಿದೆ. ಅದು ಅಕ್ಷರಶಃ ಸತ್ಯವಾದ ಮಾತು. ರಾಜಸ್ಥಾನದ ಹಿಂಸಾಚಾರ (Rajasthan Violence) ಪೀಡಿತ ಕರೌಲಿಯ ಫೋಟೋವೊಂದು ವೈರಲ್ ಆಗಿದ್ದು, ರಾಜಸ್ಥಾನದ ಪೊಲೀಸ್ ಕಾನ್​ಸ್ಟೆಬಲ್ ಒಬ್ಬರು ಜೀವದ ಹಂಗು ತೊರೆದು ಗಲಭೆಕೋರರು ಬೆಂಕಿ ಹಚ್ಚಿದ ಸುಡುವ ಕಟ್ಟಡಗಳ ಹಿಂದೆ ಕಿರಿದಾದ ಕಾಲುದಾರಿಗಳ ಮೂಲಕ ಓಡುತ್ತಿದ್ದಾಗ ಅಳುತ್ತಾ ನಿಂತಿದ್ದ ಮಗುವನ್ನು ರಕ್ಷಿಸಿದ ವಿಡಿಯೋಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಶೇರ್ ಮಾಡಲಾಗಿದ್ದು, ಸುಕೀರ್ತಿ ಮಾಧವ್ ಮಿಶ್ರಾ “ಅಮೂಲ್ಯ ಜೀವವನ್ನು ಉಳಿಸಿದ್ದಕ್ಕಾಗಿ ರಾಜಸ್ಥಾನ ಪೊಲೀಸರ ಕಾನ್‌ಸ್ಟೆಬಲ್ ನೇತ್ರೇಶ್ ಶರ್ಮಾ ಅವರಿಗೆ ತುಂಬಾ ಹೆಮ್ಮೆ ಇದೆ. ಈ ಫೋಟೋ ಸಾವಿರ ಪದಗಳಿಗೆ ಯೋಗ್ಯವಾಗಿದೆ” ಎಂದು ಹೇಳಿದ್ದಾರೆ.

ಶನಿವಾರ ರಾಜಸ್ಥಾನದ ಕರೌಲಿ ಪ್ರದೇಶದಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಈ ಫೋಟೋವನ್ನು ಸೆರೆಹಿಡಿಯಲಾಗಿದೆ ಎಂದು ವರದಿಯಾಗಿದೆ. ಏಪ್ರಿಲ್ 2ರಂದು ರಾಜಸ್ಥಾನದ ಕರೌಲಿಯಲ್ಲಿ ಧಾರ್ಮಿಕ ಮೆರವಣಿಗೆಯ ಭಾಗವಾಗಿ ತೆಗೆದ ಮೋಟಾರ್‌ಸೈಕಲ್ ರ್ಯಾಲಿಯ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದರಿಂದ ನಾಲ್ವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 42 ಜನರು ಗಾಯಗೊಂಡಿದ್ದಾರೆ.

ಹಿಂದೂಗಳ ಹೊಸ ವರ್ಷದ ಮೊದಲ ದಿನವಾದ ‘ನವ ಸಂವತ್ಸರ’ ಸಂದರ್ಭದಲ್ಲಿ ರ್ಯಾಲಿಯನ್ನು ನಡೆಸಲಾಗಿತ್ತು. ಅದರ ಪರಿಣಾಮವಾಗಿ ಉಂಟಾದ ಹಿಂಸಾಚಾರವು ಗಲಭೆಕೋರರಿಂದ ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲು ಪ್ರೇರಣೆ ನೀಡಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 30 ಜನರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ ಪಿಟಿಐಗೆ ತಿಳಿಸಿದ್ದಾರೆ.

ರಾಜಧಾನಿ ಜೈಪುರದಿಂದ 170 ಕಿಮೀ ದೂರದಲ್ಲಿರುವ ಕರೌಲಿಯಲ್ಲಿ ಕೋಮು ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇಂದು ರಾತ್ರಿಯವರೆಗೆ ಕರ್ಫ್ಯೂ ವಿಧಿಸಲಾಗಿದೆ. ಏಪ್ರಿಲ್ 3ರ ಮಧ್ಯರಾತ್ರಿಯವರೆಗೆ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: Viral Video: ದೇವಸ್ಥಾನದ ಹೊರಗೆ ಬೆಂಕಿ ಹೊತ್ತಿಕೊಂಡು ಹೊಸ ರಾಯಲ್ ಎನ್​ಫೀಲ್ಡ್​ ಬೈಕ್​ ಸ್ಫೋಟ

Viral Photo: ಪೂಜೆ ವೇಳೆ ಅಮ್ಮ ಮಾಡಿದ ಆ ಒಂದು ಕೆಲಸದಿಂದ ಮುಜುಗರಕ್ಕೀಡಾದ ಮಗ; ಫೋಟೋ ವೈರಲ್