Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid XE Variant: ಭಾರತಕ್ಕೂ ಕಾಲಿಟ್ಟ ಹೊಸ ಕೊವಿಡ್ ರೂಪಾಂತರಿ; ಮುಂಬೈನಲ್ಲಿ ಮೊದಲ XE ವೈರಸ್ ಪತ್ತೆ

ಇಂಗ್ಲೆಂಡ್​​ನಲ್ಲಿ ಕೊರೊನಾವೈರಸ್ ಸೋಂಕಿನ ಹೊಸ ರೂಪಾಂತರಿ ಎಕ್ಸ್​​ಇ ಪತ್ತೆಯಾಗಿತ್ತು. ಆ ಅಪಾಯಕಾರಿ ಕೊವಿಡ್ ರೂಪಾಂತರಿ ವೈರಸ್ ಭಾರತದಲ್ಲೂ ಪತ್ತೆಯಾಗಿದ್ದು, ಮುಂಬೈನಲ್ಲಿ ಮೊದಲ ಸೋಂಕು ದೃಢಪಟ್ಟಿದೆ.

Covid XE Variant: ಭಾರತಕ್ಕೂ ಕಾಲಿಟ್ಟ ಹೊಸ ಕೊವಿಡ್ ರೂಪಾಂತರಿ; ಮುಂಬೈನಲ್ಲಿ ಮೊದಲ XE ವೈರಸ್ ಪತ್ತೆ
ಕೊವಿಡ್ ರೂಪಾಂತರಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Apr 06, 2022 | 6:03 PM

ಮುಂಬೈ: ಇಂಗ್ಲೆಂಡ್​ನಲ್ಲಿ ಪತ್ತೆಯಾಗಿರುವ ಕೊವಿಡ್ ರೂಪಾಂತರಿ ಎಕ್ಸ್​​ಇ (Covid Variant XE) ಇಡೀ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿತ್ತು. ಇದೀಗ ಆ ಅಪಾಯಕಾರಿ ಕೊವಿಡ್ ರೂಪಾಂತರಿ ವೈರಸ್ ಭಾರತದಲ್ಲೂ ಪತ್ತೆಯಾಗುವ ಮೂಲಕ ದೇಶಾದ್ಯಂತ ಎಚ್ಚರಿಕೆ ಗಂಟೆ ಬಾರಿಸಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಮೊದಲ ಹೊಸ ಕೊವಿಡ್ ರೂಪಾಂತರಿ ಎಕ್ಸ್​ಇ ಪತ್ತೆಯಾಗಿದೆ. 376 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಮಾದರಿಗಳಲ್ಲಿ ಒಂದು XE ರೂಪಾಂತರಿ ದೃಢಪಟ್ಟಿದೆ.

ಇಂಗ್ಲೆಂಡ್​​ನಲ್ಲಿ ಕೊರೊನಾವೈರಸ್ ಸೋಂಕಿನ ಹೊಸ ರೂಪಾಂತರಿ ಪತ್ತೆಯಾಗಿತ್ತು. ಈ ಹೊಸ ರೂಪಾಂತರಿಯು ಒಮಿಕ್ರಾನ್ ತಳಿಯ ಬಿಎ.2 ಉಪ ತಳಿಗಿಂತಲೂ ಶೇ. 10ರಷ್ಟು ಹೆಚ್ಚು ಹರಡುವಿಕೆಯನ್ನು ಹೊಂದಿದೆ. ಎಲ್ಲ ಕೋವಿಡ್ 19 ರೂಪಾಂತರಗಳಲ್ಲಿಯೂ ಒಮಿಕ್ರಾನ್‌ನ ಬಿಎ.2 ಅತ್ಯಂತ ಹೆಚ್ಚು ಪ್ರಸರಣ ಹೊಂದುವ ಸೋಂಕು ಎಂದು ಈವರೆಗೂ ನಂಬಲಾಗಿತ್ತು. ಆದರೆ, ಈ ಹೊಸ ರೂಪಾಂತರಿ ಒಮಿಕ್ರಾನ್​ಗಿಂತಲೂ ವ್ಯಾಪಕವಾಗಿ ಹರಡಲಿದೆ ಎನ್ನಲಾಗಿದೆ. ಈ ರೂಪಾಂತರಿ ಈಗ ಮುಂಬೈಗೆ ಕಾಲಿಟ್ಟಿದೆ. ಭಾರತದೊಳಗೆ ಯಾವ ರೋಗಿಯಿಂದ ಈ ರೂಪಾಂತರಿ ವೈರಸ್ ಕಾಣಿಸಿಕೊಂಡಿದೆ, ಯಾವ ದೇಶದಿಂದ ಬಂದ ವ್ಯಕ್ತಿಯಿಂದ ಈ ವೈರಸ್ ಬಂದಿದೆ, ಆ ರೋಗಿಯ ಟ್ರಾವೆಲ್ ಹಿಸ್ಟರಿ ಮುಂತಾದವುಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಒಮಿಕ್ರಾನ್ ತಳಿಯ ಬಿಎ.1 ಮತ್ತು ಬಿಎ.2 ಉಪತಳಿಗಳ ರೂಪಾಂತರವನ್ನು ಗುರುತಿಸಲಾಗಿದ್ದು, ಇದಕ್ಕೆ ಎಕ್ಸ್‌ಇ ವೇರಿಯಂಟ್ (XE Variant) ಎಂದು ಹೆಸರಿಡಲಾಗಿದೆ. ಇದು ‘ಮರು ಸಂಯೋಜಿತ’ ಎಂದು ಉಲ್ಲೇಖಿಸಲಾಗಿದೆ. ಎಕ್ಸ್‌ಇ ರೂಪಾಂತರಿಯು BA.2 ತಳಿಗಿಂತಲೂ ಶೇ 9.8ರಷ್ಟು ಹೆಚ್ಚು ಹರಡುವಿಕೆಯನ್ನು ಹೊಂದಿದೆ. ಕೆಲವು ದೇಶಗಳಲ್ಲಿ ಕೊವಿಡ್-19 ಕಡಿಮೆಯಾಗಲು ಪ್ರಾರಂಭಿಸಿದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ (WHO) ಒಮಿಕ್ರಾನ್‌ನ ಹೊಸ ರೂಪಾಂತರಿಯಾದ ‘XE’ ಆತಂಕ ಮೂಡಿಸಿದೆ. ಇದು ಇದುವರೆಗಿನ ಎಲ್ಲ ಕೊರೊನಾವೈರಸ್‌ಗಿಂತ ಹೆಚ್ಚು ವ್ಯಾಪಕವಾಗಿ ಹರಡುತ್ತದೆ. ಒಮಿಕ್ರಾನ್‌ನ BA.2 ಉಪ-ವ್ಯತ್ಯಯವು ವಿಶೇಷವಾಗಿ ಅಮೆರಿಕಾ ಮತ್ತು ಇಂಗ್ಲೆಂಡ್​ನಂತಹ ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಈ ಎರಡು ರಾಷ್ಟ್ರಗಳ ಹೊರತಾಗಿ ಚೀನಾದಲ್ಲಿ ಕೂಡ ಕೊವಿಡ್ ಪ್ರಕರಣಗಳ ಉಲ್ಬಣವಾಗುತ್ತಿದೆ. ಮಾರ್ಚ್‌ನಲ್ಲಿ ಮಾತ್ರ ಭಾರತದಲ್ಲಿ 1.4 ಲಕ್ಷ ಕೊವಿಡ್ ಪ್ರಕರಣಗಳನ್ನು ಕಂಡಿತು. ಅವುಗಳಲ್ಲಿ ಹೆಚ್ಚಿನವು ಶಾಂಘೈ ಮತ್ತು ಜಿಲಿನ್ ಪ್ರದೇಶಗಳಲ್ಲಿ ಕಂಡುಬಂದಿವೆ.

ಈ ಹೊಸ ಕೊವಿಡ್ ರೂಪಾಂತರವು ಮರುಸಂಯೋಜಿತ ರೂಪಾಂತರಿಯಾಗಿದೆ. ಅಂದರೆ ಇದು ಒಮಿಕ್ರಾನ್ ರೂಪಾಂತರದ ಎರಡು ಹಿಂದಿನ ಆವೃತ್ತಿಗಳ ರೂಪಾಂತರಿತ ಹೈಬ್ರಿಡ್ ಆಗಿದೆ. BA.1 ಮತ್ತು BA.2 ಇದು ಮೊದಲ ಕಾಳಜಿಯ ರೂಪಾಂತರವಾದಾಗ ಪ್ರಪಂಚದಾದ್ಯಂತ ಹರಡಿತು. ಈ ಕೊವಿಡ್ ರೂಪಾಂತರಿ BA.2 ಗಿಂತ ಹೆಚ್ಚು ಹರಡುತ್ತದೆ. ವರದಿಗಳ ಪ್ರಕಾರ, ಹೊಸ ರೂಪಾಂತರವು BA.2 ಸಬ್‌ವೇರಿಯಂಟ್‌ಗಿಂತ ಶೇ. 10ರಷ್ಟು ಹೆಚ್ಚು ಹರಡುತ್ತದೆ. ಇದು ಈಗಾಗಲೇ ಹೆಚ್ಚು ಸಾಂಕ್ರಾಮಿಕವಾಗಿದೆ. WHO ಪ್ರಕಾರ, ಒಮಿಕ್ರಾನ್ ಸ್ಟ್ರೈನ್‌ನ ಉಪರೂಪವಾಗಿರುವ BA.2 ಕೊವಿಡ್ ವೈರಸ್‌ನ ಅತ್ಯಂತ ಪ್ರಬಲವಾದ ತಳಿಯಾಗಿದೆ.

XE ಕೊವಿಡ್ ರೂಪಾಂತರಿ ಹೆಚ್ಚು ವ್ಯಾಪಕವಾಗಿ ಹರಡದಿದ್ದರೂ ಮುಂದಿನ ದಿನಗಳಲ್ಲಿ ಈ ಸೋಂಕು ಅತ್ಯಂತ ಹೆಚ್ಚಾಗಿ ಹರಡುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಇದು ಅತ್ಯಂತ ಪ್ರಬಲವಾದ ಸ್ಟ್ರೈನ್ ಆಗಲಿದೆ ಎನ್ನಲಾಗಿದೆ. XE ಮರುಸಂಯೋಜಕ (BA.1-BA.2) ಜನವರಿ 19ರಂದು ಇಂಗ್ಲೆಂಡ್​ನಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು. ಜಾಗತಿಕ ಆರೋಗ್ಯ ಸಂಸ್ಥೆಯು ಇದುವರೆಗಿನ ಯಾವುದೇ ಕೋವಿಡ್ ಸ್ಟ್ರೈನ್‌ಗಿಂತ ಈ ರೂಪಾಂತರಿ ಹೆಚ್ಚು ಹರಡಬಹುದು ಎಂದು ಸೂಚಿಸಿದೆ.

ಇದನ್ನೂ ಓದಿ:  Covid 4th Wave: ಚೀನಾದಲ್ಲಿ ಲಾಕ್​ಡೌನ್, ಫ್ರಾನ್ಸ್​ನಲ್ಲಿ ಹೆಚ್ಚಿದ ಕೊವಿಡ್ ರೋಗಿಗಳ ಸಂಖ್ಯೆ; ಭಾರತದಲ್ಲೂ ಮತ್ತೆ ಕೊರೊನಾ ಆತಂಕ

Covid Vaccine: 12ರಿಂದ 15 ವರ್ಷದ ಮಕ್ಕಳಿಗೆ ಇಂದಿನಿಂದ ಕೊವಿಡ್ ನಿರೋಧಕ ಲಸಿಕೆ

Published On - 5:44 pm, Wed, 6 April 22

ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು