AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲಿಗಢ, ಬದೌನ್ ಮತ್ತು ಸುಲ್ತಾನ್‌ಪುರ ಸೇರಿದಂತೆ ಉತ್ತರ ಪ್ರದೇಶದ 12 ಜಿಲ್ಲೆಗಳ ಹೆಸರು ಬದಲಾಯಿಸಲಿದೆ ಯೋಗಿ ಸರ್ಕಾರ

ಸಂಸದರಾಗಿದ್ದ ಅವಧಿಯಲ್ಲಿಯೂ ಯೋಗಿ ಆದಿತ್ಯನಾಥ ಅವರು ಗೋರಖ್‌ಪುರದ ಹಲವು ಪ್ರದೇಶಗಳ ಹೆಸರನ್ನು ಬದಲಾಯಿಸಿದ್ದರು. ಇದರಲ್ಲಿ ಉರ್ದು ಬಜಾರ್ ಅನ್ನು ಹಿಂದಿ ಬಜಾರ್, ಹುಮಾಯೂನ್‌ಪುರವನ್ನು ಹನುಮಾನ್ ನಗರ, ಮೀನಾ ಬಜಾರ್ ಅನ್ನು ಮಾಯಾ ಬಜಾರ್

ಅಲಿಗಢ, ಬದೌನ್ ಮತ್ತು ಸುಲ್ತಾನ್‌ಪುರ ಸೇರಿದಂತೆ ಉತ್ತರ ಪ್ರದೇಶದ 12 ಜಿಲ್ಲೆಗಳ ಹೆಸರು ಬದಲಾಯಿಸಲಿದೆ ಯೋಗಿ ಸರ್ಕಾರ
ಯೋಗಿ ಆದಿತ್ಯನಾಥ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Apr 06, 2022 | 6:41 PM

Share

ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಮತ್ತು ಗೋರಖನಾಥ ದೇವಾಲಯದ ಮಠಾಧೀಶರಾದ ಯೋಗಿ ಆದಿತ್ಯನಾಥ (Yogi Adityanath) ಅವರು ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ ಜಿಲ್ಲೆಗಳು ಮತ್ತು ನಿಲ್ದಾಣಗಳ ಹೆಸರನ್ನು ಸಹ ಬದಲಾಯಿಸಿದ್ದರು. ಇದಕ್ಕೆ ರಾಜ್ಯಾದ್ಯಂತ ಜನರು ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದೀಗ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ಯೋಗಿ ಆದಿತ್ಯನಾಥ ಸರ್ಕಾರ 2.0 ಹಲವು ಜಿಲ್ಲೆಗಳ ಹೆಸರನ್ನು ಬದಲಾಯಿಸಲು ಸಿದ್ಧತೆ ನಡೆಸಿದೆ. ಸಂಸದರಾಗಿದ್ದ ಅವಧಿಯಲ್ಲಿಯೂ ಯೋಗಿ ಆದಿತ್ಯನಾಥ ಅವರು ಗೋರಖ್‌ಪುರದ (Gorakhpur) ಹಲವು ಪ್ರದೇಶಗಳ ಹೆಸರನ್ನು ಬದಲಾಯಿಸಿದ್ದರು. ಇದರಲ್ಲಿ ಉರ್ದು ಬಜಾರ್ ಅನ್ನು ಹಿಂದಿ ಬಜಾರ್, ಹುಮಾಯೂನ್‌ಪುರವನ್ನು ಹನುಮಾನ್ ನಗರ, ಮೀನಾ ಬಜಾರ್ ಅನ್ನು ಮಾಯಾ ಬಜಾರ್ ಮತ್ತು ಅಲಿನಗರವನ್ನು ಆರ್ಯ ನಗರ ಎಂದು ಬದಲಿಸಲಾಗಿತ್ತು.

6ರ ಹೆಸರಿಗೆ ಮುದ್ರೆ ಮಾಧ್ಯಮ ವರದಿಗಳ ಪ್ರಕಾರ ಯೋಗಿ ಸರ್ಕಾರವು ಮತ್ತೊಮ್ಮೆ ನಗರಗಳ ಹೆಸರನ್ನು ಬದಲಾಯಿಸಲು ತಯಾರಿ ಆರಂಭಿಸಿದೆ. ಈ ಬಾರಿ ಕನಿಷ್ಠ 12 ಜಿಲ್ಲೆಗಳ ಹೆಸರನ್ನು ಬದಲಾಯಿಸಬಹುದು. ಈ ಪೈಕಿ 6 ಹೆಸರಿಗೆ ಮುದ್ರೆ ಬಿದ್ದಿದೆ. ವರದಿಗಳ ಪ್ರಕಾರ, ಇವುಗಳಲ್ಲಿ ಅಲಿಘರ್, ಫರೂಕಾಬಾದ್, ಸುಲ್ತಾನ್‌ಪುರ, ಬದೌನ್, ಫಿರೋಜಾಬಾದ್ ಮತ್ತು ಷಹಜಹಾನ್‌ಪುರ ಸೇರಿವೆ. ಐತಿಹಾಸಿಕ ಪುರಾವೆಗಳೊಂದಿಗೆ ಪ್ರಸ್ತಾವನೆಯನ್ನು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ಸಿದ್ಧವಾಗಿದೆ ಎಂದು ನಂಬಲಾಗಿದೆ. ಹಿಂದಿನ ಸಿಎಂ ಯೋಗಿ ಅವರ ಅಧಿಕಾರಾವಧಿಯಲ್ಲಿಯೂ ಸಹ, ಮುಘಲ್ಸರಾಯ್ ರೈಲು ನಿಲ್ದಾಣಕ್ಕೆ ಪಂ. ದೀನದಯಾಳ್ ಉಪಾಧ್ಯಾಯ ಹೆಸರಿಡಲಾಗಿದೆ, ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂದು ಮರುನಾಮಕರಣ ಮಾಡಲಾಯಿತು, ಫೈಜಾಬಾದ್ ಅನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಯಿತು.

ಅಲಿಗಢ್ ಹರಿಘರ್ ಆಗಬಹುದೇ? ಮಾಧ್ಯಮ ವರದಿಗಳ ಪ್ರಕಾರ ಈ ಜಿಲ್ಲೆಗಳ ಮರುನಾಮಕರಣಕ್ಕೆ ಬಹುತೇಕ ಅನುಮೋದನೆ ನೀಡಲಾಗಿದೆ. ಅವರ ಹೊಸ ಹೆಸರುಗಳು ಶೀಘ್ರದಲ್ಲೇ ಹೊರಬರಬಹುದು. ಅಲಿಗಢ್ ಹೆಸರನ್ನು ಬದಲಾಯಿಸುವ ಬೇಡಿಕೆಯು ಸಾಕಷ್ಟು ಹಳೆಯದು. ಅಲಿಗಢ್  ಹೆಸರನ್ನು ಹರಿಘರ್ ಎಂದು ಬದಲಾಯಿಸಬೇಕು ಎಂಬುದು ಹಿಂದೂ ಸಂಘಟನೆಗಳ ಆಗ್ರಹವಾಗಿದೆ. ಕೆಲವು ಸಂಘಟನೆಗಳು ಅಲಿಗಢ್ ಹೆಸರನ್ನು ಆರ್ಯಗಢ ಎಂದು ಬದಲಾಯಿಸಲು ಬಯಸುತ್ತಿವೆ.

ಫರೂಕಾಬಾದ್ ಪಾಂಚಾಲ್ ನಗರ ಮತ್ತು ಬದೌನ್ ವೇದಮವು ಆಗಲಿದೆಯೇ? ಫರೂಕಾಬಾದ್ ಸಂಸದ ಮುಖೇಶ್ ರಜಪೂತ್ ಪ್ರಕಾರ  ಈ ಜಿಲ್ಲೆ ದ್ರೌಪದಿಯ ತಂದೆ ದ್ರುಪದನ ಪಾಂಚಾಲ್ ರಾಜ್ಯದ ರಾಜಧಾನಿಯಾಗಿತ್ತು, ಆದ್ದರಿಂದ ಇದನ್ನು ಪಾಂಚಾಲ್ ನಗರ ಎಂದು ಹೆಸರಿಸಬೇಕು. ಆದರೆ ಸುಲ್ತಾನ್‌ಪುರ ಹೆಸರನ್ನು ಕುಶಭವನಪುರ ಎಂದು ಬದಲಾಯಿಸುವ ಪ್ರಸ್ತಾವನೆಯನ್ನೂ ಸರ್ಕಾರಕ್ಕೆ ಕಳುಹಿಸಲಾಗಿದೆ. ಸುಲ್ತಾನಪುರದಲ್ಲಿ ರಾಮನ ಮಗ ಕುಶ ನೆಲೆಸಿದನು ಎಂದು ನಂಬಲಾಗಿದೆ. ಅದೇ ವೇಳೆ ಬದೌನ್ ಅನ್ನು ವೇದಮವು ಎಂದು, ಫಿರೋಜಾಬಾದ್ ಅನ್ನು ಚಂದ್ರನಗರ ಎಂದು ಮತ್ತು ಷಹಜಾನ್‌ಪುರವನ್ನು ಶಾಜಿಪುರ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವೂ ಯೋಗಿ ಸರ್ಕಾರಕ್ಕೆ ಹೋಗಿದೆ.

ಇನ್ನೂ ಅನೇಕ ನಗರಗಳ ಹೆಸರು ಬದಲಾಗಲಿದೆ ಈ ಜಿಲ್ಲೆಗಳ ಹೊರತಾಗಿ ಇನ್ನೂ ಹಲವು ನಗರಗಳ ಹೆಸರು ಬದಲಾಯಿಸುವಂತೆ ಒತ್ತಾಯಿಸಲಾಗಿದೆ. ಅಜಂಗಢವನ್ನು ಆರ್ಯಂಗಢ್, ಮೈನ್‌ಪುರಿಯನ್ನು ಮಾಯನ್‌ಪುರಿ, ಸಂಭಾಲ್‌ನ  ಕಲ್ಕಿ ನಗರ ಅಥವಾ ಪೃಥ್ವಿರಾಜ್ ನಗರ, ದೇವ್‌ಬಂದ್‌ ಅನ್ನು ದೇವವೃಂದಪುರ, ಗಾಜಿಪುರವನ್ನು ಗಾಡೀಪುರಿ ಮತ್ತು ಆಗ್ರಾವನ್ನು ಅಗ್ರವನ ಮಾಡಲು ಹಲವು ಸಂಘಟನೆಗಳು ಒತ್ತಾಯಿಸುತ್ತಿವೆ.

ಇದನ್ನೂ ಓದಿ: 12 ನೇ ತರಗತಿಯ ಇಂಗ್ಲಿಷ್ ಪರೀಕ್ಷೆ ರದ್ದು ಮಾಡಿದ ಉತ್ತರ ಪ್ರದೇಶ ಬೋರ್ಡ್; ಪ್ರಶ್ನೆ ಪತ್ರಿಕೆಯ ಉತ್ತರಗಳು ವೈರಲ್, ₹500ಗೆ ಮಾರಾಟ

Follow Us
Web contact
Web contact

TV9 Kannada

Read More
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ