Covid XE Variant: ಇಂಗ್ಲೆಂಡ್ನಲ್ಲಿ ಒಮಿಕ್ರಾನ್ಗಿಂತ ವೇಗವಾಗಿ ಹರಡುವ ಹೊಸ ಕೊವಿಡ್ ರೂಪಾಂತರಿ ಪತ್ತೆ
ಈ ಹೊಸ ಕೊವಿಡ್ ರೂಪಾಂತರವು ಮರುಸಂಯೋಜಿತ ರೂಪಾಂತರಿಯಾಗಿದೆ. ಅಂದರೆ ಇದು ಒಮಿಕ್ರಾನ್ ರೂಪಾಂತರದ ಎರಡು ಹಿಂದಿನ ಆವೃತ್ತಿಗಳ ರೂಪಾಂತರಿತ ಹೈಬ್ರಿಡ್ ಆಗಿದೆ.
ನವದೆಹಲಿ: ಕೆಲವು ದೇಶಗಳಲ್ಲಿ ಕೊವಿಡ್-19 ಕಡಿಮೆಯಾಗಲು ಪ್ರಾರಂಭಿಸಿದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ (WHO) ಒಮಿಕ್ರಾನ್‌ನ ಹೊಸ ರೂಪಾಂತರಿಯಾದ (Omicron New Variant) ‘XE’ ರೂಪಾಂತರದ ಎಚ್ಚರಿಕೆಯನ್ನು ನೀಡಿದೆ. ಇದು ಇದುವರೆಗಿನ ಎಲ್ಲ ಕೊರೊನಾವೈರಸ್‌ಗಿಂತ (Coronavirus) ಹೆಚ್ಚು ಹರಡುತ್ತದೆ. ಒಮಿಕ್ರಾನ್‌ನ BA.2 ಉಪ-ವ್ಯತ್ಯಯವು ವಿಶೇಷವಾಗಿ ಅಮೆರಿಕಾ ಮತ್ತು ಇಂಗ್ಲೆಂಡ್ನಂತಹ ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಈ ಎರಡು ರಾಷ್ಟ್ರಗಳ ಹೊರತಾಗಿ ಚೀನಾದಲ್ಲಿ ಕೂಡ ಕೊವಿಡ್ ಪ್ರಕರಣಗಳ (Covid Cases) ಉಲ್ಬಣವಾಗುತ್ತಿದೆ. ಮಾರ್ಚ್‌ನಲ್ಲಿ ಮಾತ್ರ ಭಾರತದಲ್ಲಿ 1.4 ಲಕ್ಷ ಕೊವಿಡ್ ಪ್ರಕರಣಗಳನ್ನು ಕಂಡಿತು. ಅವುಗಳಲ್ಲಿ ಹೆಚ್ಚಿನವು ಶಾಂಘೈ ಮತ್ತು ಜಿಲಿನ್ ಪ್ರದೇಶಗಳಲ್ಲಿ ಕಂಡುಬಂದಿವೆ.
XE ರೂಪಾಂತರಿ ಎಂದರೇನು?: ಈ ಹೊಸ ಕೊವಿಡ್ ರೂಪಾಂತರವು ಮರುಸಂಯೋಜಿತ ರೂಪಾಂತರಿಯಾಗಿದೆ. ಅಂದರೆ ಇದು ಒಮಿಕ್ರಾನ್ ರೂಪಾಂತರದ ಎರಡು ಹಿಂದಿನ ಆವೃತ್ತಿಗಳ ರೂಪಾಂತರಿತ ಹೈಬ್ರಿಡ್ ಆಗಿದೆ. BA.1 ಮತ್ತು BA.2 ಇದು ಮೊದಲ ಕಾಳಜಿಯ ರೂಪಾಂತರವಾದಾಗ ಪ್ರಪಂಚದಾದ್ಯಂತ ಹರಡಿತು. ಈ ಕೊವಿಡ್ ರೂಪಾಂತರಿ BA.2 ಗಿಂತ ಹೆಚ್ಚು ಹರಡುತ್ತದೆ. ವರದಿಗಳ ಪ್ರಕಾರ, ಹೊಸ ರೂಪಾಂತರವು BA.2 ಸಬ್‌ವೇರಿಯಂಟ್‌ಗಿಂತ ಶೇ. 10ರಷ್ಟು ಹೆಚ್ಚು ಹರಡುತ್ತದೆ. ಇದು ಈಗಾಗಲೇ ಹೆಚ್ಚು ಸಾಂಕ್ರಾಮಿಕವಾಗಿದೆ. WHO ಪ್ರಕಾರ, ಒಮಿಕ್ರಾನ್ ಸ್ಟ್ರೈನ್‌ನ ಉಪರೂಪವಾಗಿರುವ BA.2 ಕೊವಿಡ್ ವೈರಸ್‌ನ ಅತ್ಯಂತ ಪ್ರಬಲವಾದ ತಳಿಯಾಗಿದೆ.
XE ಕೊವಿಡ್ ರೂಪಾಂತರಿ ಹೆಚ್ಚು ವ್ಯಾಪಕವಾಗಿ ಹರಡದಿದ್ದರೂ ಮುಂದಿನ ದಿನಗಳಲ್ಲಿ ಈ ಸೋಂಕು ಅತ್ಯಂತ ಹೆಚ್ಚಾಗಿ ಹರಡುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಇದು ಅತ್ಯಂತ ಪ್ರಬಲವಾದ ಸ್ಟ್ರೈನ್ ಆಗಲಿದೆ ಎನ್ನಲಾಗಿದೆ. XE ಮರುಸಂಯೋಜಕ (BA.1-BA.2) ಜನವರಿ 19ರಂದು ಇಂಗ್ಲೆಂಡ್ನಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು. ಜಾಗತಿಕ ಆರೋಗ್ಯ ಸಂಸ್ಥೆಯು ಇದುವರೆಗಿನ ಯಾವುದೇ ಕೋವಿಡ್ ಸ್ಟ್ರೈನ್‌ಗಿಂತ ಈ ರೂಪಾಂತರಿ ಹೆಚ್ಚು ಹರಡಬಹುದು ಎಂದು ಸೂಚಿಸಿದೆ.
XE ಎಂಬುದು ಒಮಿಕ್ರಾನ್‌ನ ಎರಡೂ ಉಪ-ವ್ಯತ್ಯಯಗಳ (BA.1 ಮತ್ತು BA.2) ಸಂಯೋಜನೆ ಅಥವಾ ಮರುಸಂಯೋಜಕವಾಗಿದೆ. WHO ಪ್ರಕಾರ, ಮರುಸಂಯೋಜಕ ರೂಪಾಂತರವು ಒಮಿಕ್ರಾನ್‌ನ BA.2 ಉಪ ವ್ಯತ್ಯಯಕ್ಕಿಂತ ಶೇ. 10ರಷ್ಟು ಹೆಚ್ಚು ಹರಡುತ್ತದೆ. WHO ಏಪ್ರಿಲ್ 1ರಂದು XE ಬಗ್ಗೆ ತನ್ನ ಸಂಶೋಧನೆಗಳ ಕುರಿತು ವರದಿಯನ್ನು ನೀಡಿತು. ಕೊವಿಡ್ ರೂಪಾಂತರಿ XEಯನ್ನು ಇಂಗ್ಲೆಂಡ್ನಲ್ಲಿ ಮೊದಲ ಬಾರಿಗೆ ಜನವರಿ 19ರಂದು ಪತ್ತೆ ಮಾಡಲಾಯಿತು.
Covid 4th Wave: ಚೀನಾ, ಯುರೋಪ್ನಲ್ಲಿ ಹೆಚ್ಚಿದ ಕೊರೊನಾವೈರಸ್ ಕೇಸ್; ಭಾರತದಲ್ಲಿ ಕೊವಿಡ್ 4ನೇ ಅಲೆಯ ಭೀತಿ