ಬಿಕ್ಕಟ್ಟಿನ ಕುರಿತು ಸುಪ್ರೀಂಕೋರ್ಟ್ ಸಮಂಜಸ ಆದೇಶ ನೀಡಲಿದೆ ಎಂದ ಪಾಕ್ ಸಿಜೆಪಿ; ಪಿಟಿಐ ಸಭೆ ಕರೆದ ಇಮ್ರಾನ್ ಖಾನ್

ಬಿಕ್ಕಟ್ಟಿನ ಕುರಿತು ಸುಪ್ರೀಂಕೋರ್ಟ್ ಸಮಂಜಸ ಆದೇಶ ನೀಡಲಿದೆ ಎಂದ ಪಾಕ್ ಸಿಜೆಪಿ; ಪಿಟಿಐ ಸಭೆ ಕರೆದ ಇಮ್ರಾನ್ ಖಾನ್
ಇಸ್ಲಾಮಾಬಾದ್​​ನಲ್ಲಿ ಕಂಡ ಪೋಸ್ಟರ್

ಮಾಧ್ಯಮ ವರದಿಯ ಪ್ರಕಾರ ಪ್ರಸ್ತುತ ಪರಿಸ್ಥಿತಿಯ ಕಾನೂನುಬದ್ಧತೆಯನ್ನು ನ್ಯಾಯಾಲಯವು ಪರಿಗಣಿಸುತ್ತದೆ ಅದು "ಸಮಂಜಸವಾದ ಆದೇಶವನ್ನು" ನೀಡುತ್ತದೆ ಎಂದು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಉಮರ್ ಅಟಾ ಬಂಡಿಯಲ್ ಹೇಳಿದ್ದಾರೆ.

TV9kannada Web Team

| Edited By: Rashmi Kallakatta

Apr 04, 2022 | 4:32 PM

ಇಸ್ಲಾಮಾಬಾದ್: ರಾಷ್ಟ್ರೀಯ ಅಸೆಂಬ್ಲಿ (National Assembly) ಉಪ ಸ್ಪೀಕರ್ ಖಾಸಿಮ್ ಸೂರಿ ಅವರು ಪ್ರಧಾನಿ ಇಮ್ರಾನ್ ಖಾನ್ (Imran Khan) ವಿರುದ್ಧ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ ನಂತರ ಮತ್ತು ಸ್ಥಳೀಯ ಸಂಸತ್ತನ್ನು ವಿಸರ್ಜನೆ ಮಾಡಿದ ನಂತರ ನಡೆಯುತ್ತಿರುವ ರಾಜಕೀಯ ಅಡೆತಡೆಗಳ ಕುರಿತು ಪಾಕಿಸ್ತಾನದ ಸುಪ್ರೀಂಕೋರ್ಟ್ (Supreme Court) ಸೋಮವಾರ ಸುಮೊಟೊ ವಿಚಾರಣೆಯನ್ನು ನಡೆಸಿದೆ. ಮಾಧ್ಯಮ ವರದಿಯ ಪ್ರಕಾರ, ಪ್ರಸ್ತುತ ಪರಿಸ್ಥಿತಿಯ ಕಾನೂನುಬದ್ಧತೆಯನ್ನು ನ್ಯಾಯಾಲಯವು ಪರಿಗಣಿಸುತ್ತದೆ ಅದು “ಸಮಂಜಸವಾದ ಆದೇಶವನ್ನು” ನೀಡುತ್ತದೆ ಎಂದು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ (CJP) ಉಮರ್ ಅಟಾ ಬಂಡಿಯಲ್ ಹೇಳಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಖಾನ್ ಮಂಗಳವಾರ ಪಿಟಿಐ ಸಂಸದೀಯ ಮಂಡಳಿಯ ಸಭೆಯನ್ನು ಕರೆದಿದ್ದಾರೆ. ಪಾಕಿಸ್ತಾನದ ‘ದಿ ನೇಷನ್’ ಅನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದ್ದು, ಮುಂದಿನ ಚುನಾವಣೆಗೆ ಟಿಕೆಟ್ ಹಂಚಿಕೆ ಕುರಿತು ಚರ್ಚಿಸಬಹುದಾದ ಸಂಸದೀಯ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ಖಾನ್ ವಹಿಸಲಿದ್ದಾರೆ ಎಂದು ಹೇಳಿದೆ. ಸಿಜೆಪಿ, ನ್ಯಾಯಮೂರ್ತಿ ಇಜಾಜುಲ್ ಅಹ್ಸನ್, ನ್ಯಾಯಮೂರ್ತಿ ಮಜರ್ ಆಲಂ ಖಾನ್ ಮಿಯಾಂಖೇಲ್, ನ್ಯಾಯಮೂರ್ತಿ ಮುನಿಬ್ ಅಖ್ತರ್ ಮತ್ತು ನ್ಯಾಯಮೂರ್ತಿ ಜಮಾಲ್ ಖಾನ್ ಮಂಡೋಖೈಲ್ ಅವರನ್ನೊಳಗೊಂಡ ಅಲರ್ಜರ್ ಪೀಠವು ವಿಚಾರಣೆ ನಡೆಸುತ್ತಿದೆ.

ಸಂಸತ್ತಿನ 342 ಸದಸ್ಯರ ಕೆಳಮನೆಯಲ್ಲಿ ಬಹುಮತವನ್ನು ಕಳೆದುಕೊಂಡಿದ್ದ ಪ್ರಧಾನಿ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಡೆಪ್ಯುಟಿ ಸ್ಪೀಕರ್ ಖಾಸಿಮ್ ಸೂರಿ ತಿರಸ್ಕರಿಸಿದ ಕೆಲವೇ ನಿಮಿಷಗಳಲ್ಲಿ, ಪ್ರಧಾನಿ ಖಾನ್ ಅವರ ಸಲಹೆಯ ಮೇರೆಗೆ ಅಧ್ಯಕ್ಷ ಆರಿಫ್ ಅಲ್ವಿ ರಾಷ್ಟ್ರೀಯ ಅಸೆಂಬ್ಲಿಯನ್ನು (NA) ವಿಸರ್ಜಿಸಿದ್ದರು.

ನಿಯೋಜಿತ ಪ್ರಧಾನಿ ಹುದ್ದೆಗೆ ಪಿಟಿಐ ಅಧ್ಯಕ್ಷರಿಗೆ ಎರಡು ಹೆಸರುಗಳನ್ನು ಕಳುಹಿಸಿದೆ: ಫವಾದ್ ಚೌಧರಿ “ಪಿಟಿಐ ಅಧ್ಯಕ್ಷ ಆರಿಫ್ ಅಲ್ವಿ ಅವರಿಗೆ ಹಂಗಾಮಿ ಪ್ರಧಾನಿ ಹುದ್ದೆಗೆ ಎರಡು ಹೆಸರುಗಳನ್ನು ಕಳುಹಿಸಿದೆ” ಎಂದು ಕೇಂದ್ರ ಸಚಿವ ಫವಾದ್ ಚೌಧರಿ ಹೇಳಿದ್ದಾರೆ. ವಿಪಕ್ಷವು 7 ದಿನಗಳಲ್ಲಿ ಹೆಸರನ್ನು ಅಂತಿಮಗೊಳಿಸದಿದ್ದರೆ, ಪಿಟಿಐ ಸೂಚಿಸಿದ ಹೆಸರುಗಳಿಂದಲೇ ಉಸ್ತುವಾರಿ ಪ್ರಧಾನ ಮಂತ್ರಿ ಆಗುತ್ತಾರೆ ಎಂದು ಪಾಕಿಸ್ತಾನದ ARY ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ: ಇಮ್ರಾನ್ ಖಾನ್ ಸದ್ಯಕ್ಕೆ ಸೇಫ್; ಅವಿಶ್ವಾಸ ನಿರ್ಣಯ ವಜಾಗೊಳಿಸಿ ಏಪ್ರಿಲ್ 25ರವರೆಗೆ ಪಾಕಿಸ್ತಾನದ ಸಂಸತ್ ಕಲಾಪ ಮುಂದೂಡಿದ ಸ್ಪೀಕರ್

Follow us on

Related Stories

Most Read Stories

Click on your DTH Provider to Add TV9 Kannada