Russia-Ukraine Crisis ಬುಕಾ ಹತ್ಯೆ: ಯುದ್ಧ ಅಪರಾಧಗಳ ವಿಚಾರಣೆ ಮಾಡಬೇಕೆಂದು ಕರೆ ನೀಡಿದ ಅಮೆರಿಕ ಅಧ್ಯಕ್ಷ ಬೈಡನ್

ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೈಡನ್ , ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು "ಯುದ್ಧ ಅಪರಾಧಿ" ಎಂದು ಕರೆದಿದ್ದಾರೆ.

Russia-Ukraine Crisis  ಬುಕಾ ಹತ್ಯೆ: ಯುದ್ಧ ಅಪರಾಧಗಳ ವಿಚಾರಣೆ ಮಾಡಬೇಕೆಂದು ಕರೆ ನೀಡಿದ  ಅಮೆರಿಕ ಅಧ್ಯಕ್ಷ ಬೈಡನ್
ಜೋ ಬೈಡನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Apr 04, 2022 | 10:01 PM

ಉಕ್ರೇನ್‌ನ ಬುಕಾದಲ್ಲಿ (Bucha killings) ರಷ್ಯಾದ ಪಡೆ ನಾಗರಿಕರ ಹತ್ಯೆ ಮಾಡಿದ್ದನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಸೋಮವಾರ ಖಂಡಿಸಿದ್ದು, “ಯುದ್ಧ ಅಪರಾಧಗಳ ವಿಚಾರಣೆ” ಗೆ ಕರೆ ನೀಡಿದರು. ಮಾಸ್ಕೋದ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಬೇಕು ಎಂದಿದ್ದಾರೆ ಬೈಡನ್. ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೈಡನ್ , ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು “ಯುದ್ಧ ಅಪರಾಧಿ” ಎಂದು ಕರೆದಿದ್ದಾರೆ. ಉಕ್ರೇನ್​​ನ ಹಲವು ನಗರಗಳಲ್ಲಿ ಸಾಮೂಹಿಕ ಸಮಾಧಿಗಳು ಪತ್ತೆಯಾಗಿವೆ. ಉಕ್ರೇನ್ ಪ್ರಜೆಗಳ ವಿರುದ್ಧ ರಷ್ಯಾ ತೀವ್ರ ಹಿಂಸಾಚಾರ ನರಮೇಧ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೂರಿದ್ದಾರೆ. ಇದಕ್ಕಿಂತ ಮುನ್ನ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬುಕಾ ಪಟ್ಟಣಕ್ಕೆ ಭೇಟಿ ನೀಡಿದರು. ಈ ಪಟ್ಟಣ ರಾಜಧಾನಿ ಕೈವ್‌ನ ಹೊರಭಾಗದಲ್ಲಿದೆ. ಸಾಮೂಹಿಕ ಮರಣದಂಡನೆಗಳನ್ನು ಸೂಚಿಸುವ ಇತರ ಚಿಹ್ನೆಗಳ ಜೊತೆಗೆ ಸಾಮೂಹಿಕ ಸಮಾಧಿಗಳು ಕಂಡುಬಂದ ಪ್ರದೇಶಕ್ಕೂ ಅವರು ಭೇಟಿ ನೀಡಿದರು.  ಬುಕಾದಿಂದ ದೂರದರ್ಶನದ ಭಾಷಣದಲ್ಲಿ ಮಾತನಾಡುತ್ತಾ, “ಯುದ್ಧ ಅಪರಾಧವನ್ನು ಜಗತ್ತು ನರಮೇಧವೆಂದು ಗುರುತಿಸುತ್ತದೆ” ಎಂದು ಝೆಲೆನ್ಸ್ಕಿ ಹೇಳಿದರು.ದೇಶದಲ್ಲಿ ರಷ್ಯಾದ ಪಡೆಗಳು ನಡೆಸಿದ ದೌರ್ಜನ್ಯದ ಪ್ರಮಾಣವನ್ನು ಕೈವ್ ಅರಿತುಕೊಂಡಾಗಿನಿಂದ ರಷ್ಯಾದೊಂದಿಗೆ ಮಾತುಕತೆ ನಡೆಸುವುದು ಉಕ್ರೇನ್‌ಗೆ ಈಗ ಕಷ್ಟಕರವಾಗಿದೆ ಎಂದು ಅವರು ಹೇಳಿದರು.

ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಬೈಡೆನ್  ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು “ಯುದ್ಧ ಅಪರಾಧಿ” ಎಂದೂ ಕರೆದರು

ಯುರೋಪಿಯನ್ ಒಕ್ಕೂಟವು “ಈಗ ವಿಮೋಚನೆಗೊಂಡಿರುವ ಹಲವಾರು ಆಕ್ರಮಿತ ಉಕ್ರೇನಿಯನ್ ಪಟ್ಟಣಗಳಲ್ಲಿ ರಷ್ಯಾದ ಸಶಸ್ತ್ರ ಪಡೆಗಳು ಎಸಗಿದ (ಕೊಲೆಗಳನ್ನು) ಪ್ರಬಲವಾಗಿ ಖಂಡಿಸುತ್ತದೆ” ಎಂದು ಯುರೋಪಿಯನ್ ಕೌನ್ಸಿಲ್ ಹೇಳಿಕೆಯಲ್ಲಿ ತಿಳಿಸಿದೆ. ಬುಕಾ ಮತ್ತು ಇತರ ಉಕ್ರೇನಿಯನ್ ಪಟ್ಟಣಗಳಲ್ಲಿನ ಹತ್ಯಾಕಾಂಡಗಳನ್ನು ಯುರೋಪಿಯನ್ ನೆಲದಲ್ಲಿ ಮಾಡಿದ ದೌರ್ಜನ್ಯಗಳ ಪಟ್ಟಿಯಲ್ಲಿರಿಸಲಾಗುತ್ತದೆ ಎಂದು ಅದು ಹೇಳಿದೆ.

ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ಬೆಂಬಲಿಗರು ಬುಕಾದಲ್ಲಿನ ಘಟನೆಗಳ “ಪರಿಣಾಮಗಳನ್ನು ಅನುಭವಿಸುತ್ತಾರೆ” ಎಂದು ಹೇಳಿದರು. ಫೆಬ್ರವರಿ 24 ರಿಂದ ನಡೆಯುತ್ತಿರುವ ಆಕ್ರಮಣಕ್ಕೆ ಯುರೋಪಿಯನ್ ಒಕ್ಕೂಟದ ಪ್ರತಿಕ್ರಿಯೆಯನ್ನು ಮುನ್ನಡೆಸುತ್ತಿರುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ತೈಲ ಮತ್ತು ಕಲ್ಲಿದ್ದಲು ಸೇರಿದಂತೆ ಹೆಚ್ಚಿನ ನಿರ್ಬಂಧಗಳಿಗೆ ಕರೆ ನೀಡಿದರು. ಹತ್ಯೆಗಳನ್ನು ಖಂಡಿಸಿದ ಮ್ಯಾಕ್ರನ್, ರಷ್ಯಾದ ಪಡೆಗಳಿಂದ “ಯುದ್ಧ ಅಪರಾಧಗಳನ್ನು ಸೂಚಿಸುವ ಸ್ಪಷ್ಟ ಸುಳಿವುಗಳು” ಇವೆ ಎಂದು ಹೇಳಿದರು.

ಮಾಸ್ಕೋದ ಮಿಲಿಟರಿ ಆಕ್ರಮಣವನ್ನು ಕೊನೆಗೊಳಿಸಲು ರಷ್ಯಾ ಮತ್ತು ಉಕ್ರೇನ್ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಸುತ್ತಿವೆ. ಇಲ್ಲಿಯವರೆಗೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಪ್ರಯೋಜನವಾಗಿಲ್ಲ. ಆದಾಗ್ಯೂ ಇತ್ತೀಚಿನ ಹತ್ಯೆ ಪ್ರಕರಣಗಳಿಂದ ಮಾತುಕತೆಗಳು ಮುಚ್ಚಿಹೋಗುವ ಸಾಧ್ಯತೆಯಿದೆ ಮತ್ತು ಶಾಂತಿ ಒಪ್ಪಂದವು ಹೆಚ್ಚು ವಿಳಂಬವಾಗಬಹುದು.

ಇದನ್ನೂ ಓದಿರಷ್ಯಾ ಸುಪರ್ದಿಯಲ್ಲಿದ್ದ ಉಕ್ರೇನ್​ ನಗರಗಳಲ್ಲಿ ನರಮೇಧದ ಸಾಕ್ಷ್ಯ ಪತ್ತೆ: ಸೇಡು ತೀರಿಸುತ್ತೇನೆಂದು ಶಪಥ ಮಾಡಿದ ಝೆಲೆನ್​ಸ್ಕಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?