Infosys: ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್​ಗೆ ಮುಜುಗರ ತಪ್ಪಿಸಲು ರಷ್ಯಾದಲ್ಲಿ ಕಾರ್ಯಾಚರಣೆ ನಿಲ್ಲಿಸಲಿದೆ ಇನ್ಫೋಸಿಸ್

ಎನ್​ಆರ್​ ನಾರಾಯಣ ಮೂರ್ತಿ ಅವರ ಅಳಿಯ- ಯು.ಕೆ. ಚಾನ್ಸೆಲರ್ ರಿಶಿ ಸುನಕ್​ಗೆ ಮುಜುಗರ ತಪ್ಪಿಸಲು ರಷ್ಯಾದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಲಿದೆ ಇನ್ಫೋಸಿಸ್.

Infosys: ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್​ಗೆ ಮುಜುಗರ ತಪ್ಪಿಸಲು ರಷ್ಯಾದಲ್ಲಿ ಕಾರ್ಯಾಚರಣೆ ನಿಲ್ಲಿಸಲಿದೆ ಇನ್ಫೋಸಿಸ್
ರಿಶಿ ಸುನಕ್​ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Apr 02, 2022 | 1:13 PM

ಉಕ್ರೇನ್​ನಲ್ಲಿ ಯುದ್ಧ ನಡೆಸುತ್ತಿರುವ ಕಾರಣಕ್ಕೆ ರಷ್ಯಾದಲ್ಲಿ ಭಾರತದ ಐ-ಟಿ ಕಂಪೆನಿ ಇನ್ಫೋಸಿಸ್​ ತನ್ನ ಕಚೇರಿಯ ಬಾಗಿಲು ಹಾಕುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ. ಈ ಕಂಪೆನಿಯ ಸಹಸಂಸ್ಥಾಪಕರಲ್ಲಿ ಎನ್​.ಆರ್.ನಾರಾಯಣ ಮೂರ್ತಿ (NR Narayana Murthy) ಸಹ ಒಬ್ಬರು. ರಷ್ಯಾದಲ್ಲಿ ಕಾರ್ಯಾಚರಣೆ ನಿಲ್ಲಿಸುವಂತೆ ಇನ್ಫೋಸಿಸ್​ ಮೇಲೆ ಭಾರೀ ಒತ್ತಡ ಇತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಉಕ್ರೇನ್​ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾದ ವಿರುದ್ಧ ಪ್ರತಿಭಟನೆ ದಾಖಲಿಸುವ ಉದ್ದೇಶದಿಂದ ಹಲವು ದೊಡ್ಡ ಉದ್ಯಮಗಳು ಆ ದೇಶವನ್ನು ಬಿಟ್ಟು ಹೊರಬರುತ್ತಿವೆ. ಮೂಲಗಳು ಬಿಬಿಸಿಗೆ ತಿಳಿಸಿರುವಂತೆ, ಮಾಸ್ಕೋದಲ್ಲಿನ ತನ್ನ ಉದ್ಯೋಗಿಗಳಿಗೆ ಬದಲಿ ಹುದ್ದೆಗಳನ್ನು ದೊರಕಿಸಲು ಹುಡುಕಾಟ ನಡೆಸುತ್ತಿದೆ.

ಯುನೈಟೆಡ್​ ಕಿಂಗ್​ಡಮ್​ನ ಚಾನ್ಸೆಲರ್ ರಿಶಿ ಸುನಕ್ ಅವರು ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾರನ್ನು ಮದುವೆ ಆಗಿದ್ದಾರೆ. ಅಕ್ಷತಾ ಅವರ ಷೇರು ಇನ್ಫೋಸಿಸ್ ಕಂಪೆನಿಯಲ್ಲಿ ಇದೆ. ಅದರ ಮೌಲ್ಯ 40 ಕೋಟಿ ಪೌಂಡ್ಸ್ ಇದೆ. ಭಾರತದ ರೂಪಾಯಿ ಲೆಕ್ಕದಲ್ಲಿ 3,984,52,28,176 (3,984 ಕೋಟಿ ರೂಪಾಯಿ) ಆಗುತ್ತದೆ. ಈ ಬಗ್ಗೆ ಸುನಕ್ ಅವರನ್ನು ಪ್ರಶ್ನಿಸಲಾಗುತ್ತಿತ್ತು. ಏಕೆಂದರೆ ಬಹುತೇಕ ರಾಷ್ಟ್ರಗಳ ಕಂಪೆನಿಗಳು ರಷ್ಯಾದಲ್ಲಿ ಕಾರ್ಯ ನಿರ್ವಹಣೆ ನಿಲ್ಲಿಸಿವೆ. ಅಂಥದ್ದರಲ್ಲಿ ಯು.ಕೆ.ದಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವ ರಿಷಿ ಸುನಕ್ ಅವರು ಪ್ರಮುಖ ಷೇರಿನ ಪಾಲು ಹೊಂದಿರುವ ಕಂಪೆನಿ ರಷ್ಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ರಷ್ಯನ್ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಅವರ ಅಧಿಕಾರಾವಧಿಯಲ್ಲಿ ತನ್ನ ಕುಟುಂಬಕ್ಕೆ ಅನುಕೂಲ ಆಗಿರುವ ಆರೋಪದ ಬಗ್ಗೆ ಸುನಕ್ ನಿರಾಕರಿಸಿದ್ದಾರೆ. ತನಗೂ ಇನ್ಫೋಸಿಸ್​ಗೂ ಏನೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ಮೇಲೆ ಹಲವು ದೇಶಗಳು ರಷ್ಯಾದ ಮೇಲೆ ನಿರ್ಬಂಧ ಹೇರಿದವು. ವೋಡ್ಕಾದಿಂದ ಉಕ್ಕಿನ ತನಕ ರಷ್ಯಾದಿಂದ ಮಾಡಿಕೊಳ್ಳುವ ವಸ್ತುಗಳಿಗೆ ಯು.ಕೆ. ಆಮದು ಸುಂಕವನ್ನು ಹೆಚ್ಚಿಸಿದ್ದು, ರಷ್ಯಾಗೆ ವಿಲಾಸಿ ವಸ್ತುಗಳ ರಫ್ತು ನಿಷೇಧಿಸಲಾಗಿದೆ.

ಒಟ್ಟಾರೆಯಾಗಿ ಈ ಬೆಳವಣಿಗೆ ಗಮನಿಸಿದರೆ, ಯು.ಕೆ.ದಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವ ನಾರಾಯಣ ಮೂರ್ತಿ ಅವರ ಅಳಿಯ ರಿಶಿ ಸುನಕ್​ಗೆ ಮುಜುಗರ ತಪ್ಪಿಸಲು ಇನ್ಫೋಸಿಸ್​ ರಷ್ಯಾದಲ್ಲಿ ತನ್ನ ಕಚೇರಿ ಮುಚ್ಚಿದಂತಾಗಿದೆ.

ಇದನ್ನೂ ಓದಿ: ರಷ್ಯಾದಲ್ಲಿ ಇನ್ಫೋಸಿಸ್ ಕಾರ್ಯನಿರ್ವಹಣೆ; ನಾರಾಯಣ ಮೂರ್ತಿ ಅಳಿಯ, ಬ್ರಿಟನ್​ ಹಣಕಾಸು ಸಚಿವ ರಿಷಿ ಸುನಕ್​ಗೆ ಕಠಿಣ ಪ್ರಶ್ನೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್