ನಿಮ್ಮ ಹಣಕಾಸು ಆರೋಗ್ಯ ಸುಸ್ಥಿರವಾಗಿರಲು ಈ ಕ್ಯಾಲೆಂಡರ್ ಅನುಸರಿಸಿ: ಉಳಿತಾಯದ ಮಂತ್ರ ಮರೆಯದಿರಿ

Financial Planning: ಮುಂಜಾಗ್ರತೆ ವಹಿಸುವವರ ಬದುಕಿನಲ್ಲಿ ಆಘಾತಗಳು ಕಡಿಮೆಯಿರುತ್ತವೆ. ಬದುಕಿನಲ್ಲಿ ಯಾವುದೇ ತನ್ನಿಂತಾನೆ ಆಗುವುದಿಲ್ಲ. ನೆಮ್ಮದಿಯಾಗಿರಬೇಕು ಎಂದಾದರೆ ಮುಂಚಿತವಾಗಿಯೇ ಒಂದಿಷ್ಟು ಸಂಗತಿಗಳನ್ನು ಯೋಜಿಸಿಕೊಳ್ಳಬೇಕಾಗುತ್ತದೆ.

ನಿಮ್ಮ ಹಣಕಾಸು ಆರೋಗ್ಯ ಸುಸ್ಥಿರವಾಗಿರಲು ಈ ಕ್ಯಾಲೆಂಡರ್ ಅನುಸರಿಸಿ: ಉಳಿತಾಯದ ಮಂತ್ರ ಮರೆಯದಿರಿ
ಸರಿಯಾಗಿ ಪ್ಲಾನ್ ಮಾಡಿದರೆ ಲಾಭ ಹೆಚ್ಚು
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 03, 2022 | 6:25 AM

ಪ್ರತಿ ವರ್ಷ ಮಾರ್ಚ್ ತಿಂಗಳು ಬಂದರೆ ಸಾಕು ಹಲವರಿಗೆ ತೆರಿಗೆ ಕಡಿತದ ಭೀತಿ ಶುರುವಾಗುತ್ತೆ. ಕೊನೆ ಗಳಿಗೆಯಲ್ಲಿ ಎದುರು ಸಿಕ್ಕವರ ಮಾತು ಯಾವ್ಯಾವುದೂ ಹಣಕಾಸು ಉತ್ಪನ್ನಗಳಲ್ಲಿ ಹಣ ತೊಡಗಿಸಿ, ತೆರಿಗೆ ಉಳಿಸಿದೆವೆಂದು ಬೀಗುತ್ತಾರೆ. ಸರಿಯಾಗಿ ವಿಶ್ಲೇಷಿಸಿ ನೋಡಿದರೆ ಬೇಕೋಬೇಡವೋ ಯಾವುದೋ ಒಂದು ಪಾಲಿಸಿ ಖರೀದಿಸಿರುತ್ತಾರೆ, ಅರ್ಥವೇ ಮಾಡಿಕೊಳ್ಳದೆ ಮ್ಯೂಚುವಲ್​ಫಂಡ್ ಅಥವಾ ಯುಲಿಪ್​ಗಳಲ್ಲಿ ಹಣ ಹೂಡಿಕೆ ಮಾಡಿರುತ್ತಾರೆ. ಕೊನೆಗೆ ಎಲ್ಲವೂ ಹದತಪ್ಪುತ್ತಿದೆ ಎನಿಸಿದಾಗ ಪರಿತಪಿಸುತ್ತಾರೆ. ನಮ್ಮನ್ನು ನಾವು ಇಂಥ ಸ್ಥಿತಿಗೆ ದೂಡಿಕೊಳ್ಳಬಾರದು ಎಂದರೆ ಹಣಕಾಸು ನಿರ್ವಹಣೆಯ ವಿಚಾರದಲ್ಲಿ ಎಚ್ಚರದಿಂದ ಇರಬೇಕು. ಮುಂಜಾಗ್ರತೆ ವಹಿಸುವವರ ಬದುಕಿನಲ್ಲಿ ಆಘಾತಗಳು ಕಡಿಮೆಯಿರುತ್ತವೆ. ಬದುಕಿನಲ್ಲಿ ಯಾವುದೇ ತನ್ನಿಂತಾನೆ ಆಗುವುದಿಲ್ಲ. ನೆಮ್ಮದಿಯಾಗಿರಬೇಕು ಎಂದಾದರೆ ಮುಂಚಿತವಾಗಿಯೇ ಒಂದಿಷ್ಟು ಸಂಗತಿಗಳನ್ನು ಯೋಜಿಸಿಕೊಳ್ಳಬೇಕಾಗುತ್ತದೆ. ಅಂಥದ್ದಕ್ಕೆ ಹಣಕಾಸು ವರ್ಷದ ಮೊದಲ ವಾರ ಹೇಳಿ ಮಾಡಿಸಿದ್ದು.

ಹೂಡಿಕೆಯನ್ನು ಪ್ಲಾನ್ ಮಾಡಿ ಕಳೆದ ಕೆಲ ತಿಂಗಳುಗಳಿಂದ ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ ಷೇರುಪೇಟೆಯಲ್ಲಿ ಹೊಯ್ದಾಟವಿದೆ. ಕಚ್ಚಾ ತೈಲ ಮತ್ತು ಇತರ ವಸ್ತುಗಳ ಬೆಲೆ ಏರಿಕೆ ಕಾಣುತ್ತಿದೆ. ನಿಮ್ಮ ಹೂಡಿಕೆಯ ವಿಧಾನವನ್ನು ಪರಿಶೀಲಿಸಲು ಇದು ಸಕಾಲ. ತುರ್ತು ನಿಧಿ ಸ್ಥಾಪಿಸುವ ಬಗ್ಗೆಯೂ ಗಂಭೀರವಾಗಿ ಆಲೋಚಿಸಿ. ಮಕ್ಕಳ ಭವಿಷ್ಯ, ನಿವೃತ್ತಿಯಂಥ ಅಗತ್ಯಗಳಿಗಾಗಿ ಹೂಡಿಕೆ ಮಾಡುವುದಿದ್ದರೆ ಎಸ್​ಐಪಿ ಮಾರ್ಗದಲ್ಲಿ ಈಕ್ವಿಟಿ ಮ್ಯೂಚುವಲ್​ ಫಂಡ್​ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಒಂದು ವೇಳೆ ನೀವು ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಗುರಿಗಾಗಿ ಹಣ ಉಳಿಸುತ್ತಿದ್ದರೆ ಆರ್​ಡಿ, ಎಫ್​ಡಿಯಂಥ ಸಾಂಪ್ರದಾಯಿಕ ಉಳಿತಾಯ ಮಾರ್ಗಗಳು ಒಳ್ಳೆಯದು. ತುರ್ತು ಅಗತ್ಯಕ್ಕೆಂದು ನೀವು ರೂಪಿಸಿಕೊಳ್ಳುವ ಇಡಗಂಟು ಕನಿಷ್ಠ ನಿಮ್ಮ ಮನೆಯ ಆರು ತಿಂಗಳ ಖರ್ಚುವೆಚ್ಚ ಸರಿತೂಗಿಸುವಂತಿರಬೇಕು ಎನ್ನುವುದನ್ನು ಮರೆಯಬೇಡಿ.

ನಿಮ್ಮ ವಿಮೆ ಪಾಲಿಸಿ ಪರಿಶೀಲಿಸಿ ಎಷ್ಟೋ ಜನ ವಿಮೆ ಮಾಡಿಸಿರುತ್ತಾರೆ. ಆದರೆ ಪಾಲಿಸಿ ಎಲ್ಲಿಟ್ಟಿದ್ದೇವೆ? ನಾಮಿನಿ ಯಾರು ಎಂಬ ಮಾಹಿತಿಯನ್ನು ಸಂಬಂಧಿಸಿದವರಿಗೆ ಕೊಟ್ಟಿರುವುದರಿಲ್ಲ. ತುರ್ತು ಸಂದರ್ಭದಲ್ಲಿ ಇದರಿಂದ ನಿಮ್ಮನ್ನು ನೆಚ್ಚಿಕೊಂಡವರು ತೊಂದರೆ ಅನುಭವಿಸಬೇಕಾಗುತ್ತದೆ. ನಿಮ್ಮ ವಿಮಾ ಪಾಲಿಸಿಯನ್ನು ಪರಿಶೀಲಿಸಲು ಇದು ಸಕಾಲ. ನೀವು ಮಾಡಿಸಿರುವ ವಿಮಾ ಪಾಲಿಸಿಯ ವಿವರವನ್ನು ಸಂಬಂಧಿಸಿದವರಿಗೆ ಸರಿಯಾಗಿ ವಿವರಿಸಿ, ಪಾಲಿಸಿ ದಾಖಲೆಯನ್ನು ಎಲ್ಲಿಟ್ಟಿದ್ದೀರಿ ಎನ್ನುವುದನ್ನು ಮನೆಯಲ್ಲಿ ತಿಳಿಸಿರಿ. ಟರ್ಮ್ ಇನ್ಷುರೆನ್ಸ್ ಮಾಡಿಸಿಲ್ಲ ಎಂದಾದರೆ ಮೊದಲು ಅದನ್ನು ಮಾಡಿಸಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಆರೋಗ್ಯ ವಿಮೆ ಮಾಡಿಸಿದ್ದೀರಾ ಎಂಬುದನ್ನು ಪರಿಶೀಲಿಸಿಕೊಳ್ಳಿ. ಕೊರೊನಾ ಪಿಡುಗು ವ್ಯಾಪಕವಾಗಿ ಆವರಿಸಿಕೊಂಡ ಆರೋಗ್ಯ ವಿಮೆ ಮತ್ತು ಟರ್ಮ್ ಇನ್ಷುರೆನ್ಸ್​ ಪಾಲಿಸಿ ನಿಯಮಗಳಲ್ಲಿ ಕೆಲ ಕಂಪನಿಗಳು ಬದಲಾವಣೆ ಮಾಡಿವೆ. ವಿಮಾ ಕಂತು ಸಹ ಹೆಚ್ಚಾಗಿದೆ. ಹಾಲಿ ಇರುವ ಆರೋಗ್ಯ ವಿಮೆ ಪಾಲಿಸಿ ನಿಮ್ಮ ಅಗತ್ಯಕ್ಕೆ ಇಲ್ಲ ಎನಿಸಿದರೆ ಪೋರ್ಟ್ ಮಾಡಿಸುವ ಸಾಧ್ಯತೆಯನ್ನು ಪರಿಶೀಲಿಸಿ.

ವೆಚ್ಚದ ಪಟ್ಟಿ ಮಾಡಿ ಈ ವರ್ಷದಲ್ಲಿ ಎದುರಾಗಲಿರುವ ಖರ್ಚುಗಳ ಒಂದು ಪಟ್ಟಿ ಮಾಡಿಕೊಳ್ಳಿ. ನಿಮ್ಮ ಮಕ್ಕಳ ಹುಟ್ಟುಹಬ್ಬ, ಊರಹಬ್ಬ, ಶಿಕ್ಷಣದ ಖರ್ಚು, ಸಂಗಾತಿಗೆ ಕೊಡಿಸಬೇಕು ಎಂದುಕೊಂಡಿರುವ ಒಡವೆ ಅಥವಾ ಮೊಬೈಲ್, ಮನೆ-ಕಾರಿನ ವಿಚಾರ, ಪ್ರವಾಸ… ಹೀಗೆ ಯಾವೆಲ್ಲಾ ದೊಡ್ಡ ಖರ್ಚು ಎದುರಾಗಬಹುದು ಎಂಬುದನ್ನು ಮೊದಲೇ ಅಂದಾಜಿಸುವುದು ಒಳ್ಳೆಯದು. ಅಂದಾಜು ದಿನಾಂಕಗಳನ್ನೂ ಕ್ಯಾಲೆಂಡರ್ ಮೇಲೆ ಗುರುತು ಮಾಡಿಕೊಂಡಿದ್ದರೆ ಯಾವುದೂ ಬಿಟ್ಟುಹೋಗುವುದಿಲ್ಲ.

ಯಾವ ತಿಂಗಳಲ್ಲಿ ಏನು ಕೆಲಸ

ಏಪ್ರಿಲ್: ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಿ. ಇಎಲ್​ಎಸ್​ಎಸ್​ ಫಂಡ್​ಗಳಲ್ಲಿ ಎಸ್​ಐಪಿ ಮೂಲಕ ತೊಡಗಿಸುವುದು ಉತ್ತಮ ಆಯ್ಕೆಯಾಗುತ್ತದೆ. ಎನ್​ಪಿಎಸ್​ ಹೂಡಿಕೆ ಮಾಡಿದರೆ ಹೆಚ್ಚುವರಿ ರಿಯಾಯ್ತಿ ಸಿಗುತ್ತದೆ. ಪರ್ಫಾಮೆನ್ಸ್ ಅವರ್ಡ್ ಅಥವಾ ಬೋನಸ್ ಬಂದಿದ್ದರೆ ಸಾಲ ಚುಕ್ತ ಮಾಡಲು ಗಮನಕೊಡಿ. ಎಫ್​ಡಿ ಮಾಡಿಸಿದ್ದರೆ ಬ್ಯಾಂಕ್​ಗಳಿಗೆ 15ಜಿ / 15ಎಚ್​ ಫಾರಂ ಭರ್ತಿ ಮಾಡಿಕೊಡಿ. ಟಿಡಿಎಸ್ ಕಡಿತ ಮಾಡುವುದು ತಪ್ಪಿಸಿ. 75 ವರ್ಷ ದಾಟಿದ ಹಿರಿಯ ನಾಗರಿಕರು ಪಿಂಚಣಿ ಮತ್ತು ಎಫ್​ಡಿ ಬಡ್ಡಿಯ ಬಗ್ಗೆ 12 ಬಿಬಿಎ ಫಾರಂ ಭರ್ತಿ ಮಾಡಿಕೊಡಿ.

ಮೇ: ಬ್ಯಾಂಕ್​ ಖಾತೆಗಳು, ವಿಮಾ ಪಾಲಿಸಿಗಳಿಗೆ ನಾಮಿನಿ ಸರಿಯಾಗಿದೆಯೇ ಗಮನಿಸಿ. ನಿಮ್ಮ ವಿಮಾ ಕವರೇಜ್, ವಿಮಾ ಕಂತು ಪಾವತಿ ಸರಿಯಾಗಿ ಆಗುತ್ತಿದೆಯೇ ಪರಿಶೀಲಿಸಿಕೊಳ್ಳಿ. ಆಪದ್ಧನ ರೂಪಿಸಿಕೊಳ್ಳಲು ಗಮನಕೊಡಿ. ಒಂದು ವೇಳೆ ಈಗಾಗಲೇ ನೀವೊಂದು ಆಪದ್ಧನ ರೂಪಿಸಿಕೊಂಡಿದ್ದರೆ ಅದರ ಮೊತ್ತಕ್ಕೆ ಶೇ 10ರಷ್ಟು ಹೆಚ್ಚಳ ಮಾಡಿ. ಮೇ 3 ಅಕ್ಷಯ ತದಿಗೆ ಇದೆ. ಹಾಗಂತ ಚಿನ್ನಾಭರಣ ಕೊಳ್ಳಲೇಬೇಕು ಎಂದಿಲ್ಲ. ಇಟಿಎಫ್, ಮ್ಯೂಚುವಲ್ ಫಂಡ್, ಸಾವರಿನ್ ಬಾಂಡ್ ಸೇರಿದಂತೆ ಹಲವು ಮಾರ್ಗಗಳಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ.

ಜೂನ್: ಆರ್​ಬಿಐ ತನ್ನ ಮಾನಿಟರಿ ಪಾಲಿಸಿ ಘೋಷಿಸುವ ತಿಂಗಳು ಇದು. ಠೇವಣಿ ಮೇಲಿನ ಬಡ್ಡಿ ದರಗಳು ಹೆಚ್ಚಾಗಬಹುದು. ಗೃಹ ಸಾಲದ ಬಡ್ಡಿ ದರ ಹೆಚ್ಚಾಗಬಹುದು ಪರಿಶೀಲಿಸಿಕೊಳ್ಳಿ.

ಜುಲೈ: ಕ್ರೆಡಿಟ್ ಕಾರ್ಡ್​ಗಳ ಲಿಮಿಟ್ ಪರಿಶೀಲಿಸಿಕೊಳ್ಳಿ. ಡಿಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳ ಪಿನ್ ನಂಬರ್ ಬದಲಿಸಿ. ವರ್ಷಕ್ಕೊಮ್ಮೆ ಕ್ರೆಡಿಟ್ ರಿಪೋರ್ಟ್ ನೀಡುವ ಸೇವೆಯನ್ನು ಕೆಲ ಹಣಕಾಸು ಸಂಸ್ಥೆಗಳು ಒದಗಿಸುತ್ತವೆ. ಅದನ್ನು ಬಳಸಿಕೊಂಡು ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ. ಸ್ಕೋರ್ ಕಡಿಮೆಯಾಗಿದ್ದಾರೆ ಸರಿಪಡಿಸುವುದು ಹೇಗೆಂದು ಯೋಚಿಸಿ, ಸಲಹೆ ಪಡೆದುಕೊಳ್ಳಿ. ನಿಮ್ಮ ಇನ್​ಕಮ್ ಟ್ಯಾಕ್ಸ್​ ರಿಟರ್ನ್ಸ್​ ಫೈಲ್ ಮಾಡಬೇಕಾದ ತಿಂಗಳು ಇದು.

ಆಗಸ್ಟ್​: ವಿಲ್ ಬರೆದಿಡಿ. ನಂಬಿಕಸ್ಥರಿಗೆ ಅದರ ಪ್ರತಿಯೊಂದನ್ನು ಕೊಡಿ. ನಿಮ್ಮ ಎನ್​ಪಿಎಸ್​ನ ಅಸೆಟ್ ಅಲೊಕೇಶನ್ ಹೇಗಿದೆ ಎಂಬುದನ್ನು ಪರಿಶೀಲಿಸಿ.

ಸೆಪ್ಟೆಂಬರ್: ಹಬ್ಬಸಾಲು ಆರಂಭವಾಗುವ ತಿಂಗಳು. ಹಬ್ಬದ ಖರ್ಚಿಗೆಂದು ಹಣ ತೆಗೆದಿಡಿ. ನಿಮ್ಮ ಹೂಡಿಕೆಯ ಸ್ಥಿತಿಗತಿ ಪರಿಶೀಲಿಸಿ.

ಅಕ್ಟೋಬರ್: ದೀಪಾವಳಿ ಹಬ್ಬದ ಸಂಭ್ರಮ. ಮುಹೂರ್ತ ಟ್ರೇಡಿಂಗ್​ನಲ್ಲಿ ನಂಬಿಕೆ ಇಡುವವರಾದರೆ ಮೊದಲೇ ಒಳ್ಳೆಯ ಕಂಪನಿ ಆರಿಸಿಕೊಂಡಿರಿ. ಹಬ್ಬಕ್ಕಾಗಿ ಕೊಡುವ ಆಫರ್​ಗಳನ್ನು ಸದುಪಯೋಗಪಡಿಸಿಕೊಳ್ಳಿ. ಈವರೆಗೆ ತೆರಿಗೆ ಬಗ್ಗೆ ತಲೆಕೆಡಿಸಿಕೊಳ್ಳದಿದ್ದರೆ ತಕ್ಷಣ ಪ್ಲಾನಿಂಗ್ ಶುರು ಮಾಡಿ.

ನವೆಂಬರ್: ಪ್ರವಾಸಕ್ಕೆ ಹೇಳಿ ಮಾಡಿಸಿದ ಕಾಲ. ದುಡಿಯುವುದೇ ಎಂಜಾಯ್ ಮಾಡೋಕೆ ಅಲ್ವಾ? ಕುಟುಂಬ ಸದಸ್ಯರೊಂದಿಗೆ ಒಂದೊಳ್ಳೇ ಟೂರ್ ಹೋಗಿ ಬನ್ನಿ. ಆದರೆ ಹಣಕಾಸಿನ ವಿಚಾರದಲ್ಲಿ ಎಚ್ಚರದಲ್ಲಿರಿ. ಮಕ್ಕಳ ದಿನವೂ ಇದೇ ತಿಂಗಳಲ್ಲಿ ಬರುತ್ತದೆ. ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸಲು ಪ್ರಯತ್ನಿಸಿ.

ಡಿಸೆಂಬರ್: ಕಳೆದ ವರ್ಷದಲ್ಲಿ ಆದ ಖರ್ಚು ವೆಚ್ಚ ಪರಿಶೀಲಿಸಿ

ಜನವರಿ: 2023ರಲ್ಲಿ ನೀವು ಅನುಸರಿಸಬೇಕು ಎಂದುಕೊಂಡಿರುವ ಹಣಕಾಸು ನಿರ್ಣಯಗಳನ್ನು ಪಟ್ಟಿ ಮಾಡಿಕೊಳ್ಳಿ. ನಿಮ್ಮ ಉದ್ಯೋಗದಾತರಿಗೆ ಕೊಡಲೆಂದು ಆದಾಯ ತೆರಿಗೆ ಪ್ರೂಫ್​ ಸಿದ್ಧಪಡಿಸಿಕೊಳ್ಳಿ.

ಫೆಬ್ರುವರಿ: ಕೇಂದ್ರ ಬಜೆಟ್ ಮಂಡನೆಯಾಗುವ ತಿಂಗಳು. ಬೇಸಿಗೆಯಲ್ಲಿ ಎಲ್ಲಿಗಾದರೂ ಪ್ರವಾಸ ಹೋಗಬೇಕು ಎಂದುಕೊಂಡಿದ್ದರೆ ಈಗಲೇ ಪ್ಲಾನ್ ಮಾಡಲು ಶುರು ಮಾಡಿ.

ಮಾರ್ಚ್: ಹಣಕಾಸು ವರ್ಷ ಪೂರ್ಣಗೊಳ್ಳುವ ತಿಂಗಳು. 2023-24ರ ಹಣಕಾಸು ವರ್ಷಕ್ಕಾಗಿ ಪ್ಲಾನ್ ಫೈನಲೈಸ್ ಮಾಡಿ.

ಇದನ್ನೂ ಓದಿ: Mutual Funds Investment: ಮ್ಯೂಚುವಲ್​ ಫಂಡ್​ ಎಸ್​ಐಪಿ​ ತಿಂಗಳ 10 ಸಾವಿರ ಹೂಡಿಕೆಗೆ 5 ವರ್ಷದಲ್ಲಿ 12 ಲಕ್ಷ ರಿಟರ್ನ್ಸ್

ಇದನ್ನೂ ಓದಿ: ಮ್ಯುಚುವಲ್ ಫಂಡ್ ಹೂಡಿಕೆ ಅರ್ಥಮಾಡಿಕೊಳ್ಳದೆ ಅದರ ಬಗ್ಗೆ ಬೇಕಾಬಿಟ್ಟಿ ವರದಿ ಮಾಡುವುದು ಅರ್ಥಹೀನ: ಡಾ ಬಾಲಾಜಿ ರಾವ್

Published On - 6:00 am, Sun, 3 April 22

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?