Daily Horoscope: ಈ ರಾಶಿಯವರು ವ್ಯವಹಾರ‌ ಜ್ಞಾನದ ಕೊರತೆಯಿಂದ ಹಣ ಕಳೆದುಕೊಳ್ಳಬೇಕಾಗಬಹುದು

09 ಜನವರಿ​ 2025: ಗುರುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಗೌಪ್ಯವಾಗಿ ನಿಮ್ಮ ಯೋಜನೆಯನ್ನು ತಿಳಿದುಕೊಳ್ಳಲು ಶತ್ರುಗಳು ಪ್ರಯತ್ನಿಸಬಹುದು. ಅತಿಯಾದ ಒತ್ತಡದಿಂದ ಮಾಡುವ ಕೆಲಸದಿಂದ ಆರೋಗ್ಯದ ಮೇಲೆ ಪರಿಣಾಮ ಮಾಡಲಿದೆ. ಹಾಗಾದರೆ ಜನವರಿ 09ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ವ್ಯವಹಾರ‌ ಜ್ಞಾನದ ಕೊರತೆಯಿಂದ ಹಣ ಕಳೆದುಕೊಳ್ಳಬೇಕಾಗಬಹುದು
ಈ ರಾಶಿಯವರು ವ್ಯವಹಾರ‌ ಜ್ಞಾನದ ಕೊರತೆಯಿಂದ ಹಣ ಕಳೆದುಕೊಳ್ಳಬೇಕಾಗಬಹುದು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 09, 2025 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ದಶಮೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 18 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:05 ರಿಂದ 03:29ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:01 ರಿಂದ 08:26 ರವರೆಗೆ, ಗುಳಿಕ ಬೆಳಿಗ್ಗೆ 09:51 ರಿಂದ ಮಧ್ಯಾಹ್ನ11:15 ರವರೆಗೆ.

ಮೇಷ ರಾಶಿ: ಇಂದು ಆರ್ಥಿಕ ವ್ಯವಹಾರವನ್ನು ಮಾಡುವವರಿಗೆ ಅವಕಾಶ, ಆದಾಯವೂ ಹೆಚ್ಚಾಗುವುದು. ಪ್ರವಾಸದಲ್ಲಿ ಇರುವ ನಿಮಗೆ ಮಾನಸಿಕ‌ ಚಿಂತೆ ಕಾಡಬಹುದು. ‌ಮನೆಯ ಬಗ್ಗೆಯೆರ ಹೆಚ್ಚು ಯೋಚಿಸುವಿರಿ. ಅನಾರೋಗ್ಯವು ಉತ್ಸಾಹವನ್ನು ಕಡಿಮೆ ಮಾಡುವುದು. ಗೌಪ್ಯವಾಗಿ ನಿಮ್ಮ ಯೋಜನೆಯನ್ನು ತಿಳಿದುಕೊಳ್ಳಲು ಶತ್ರುಗಳು ಪ್ರಯತ್ನಿಸಬಹುದು. ಅತಿಯಾದ ಒತ್ತಡದಿಂದ ಮಾಡುವ ಕೆಲಸದಿಂದ ಆರೋಗ್ಯದ ಮೇಲೆ ಪರಿಣಾಮ ಮಾಡಲಿದೆ. ಮನಸ್ಸಿನ ಚಾಂಚಲ್ಯವನ್ನು ಬಿಡಿಸುವುದು ಕಷ್ಟವೇನಲ್ಲ. ಖರ್ಚಿಗೆ ಬರುವ ಎಲ್ಲ ಮಾರ್ಗವನ್ನೂ ನಿಲ್ಲಿಸುವಿರಿ. ವಿನಾಕಾರಣ ಸಂಗಾತಿಯನ್ನು ದ್ವೇಷಿಸುವಿರಿ. ವಿದ್ಯಾಭ್ಯಾಸವು ನಿಮಗೆ ಬೇಸರ ತರಿಸಬಹುದು. ಯಾರಿಂದಲಾದರೂ ಹಿತವಚನದ ಅವಶ್ಯಕತೆ ಇರುವುದು. ಸ್ತ್ರೀಯರಿಂದ ಇಂದು ಸಹಾಯವನ್ನು ಪಡೆಯುವಿರಿ. ಬರಬೇಕಾದ ಹಣವನ್ನು ನೀವೇ ಖುದ್ದಾಗಿ ಹೋಗಿ ಪಡೆಯಬೇಕಾಗಬಹುದು. ಸುಮ್ಮನೇ ಯಾರ ಮೇಲೋ ಸಿಟ್ಟಾಗುವುದು ಬೇಡ.

ವೃಷಭ ರಾಶಿ: ಕೃಷಿಯಿಂದ ಅಧಿಕಲಾಭವನ್ನು ಪಡೆಯುಬಿರಿ. ಪರಿಶ್ರಮದ ಗಳಿಕೆಯನ್ನು ಉಳಿಸಿಕೊಳ್ಳುವುದು ಉತ್ತಮ. ಬೇಕಾದ ವಸ್ತುವು ಕಣ್ಮರೆಯಾಗಬಹುದು. ಸ್ವಂತ ವಾಹನದಿಂದ ನೀವು ಲಾಭವನ್ನು ಗಳಿಸುವಿರಿ. ಸಂಯಮವನ್ನು ಬಿಡದಹಾಗೆ ವರ್ತಿಸಿ ಭೇಷ್ ಎನಿಸಿಕೊಳ್ಳುವಿರಿ. ಇಂದು ನಿಮಗೆ ಜೊತೆಗೆ ಯಾರೂ ಇಲ್ಲ ಎಂಬ ಅನಾಥಪ್ರಜ್ಞೆಯು ಕಾಡುವುದು. ಖರ್ಚು ಮಾಡುವ ಸಂದರ್ಭ ಬಂದರೂ ಅದು ತಪ್ಪಿ ಹೋಗುವುದು.‌ ಉದ್ಯಮಿಗಳು ನೌಕರರ ಕ್ಷೇಮ ಸಮಾಚಾರವನ್ನು ವಿಚಾರಿಸಿಕೊಳ್ಳುವಿರಿ. ಸ್ಥಿರಾಸ್ತಿಯನ್ನು ಮಾರಾಟ ಮಾಡಲು ಇಷ್ಟವಿಲ್ಲದಿದ್ದರೂ ಅನಿವಾರ್ಯವೆನಿಸುವುದು. ವಿದೇಶದ ವ್ಯವಹಾರದಲ್ಲಿ ನಿಮಗೆ ಹೆಚ್ಚು ಪ್ರಯೋಜನವನ್ನು ನೀಡುವವರನ್ನು ಭೇಟಿಯಾಗುವಿರಿ. ಮಾತಿನ ಮೇಲೆ ನೀವು ಹಿಡಿತವನ್ನು ಸಾಧಿಸಬೇಕಾದೀತು. ಕಲಾವಿದರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವರು. ವೃತ್ತಿಯಲ್ಲಿ ಬಡ್ತಿಯನ್ನು ಅಪೇಕ್ಷಿಸುವಿರಿ. ಮುಖಂಡರಿಗೆ ಬೆಂಬಲ ಸಿಗಲಿದೆ.

ಮಿಥುನ ರಾಶಿ: ಇಂದು ಮಕ್ಕಳ ಕ್ಷೇಮದ ಬಗ್ಗೆ ಅತಿಯಾದ ಕಾಳಜಿ ಇರುವುದು. ಸಹೋದರರ ನಡುವೆ ಆರ್ಥಿಕ ಸಂಬಂಧವು ಉತ್ತಮವಾಗಿ ಇರುವುದಿಲ್ಲ. ವಯಸ್ಸಿಗೆ ಬಂದ ಮಕ್ಕಳ ವಿವಾಹದ ಚಿಂತೆ‌ ಇರುಬುದು. ಪ್ರೀತಿಯಿಂದ ಕೊಟ್ಟ ವಸ್ತುವನ್ನು ಮತ್ತೆ ಕೊಡುವುದು ಬೇಡ. ಸಂಗಾತಿಯ ಜೊತೆ ಸಣ್ಣ ವಿಚಾರಗಳಿಗೂ ಜಗಳವಾಡುವಿರಿ. ಮಕ್ಕಳ ಬಗ್ಗೆ ನಿಮ್ಮ ಭಾವನೆ ತಪ್ಪಾಗಬಹುದು. ಯಥಾರ್ಥವಾಗಿ ಎಲ್ಲವನ್ನೂ ತಿಳಿದುಕೊಳ್ಳುವುದು ಒಳ್ಳೆಯದು. ಏಕಾಂತವು ಹೆಚ್ಚು ರುಚಿಸುವುದು. ಆದಾಯವು ಕಡಿಮೆ ಆಗಿ ಅನಿವಾರ್ಯದ ಖರ್ಚು ಹೆಚ್ಚಾಗಬಹುದು. ಮಗಳನ್ನು ಬಹಳ ಅಕ್ಕರೆಯಿಂದ ನೋಡುವಿರಿ. ನ್ಯಾಯಾಲಯದ ವಿಷಯದಲ್ಲಿ ನಿಮ್ಮ ಊಹೆಯು ಸರಿಯಾಗದು. ಮನೆಯಲ್ಲಿ ಮಕ್ಕಳು ನಿಮ್ಮನ್ನು ಲೆಕ್ಕಕ್ಕೆ ತೆಗದುಕೊಳ್ಳದೇ ಹೋಗಬಹುದು. ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಲಿದೆ. ಇಂದಿನ‌ ಹೆಚ್ಚಿನ ವಿಚಾರಗಳನ್ನು ನಕರಾತ್ಮಕವಾಗಿಯೇ ಚಿಂತಿಸುವಿರಿ.

ಕರ್ಕಾಟಕ ರಾಶಿ: ಇಂದು ಅಪರೂಪದ ಅತಿಥಿ ಸತ್ಕಾರದಿಂದ ನಿಮಗೆ ಸಂತೋಷ. ಮಿತ್ರನ ನಂಬಿಕೆಯನ್ನು ಕಳೆದುಕೊಂಡು, ನೀವು ಇಂದು ಎಲ್ಲರಿಂದ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಮಾತನಾಡುವಾಗ ಪೂರ್ಣ ಮಾಹಿತಿ ಇರಲಿ. ಯಾರನ್ನೂ ಸುಮ್ಮನೇ ದೂಷಿಸುವುದು ಬೇಡ. ಸರಿಯಾದ ಕಾರಣವನ್ನು ಕೊಡಬೇಕಾಗುವುದು. ಮಂಗಲ ಕಾರ್ಯಗಳಿಂದ ನೆಮ್ಮದಿ ಇರುವುದು. ಮಿತ್ರನ ನಂಬಿಕೆಯನ್ನು ಕಳೆದುಕೊಂಡು, ಆದ ನಷ್ಟಕ್ಕೆ ದುಃಖಿಸುವಿರಿ. ಸ್ಥಿರಾಸ್ತಿಯನ್ನು ವ್ಯವಹಾರ‌ ಜ್ಞಾನದ ಕೊರತೆಯಿಂದ ಕಳೆದುಕೊಳ್ಳಬಹುದು. ಬಂಧುಗಳ ನಡುವೆ ಪರಸ್ಪರ ಸೌಹಾರ್ದವು ಬೆಳೆಯಬಹುದು. ಎಲ್ಲರ‌ ಮೇಲೂ ಸಿಟ್ಟು ಮಾಡಿಕೊಂಡು ಸುಮ್ಮನಿರುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಆದ ಪ್ರಗತಿಯಿಂದ ನಿಮಗೆ ಸಂತೋಷವಾಗಲಿದೆ. ಸಮಯಸ್ಫೂರ್ತಿಯಿಂದ ಇಂದಿನ ಅನಾಹುತವನ್ನು ತಪ್ಪಿಸಿಕೊಳ್ಳುವಿರಿ. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು.

ಸಿಂಹ ರಾಶಿ: ನಿಮ್ಮಿಂದ ದೂರಾಗುವ ಜನರನ್ನು ಉಳಿಸಿಕೊಳ್ಳುವಿರಿ. ಸಾಹಿತ್ಯಾಸಕ್ತಿಯುಳ್ಳವರಿಗೆ ಹೊಸ ದಿಕ್ಕು ತೋಚುವುದು. ಸೇವಾ ಮನೋಭಾವಕ್ಕೆ ಗೌರವ ಸಿಗಲಿದೆ. ಬಂಧುಗಳು ನಿಮ್ಮ ಸಮಸ್ಯೆಗೆ ಸ್ಪಂದಿಸುವರು. ವ್ಯಾಪಾರವು ಲಾಭಾಂಶವನ್ನು ಹೆಚ್ಚು ಪಡೆಯುವುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಸಂಗಾತಿಯು ನಿಮ್ಮ ಮುಂದಿನ ಯೋಜನೆಗೆ ನಕಾರವನ್ನು ಹೇಳುವರು. ಇಂದಿನ ಕಾರ್ಯದಲ್ಲಿ ಮುನ್ನಡೆಯಿರಲಿದ್ದು ನಿಮ್ಮ ಬಗ್ಗೆ ಸದಭಿಪ್ರಾಯವು ಇರುವುದು. ಆಪ್ತರ ಜೊತೆ ಮಾಡಿದ‌ ಸಮಾಲೋಚನೆಯಿಂದ ಮನಸ್ಸಿಗೆ ಸಂತೋಷ ಸಿಗುವುದು. ಸ್ಥಳ ಬದಲಾವಣೆಯಿಂದ ಹೊಂದಿಕೊಳ್ಳುವುದು ಕಷ್ಟವಾದೀತು. ಆಕಸ್ಮಿಕವಾದ ವಿಷಯದಿಂದ ನಿಮಗೆ ದುಃಖವಾಗುವುದು. ವಿದ್ಯಾಭ್ಯಾಸದ ಕಾರಣಕ್ಕೆ ಪ್ರಯಾಣ ಮಾಡು ಸನ್ನಿವೇಶವು ಬರಬಹುದು. ಸರ್ಕಾರದ ಆರ್ಥಿಕ ತಜ್ಞರಿಗೆ ಪದೋನ್ನತಿ‌ ಸಿಗಲಿದೆ.

ಕನ್ಯಾ ರಾಶಿ: ಇಂದು ನಿಮ್ಮದೇ ಆದ ಒರಟುತನವು ಇತರರಿಗೆ ಕಷ್ಟಕೊಡುವುದು. ಸಾಮಾಜಿಕ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಪ್ರಮುಖ ಸ್ಥಾನದಲ್ಲಿ ಇರುವವರು ವ್ಯವಹಾರವು ತಪ್ಪದಂತೆ ನೋಡಿಕೊಳ್ಳಬೇಕು. ವ್ಯವಹಾರದಲ್ಲಿ ಊಹಿಸಿದ್ದಕ್ಕಿಂತ ಹೆಚ್ಚಿನ ಲಾಭವು ಸಿಗುವುದು. ದುಡುಕಿ ಮಾತನಾಡಿ ಸತ್ಯವನ್ನು ಹೇಳುವಿರಿ. ಆಸ್ತಿಯ ಕಲಹವನ್ನು ನ್ಯಾಯಾಲಯಕ್ಕೆ ತಡಗೆದುಕೊಂಡು ಹೋಗುವಿರಿ. ಬಂಧುಗಳ ಮಾತಿನಿಂದ ಬೇಸರವಾಗಲಿದೆ. ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿ ಇರಲಿ. ಸಂಗಾತಿಯಿಂದ ನಿಮಗೆ ನೂತನ ವಸ್ತ್ರಗಳು ಬರಬಹುದು. ನಿಮ್ಮ ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಕೆಲಸದಲ್ಲಿ ಪ್ರಾಮಾಣಿಕತೆ ಕಡಿಮೆ ಆದಂತೆ ತೋರಬಹುದು. ಪಾಲುದಾರಿಕೆಯಿಂದ ಹೊರಬರವುದು ಒಳ್ಳೆಯದು ಎಂದು ಅನ್ನಿಸಬಹುದು. ಯಾವುದನ್ನಾದರೂ ಆಯ್ಕೆ ಮಾಡುವಾಗ ನಿಮ್ಮನೇ ನೀವು ಕೇಳಿಕೊಳ್ಳುವುದು ಉತ್ತಮ. ಆತ್ಮೀಯವಾಗಿ ಮಾತನಾಡುವವರು ಇಂದು ಸಿಗಬಹುದು.