AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರದವರಿಗೆ ಜೀವನ ಸಂಗಾತಿಗಳ ಸಂಖ್ಯೆ ಹೆಚ್ಚಿರುತ್ತದೆ…!!

ಹುಬ್ಬ ನಕ್ಷತ್ರವು ಇಪ್ಪತ್ತೇಳು ನಕ್ಷತ್ರಗಳಲ್ಲಿ ಹನ್ನೊಂದನೆಯದು. ಇದನ್ನು "ಭಗ" ದೇವತೆಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಪ್ರಿಯವಾದ ಮಾತುಗಾರರು, ಕೊಡುಗೈ ದಾನಿಗಳು, ಹೆಚ್ಚಿನ ಕಾಂತಿಯುಳ್ಳವರು ಮತ್ತು ಸಾಹಸಿಗಳಾಗಿರುತ್ತಾರೆ. ಆದರೆ ಕೆಲವೊಮ್ಮೆ ಕ್ರೂರ ಸ್ವಭಾವ ಮತ್ತು ಅತಿಯಾದ ಆಸೆಗಳಿಂದ ಬಳಲಬಹುದು. ಫಾಲ್ಗುಣ ಮಾಸ ಈ ನಕ್ಷತ್ರದಿಂದ ಪ್ರಾರಂಭವಾಗುತ್ತದೆ ಎಂಬುದು ವಿಶೇಷ.

ಈ ನಕ್ಷತ್ರದವರಿಗೆ ಜೀವನ ಸಂಗಾತಿಗಳ ಸಂಖ್ಯೆ ಹೆಚ್ಚಿರುತ್ತದೆ...!!
Hubba Nakshatra
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Jan 08, 2025 | 9:37 AM

Share

ಇಪ್ಪತ್ತೇಳು ನಕ್ಷತ್ರಗಳಲ್ಲಿ ಇದು ಹನ್ನೊಂದನೇ ನಕ್ಷತ್ರ. ಇದರ ದೇವತೆ ಭಗ. ಅಚ್ಚ ಕನ್ನಡದಲ್ಲಿ ಇದಕ್ಕೆ ಹುಬ್ಬ ಎಂದೂ ಕರೆಯುತ್ತಾರೆ. ಇದು ಉಗ್ರ ಸ್ವಭಾವದ ನಕ್ಷತ್ರ ಎಂಬುದಾಗಿ ಹೇಳುತ್ತಾರೆ. ಎರಡು ನಕ್ಷತ್ರಗಳಿಂದ ಕೂಡಿರುವ ಇದು ಭೂಮಿಯಿಂದ ನೋಡುವಾಗ ಮಲಗುವ ಮಂಚದಂತೆ ಕಾಣಿಸುತ್ತದೆ. ಫಾಲ್ಗುಣ ಮಾಸವಾಗುವುದು ಇದೇ ನಕ್ಷತ್ರದ ಕಾರಣಕ್ಕೆ. ಸಿಂಹ ರಾಶಿಯಲ್ಲಿ ಬರುವ ಮತ್ತೊಂದು ಪೂರ್ಣ ನಕ್ಷತ್ರವಿದಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಮ ಮತ್ತು ಟ ಅಕ್ಷರದಿಂದ ನಕ್ಷತ್ರನಾಮವನ್ನು ಇಡುತ್ತಾರೆ. ಇದರಲ್ಲಿ ಜನಿಸದವರು ಎಂತಹವರಾಗಿರುತ್ತಾರೆ?

ಪ್ರಿಯವಾದ ಮಾತುಗಾರ:

ಇವರು ಇನ್ನೊಬ್ಬರಿಗೆ ಪ್ರಿಯವಾಗುವಂತೆ ಮಾತನಾಡುತ್ತಾರೆ. ಸ್ಪಷ್ಟವಾಗಿ ದನಿಯ ಏರಿಳಿತದ ಜೊತೆ ಮಾತನಾಡುವುದರಿಂದ ಮನೋಹವಾಗಿ ಇರುತ್ತದೆ.

ಕೊಡುಗೈ ದಾನಿ:

ತನ್ನ ಬಳಿ ಇರುವ ವಸ್ತು ಅಥವಾ ಸಂಪತ್ತನ್ನು ಇನ್ನೊಬ್ಬರಿಗೆ ದಾನವಾಗಿ ಕೊಡುವ ಮನಸ್ಸು ಇರುವವನು. ದಾನಶೀಲವು ಇವರಲ್ಲಿ ಅಧಿಕವಾಗಿ ಕಾಣಿಸುವುದು.

ಮೈಕಾಂತಿ ಹೆಚ್ಚು:

ಇವರ ಚರ್ಮದ ಕಾಂತಿ ಆಕರ್ಷಕವಾಗಿ ಇರುತ್ತದೆ. ಹೊಳಪಿನ ಶರೀರ ಇವರದ್ದು. ತೇಜಸ್ಸು ಉಳ್ಳವರಂತೆ ಕಾಣಿಸುವರು.

ತಿರುಗಾಟ ಅಧಿಕ:

ಕುಳಿತಲ್ಲಿ ಕುಳಿತುಕೊಳ್ಳುವ ಸ್ವಭಾವ ಇರದು. ‌ಕ್ರಿಯಾಶೀಲರಾಗಿ ಓಡಾಟ ಮಾಡುತ್ತಲೇ ಇರಬೇಕು. ಕೆಲಸವಿಲ್ಲದಿದ್ದರೂ ಓಡಾಟ ಮಾಡಲಿಕ್ಕಾಗಿಯಾದರೂ ಕೆಲಸವನ್ನು ಹುಡುಕುವರು.

ರಾಜಸೇವಕ:

ರಾಜನ ಅಥವಾ ರಾಜನಿಗೆ ಸಮಾನರಾದವರ ಬಳಿ ಯಾವುದಾದರೂ ಒಂದು ಸೇವಾವೃತ್ತಿಯನ್ನು ಮಾಡುವರು. ಅದರಲ್ಲಿ ರಕ್ತಿ ಅಧಿಕ.

ಶೂರ:

ಪರಾಕ್ರಮವನ್ನು ತೋರಿಸಲು ಹಿಂಜರಿಯುವುದಿಲ್ಲ. ಸಿಂಹದಂತಹ ಶೌರ್ಯ ಇವರಲ್ಲಿ.‌ ಯಾವುದನ್ನೂ ಮಾಡಬಲ್ಲ ಸಾಮರ್ಥ್ಯ ಇವರಲ್ಲಿರುವುದು.

ಸಾಹಸ ವೃತ್ತಿ:

ವೇಗವಾಗಿ ಕೆಲಸವನ್ನು ಮಾಡುತ್ತಾರೆ ಮತ್ತು ಪೂರ್ವಾಪರ ಯೋಚನೆ ಕಡಿಮೆ. ಏನನ್ನಾದರೂ ಮಾಡಬೇಕು ಎಂದುಕೊಂಡರೆ ಮಾಡಿ ಮುಗಿಸುವುದು. ಅನಂತರ ಬಂದಿದ್ದನ್ನು ಎದುರಿಸುವ ಮನೋಭಾವ.

ಹೆಚ್ಚು ಸಂಗಾತಿ:

ಜೀವನದಲ್ಲಿ ಹೆಚ್ಚು ಸಂಗಾತಿಗಳು ಬರಬಹುದು. ಪತ್ನಿಯನ್ನೋ ಪತಿಯನ್ನೋ ಕಲಹಗಳಿಂದ ಪ್ರೀತಿಯಿಂದ ಮರಣದಿಂದ ಹೀಗೆ ನಾನಾಪ್ರಕಾರಗಳಿಂದ ಒಂದಕ್ಕಿಂತ ಹೆಚ್ಚು ಪಡೆಯುವರು.

ಆಸೆ ಅಧಿಕ:

ಅಸೆ ಅತಿಯಾಗಿರುವ ನಕ್ಷತ್ರ ಇದು. ಕಾಮವನ್ನು ಪೂರೈಸಿಕೊಳ್ಳದೇ ದುಃಖಿಸುವ ಸಂದರ್ಭವೂ ಬರಲಿದೆ. ಅತಿ ಆಸೆ ಅತಿ ದುಃಖವನ್ನು ತರುವುದು. ಶುಕ್ರನು ಈ ನಕ್ಷತ್ರದ ಗ್ರಹವಾದ ಕಾರಣ ಭೋಗದಲ್ಲಿ ರಕ್ತಿ ಹೆಚ್ಚು.

ಇದನ್ನೂ ಓದಿ: Vaikuntha Ekadashi 2025: ವೈಕುಂಠ ಏಕಾದಶಿಯಂದು ಈ ತಪ್ಪುಗಳನ್ನು ಮಾಡಬೇಡಿ

ಸ್ವಭಾವ ಕ್ರೂರ:

ವಾಸ್ತವಿಕವಾಗಿ ಇವರು ಕ್ರೂರಸ್ವಭಾವ ಉಳ್ಳವರು. ಸಿಟ್ಟು, ಇನ್ನೊಬ್ಬರ ಸಂತೋಷವನ್ನು ಹಾಳು ಮಾಡುವರು, ಅಸಹನೆ, ಅಸೂಯೆ ಇವುಗಳು ಹೆಚ್ಚಾಗಿ ಇರುತ್ತದೆ. ಅತಿಯಾದ ಹಾಗೂ ಅನವಶ್ಯಕವಾದ ಅಸೆ. ಅಹಂಕಾರಗಳಿಂದ ಕೂಡಿದವರು ಇವರು. ಏಕೆಂದರೆ ಇದು ಉಗ್ರ ನಕ್ಷತ್ರ. ಆದ್ದರಿಂದ ಇವರ ಸ್ವಭಾವವೂ ಉಗ್ರವೇ.

ವಿಲಾಸಿ ಜೀವನಕ್ಕೆ ಬೇಕಾದ ಕಾರ್ಯಗಳನ್ನು ಈ ನಕ್ಷತ್ರದಲ್ಲಿ ಆರಂಭಿಸಿದರೆ ಶುಭ. ಆದಾಯಗಳು ಹೆಚ್ಚು ಬರುತ್ತವೆ. ಆರ್ಥಿಕತೆಯ ಎತ್ತರಕ್ಕೆ ಏರಲು ಸಾಧ್ಯವಾಗುವುದು. ಇಂತಹ ವಿಶೇಷತೆಯುಳ್ಳ ಅಪರೂಪದ ನಕ್ಷತ್ರ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:32 am, Wed, 8 January 25

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ