ಮನೆಯಲ್ಲಿ ಹನುಮಂತನ ಫೋಟೋ ಇಡುವ ಸರಿಯಾದ ದಿಕ್ಕು ಯಾವುದು?

ಮನೆಯಲ್ಲಿ ಹನುಮಂತನ ಮೂರ್ತಿ ಅಥವಾ ಚಿತ್ರ ಇಡುವುದರಿಂದ ಸಂತೋಷ, ಶಾಂತಿ ಮತ್ತು ಸಂಪತ್ತು ದೊರೆಯುತ್ತದೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಹನುಮಂತನ ವಿವಿಧ ಭಂಗಿಗಳ ಚಿತ್ರಗಳನ್ನು ನಿರ್ದಿಷ್ಟ ದಿಕ್ಕುಗಳಲ್ಲಿ ಇಡುವುದರಿಂದ ವಿಭಿನ್ನ ಫಲಿತಾಂಶಗಳು ದೊರೆಯುತ್ತವೆ. ಉದಾಹರಣೆಗೆ, ಪಶ್ಚಿಮ ದಿಕ್ಕಿನಲ್ಲಿ ಧ್ವಜ ಹಿಡಿದ ಹನುಮಂತನ ಚಿತ್ರ ಯಶಸ್ಸನ್ನು ತರುತ್ತದೆ, ಆಗ್ನೇಯ ದಿಕ್ಕಿನಲ್ಲಿ ಇಟ್ಟ ಹನುಮಂತನ ಚಿತ್ರ ಧೈರ್ಯವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಮನೆಯಲ್ಲಿ ಹನುಮಂತನ ಫೋಟೋ ಇಡುವ ಸರಿಯಾದ ದಿಕ್ಕು ಯಾವುದು?
Hanuman Murti Placement Vastu Tips For Happiness And Prosperity
Follow us
ಅಕ್ಷತಾ ವರ್ಕಾಡಿ
|

Updated on:Jan 08, 2025 | 3:47 PM

ಮನೆಯಲ್ಲಿ ಹನುಮಂತನ ಮೂರ್ತಿ ಮತ್ತು ಚಿತ್ರಗಳನ್ನು ಇಡುವುದರಿಂದ ಸಂತೋಷ, ಶಾಂತಿ ಮತ್ತು ಸಂಪತ್ತು ದೊರೆಯುತ್ತದೆ. ಇದಲ್ಲದೇ ಮನೆಯಲ್ಲಿನ ಎಲ್ಲಾ ರೀತಿಯ ರೋಗಗಳು, ದೋಷಗಳು ದೂರವಾಗಿ ಕುಟುಂಬ ಸದಸ್ಯರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ನಂಬಲಾಗಿದೆ. ಆದರೆ ಮನೆಯಲ್ಲಿ ಹನುಮಂತನ ಮೂರ್ತಿ ಅಥವಾ ಚಿತ್ರ ಇಡುವ ಮೊದಲು ಕೆಲವು ವಾಸ್ತು ಸಲಹೆಗಳನ್ನು ಅನುಸರಿಸುವುದು ಅಗತ್ಯವಾಗಿದೆ.

ಗಾಳಿಯಲ್ಲಿ ಹಾರುತ್ತಿರುವ ಹನುಮಂತನ ಚಿತ್ರವನ್ನು ಮನೆಯಲ್ಲಿ ಹಾಕಬಹುದು. ಆ ಫೋಟೋದಲ್ಲಿ ರಾಮ ಹನುಮಂತನ ಹೆಗಲ ಮೇಲಿದ್ದರೆ ಚೆಂದ. ಹೀಗೆ ಮಾಡಿದರೆ ಈ ವರ್ಷ ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವ ಹೆಚ್ಚುತ್ತದೆ. ಜೀವನವು ಸಂತೋಷದಿಂದ ತುಂಬಿರುತ್ತದೆ ಎಂದು ನಂಬಲಾಗುತ್ತದೆ.

ಇದಲ್ಲದೇ ಕೈಯಲ್ಲಿ ಧ್ವಜವನ್ನು ಹಿಡಿದುಕೊಂಡು ಮನೆಯ ಪಶ್ಚಿಮ ದಿಕ್ಕಿನಲ್ಲಿ ನಿಂತಿರುವ ಹನುಮಂತನ ಫೋಟೋವನ್ನು ಇರಿಸಿದರೆ ನೀವು ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ ಮತ್ತು ಪ್ರತಿ ಕಾರ್ಯದಲ್ಲಿ ಯಶಸ್ವಿಯಾಗುತ್ತೀರಿ ಎಂದರ್ಥವನ್ನು ಸೂಚಿಸುತ್ತದೆ.

ಇದನ್ನೂ ಓದಿ: ಮಹಾಕುಂಭಕ್ಕೆ ರಸ್ತೆಯುದ್ದಕ್ಕೂ 17 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 84 ಕಂಬಗಳು; ಶಿವನ 108 ನಾಮಗಳಿಂದ ವಿಶೇಷ ವಿನ್ಯಾಸ

ಮನೆಯ ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಗಿಡುಗ ಹಿಡಿದು ನಿಂತಿರುವ ಹನುಮಂತನ ಚಿತ್ರವನ್ನಿಟ್ಟು ಪೂಜಿಸಿದರೆ ಜೀವನದಲ್ಲಿ ಕಳೆದು ಹೋದ ಆತ್ಮಸ್ಥೈರ್ಯ ಮರಳಿ ಬರುವುದಲ್ಲದೆ ಧೈರ್ಯವೂ ಬರುತ್ತದೆ ಎಂಬ ನಂಬಿಕೆಯಿದೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ಸಂಜೀವಿನಿ ಪರ್ವತವನ್ನು ಹೊತ್ತ ಫೋಟೋವನ್ನು ಇಡುವುದರಿಂದ ಭಗವಾನ್ ಹನುಮಂತನ ಆಶೀರ್ವಾದ ಮಾತ್ರವಲ್ಲದೆ ಉತ್ತಮ ಆರೋಗ್ಯ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ಗುಣವಾಗುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:45 pm, Wed, 8 January 25