Solar and Lunar Eclipses in 2025: 2025ರಲ್ಲಿ ಎಷ್ಟು ಬಾರಿ ಗ್ರಹಣ ಸಂಭವಿಸಲಿದೆ ಮತ್ತು ಯಾವಾಗ?

2025ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ ಎರಡು ಸೂರ್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣ. ಆದರೆ ಇವುಗಳಲ್ಲಿ ಒಂದು ಮಾತ್ರ ಭಾರತದಲ್ಲಿ ಗೋಚರಿಸಲಿದೆ. ಹಾಗಾದರೆ 2025 ರಲ್ಲಿ ಯಾವ ದಿನಾಂಕಗಳಲ್ಲಿ ಸೂರ್ಯ, ಚಂದ್ರ ಗ್ರಹಣಗಳು ಸಂಭವಿಸುತ್ತವೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

Solar and Lunar Eclipses in 2025: 2025ರಲ್ಲಿ ಎಷ್ಟು ಬಾರಿ ಗ್ರಹಣ ಸಂಭವಿಸಲಿದೆ ಮತ್ತು ಯಾವಾಗ?
Solar And Lunar Eclipses 2025
Follow us
ಅಕ್ಷತಾ ವರ್ಕಾಡಿ
|

Updated on: Jan 08, 2025 | 8:06 AM

2025ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ ಎರಡು ಗ್ರಹಣಗಳು ಸೂರ್ಯನ ಮೇಲೆ ಮತ್ತು ಎರಡು ಗ್ರಹಣಗಳು ಚಂದ್ರನ ಮೇಲೆ ಪರಿಣಾಮ ಬೀರುತ್ತವೆ. ಆದರೆ ಇವುಗಳಲ್ಲಿ ಒಂದು ಮಾತ್ರ ಭಾರತದಲ್ಲಿ ಕಂಡುಬರುತ್ತದೆ. ಉಳಿದ ಮೂರು ಗ್ರಹಣಗಳು ಭಾರತದಲ್ಲಿ ಗೋಚರಿಸುವುದಿಲ್ಲ. ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಗ್ರಹಣದ ಅವಧಿಯನ್ನು ಅಶುಭ ಸಮಯ ಎಂದು ಕರೆಯಲಾಗುತ್ತದೆ. ಗ್ರಹಣದ ಸಮಯದಲ್ಲಿ ಯಾವುದೇ ಪೂಜೆಗಳು ಮತ್ತು ಶುಭ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ಹಾಗಾದರೆ 2025 ರಲ್ಲಿ ಯಾವ ದಿನಾಂಕಗಳಲ್ಲಿ ಗ್ರಹಣಗಳು ಸಂಭವಿಸುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

2025 ರಲ್ಲಿ ನಾಲ್ಕು ಗ್ರಹಣಗಳು:

ಮಾರ್ಚ್ 14 ರಂದು ಮೊದಲ ಚಂದ್ರಗ್ರಹಣ:

ಮೊದಲ ಗ್ರಹಣವು 2025 ರಲ್ಲಿ ಚಂದ್ರನ ಮೇಲೆ ಪರಿಣಾಮ ಬೀರುತ್ತದೆ. ಮಾರ್ಚ್ 14ರ ಹುಣ್ಣಿಮೆಯಂದು ಚಂದ್ರಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಚಂದ್ರಗ್ರಹಣದ ಸಮಯ ಬೆಳಿಗ್ಗೆ. ಇಂತಹ ಪರಿಸ್ಥಿತಿಯಲ್ಲಿ ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಈ ಚಂದ್ರಗ್ರಹಣವು ಅಮೆರಿಕ, ಪಶ್ಚಿಮ ಯುರೋಪ್, ಪಶ್ಚಿಮ ಆಫ್ರಿಕಾ, ಉತ್ತರ ಮತ್ತು ದಕ್ಷಿಣ ಅಟ್ಲಾಂಟಿಕ್ ಸಾಗರದಂತಹ ಪ್ರದೇಶಗಳಲ್ಲಿ ಗೋಚರಿಸುತ್ತದೆ.

ಮಾರ್ಚ್ 29 ರಂದು ಭಾಗಶಃ ಸೂರ್ಯಗ್ರಹಣ:

2025ರಲ್ಲಿ ಎರಡನೇ ಗ್ರಹಣ ಸಂಭವಿಸಲಿದೆ. ಮಾರ್ಚ್ 29 ರ ಅಮಾವಾಸ್ಯೆಯಂದು ಸೂರ್ಯಗ್ರಹಣ ಸಂಭವಿಸುತ್ತದೆ. ಆದರೆ ಇದು ಭಾಗಶಃ ಸೂರ್ಯಗ್ರಹಣ. ಈ ಸೂರ್ಯಗ್ರಹಣ ಕೂಡ ಭಾರತದಲ್ಲಿ ಗೋಚರಿಸುವುದಿಲ್ಲ. ಉತ್ತರ ಅಮೆರಿಕ, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಉತ್ತರ ಅಟ್ಲಾಂಟಿಕ್ ಸಾಗರ, ಯುರೋಪ್ ಮತ್ತು ವಾಯುವ್ಯ ರಷ್ಯಾದ ಜನರು ಈ ಗ್ರಹಣವನ್ನು ನೋಡುತ್ತಾರೆ.

ಇದನ್ನೂ ಓದಿ: ವರ್ಷದ ಮೊದಲ ಪ್ರದೋಷ ವ್ರತ; ಆರ್ಥಿಕ ಸಮಸ್ಯೆ ದೂರವಾಗಲು ಈ ರೀತಿ ಮಾಡಿ

ಸೆಪ್ಟೆಂಬರ್‌ನಲ್ಲಿ ಸಂಪೂರ್ಣ ಚಂದ್ರಗ್ರಹಣ:

ಸೆಪ್ಟೆಂಬರ್ 7 ರಂದು ಚಂದ್ರ ಪೂರ್ಣಗೊಳ್ಳಲಿದೆ. ಇದನ್ನು ಹುಣ್ಣಿಮೆ ಎನ್ನುತ್ತಾರೆ. ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ರಾತ್ರಿ 8:58 ಕ್ಕೆ ಸಂಭವಿಸುತ್ತದೆ. ಈ ಚಂದ್ರಗ್ರಹಣವು ಅದೇ ದಿನ ಮಧ್ಯಾಹ್ನ 2:25 ರವರೆಗೆ ಇರುತ್ತದೆ. ಗ್ರಹಣದ ಸಮಯದಲ್ಲಿ ಚಂದ್ರನು ಕಡು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸಲಿದೆ. ಈ ಚಂದ್ರಗ್ರಹಣ ಏಷ್ಯಾದ ಎಲ್ಲಾ ದೇಶಗಳಲ್ಲಿ ಗೋಚರಿಸಲಿದೆ. ಯುರೋಪ್, ಅಂಟಾರ್ಕ್ಟಿಕಾ, ಪಶ್ಚಿಮ ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ, ಹಿಂದೂ ಮಹಾಸಾಗರ ಪ್ರದೇಶದಲ್ಲಿಯೂ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದೆ.

ಸೆಪ್ಟೆಂಬರ್ 21-22 ರಂದು ವರ್ಷದ ಕೊನೆಯ ಗ್ರಹಣ:

ವರ್ಷದ ಕೊನೆಯ ಗ್ರಹಣವು ಕೆಲವು ಪ್ರದೇಶಗಳಲ್ಲಿ ಸೆಪ್ಟೆಂಬರ್ 21 ರಂದು ಮತ್ತು ಇತರ ಪ್ರದೇಶಗಳಲ್ಲಿ 22 ರಂದು ಸಂಭವಿಸುತ್ತದೆ. ಈ ಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಈ ಭಾಗಶಃ ಸೂರ್ಯಗ್ರಹಣವು ನ್ಯೂಜಿಲೆಂಡ್, ಪೂರ್ವ ಮೆಲನೇಷಿಯಾ, ದಕ್ಷಿಣ ಪಾಲಿನೇಷ್ಯಾ ಮತ್ತು ಪಶ್ಚಿಮ ಅಂಟಾರ್ಕ್ಟಿಕಾದಲ್ಲಿ ಗೋಚರಿಸುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ