ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ? ಗುರೂಜಿ ಹೇಳಿದ್ದಿಷ್ಟು ನೋಡಿ

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ? ಗುರೂಜಿ ಹೇಳಿದ್ದಿಷ್ಟು ನೋಡಿ

TV9 Web
| Updated By: Ganapathi Sharma

Updated on: Jan 08, 2025 | 7:05 AM

ನಮ್ಮ ಹಳೆಯ ಪದ್ಧತಿಗಳು, ಹಳೆಯ ಆಚಾರಗಳು, ಹಳೆಯ ನಂಬಿಕೆಗಳು ದಿನೇ ದಿನೇ ದಿನೇ ದಿನೇ ನಶಿಸಿ ಹೋಗ್ತಾ ಇವೆ. ಅದರಲ್ಲೂ ಸಹ ಬಾಂಧವ್ಯಗಳು ಇರ್ಬಹುದು, ಪ್ರೀತಿ ಪ್ರೇಮ ಇರ್ಬಹುದು, ಹಾಗೆ ಗೌರವ ಸಮರ್ಪಣೆ ಇರ್ಬಹುದು. ಇದರ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

ಹಿಂದೆಲ್ಲ ಅವಿಭಕ್ತ ಕುಟುಂಬಗಳಿದ್ದವು. ಎಲ್ಲರೂ ಜತೆಯಾಗಿ ಜೀವನ ಮಾಡುವ ವ್ಯವಸ್ಥೆ ಇತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಮೊದಲೆಲ್ಲ ಮನೆಗಳಲ್ಲಿ ಕೈತುತ್ತಿನ ಮೂಲಕ ಬಾಂಧವ್ಯಗಳನ್ನು ಬೆಸೆಯುವ ಕಾರ್ಯ ನಡೆಯುತ್ತಿತ್ತು. ಕೈತುತ್ತು ಅಂದ ತಕ್ಷಣವೇ ನಮಗೆ ಜ್ಞಾಪಕ ಬರೋದೇನು? ಒಂದು ದೊಡ್ಡ ಪಾತ್ರೆ ತಗೊಂಡು ಆ ಪಾತ್ರೆಯಲ್ಲಿ ಅನ್ನ, ಸಾರು ಎಲ್ಲಾ ಹಾಕಿ ಚೆನ್ನಾಗಿ ಕಿವಿಚಿ ಚೆನ್ನಾಗಿ ಅದನ್ನೆಲ್ಲವನ್ನು ಹಿಚುಕಿ ಒಂದೊಂದು ತುತ್ತು ಆಗಿ ಎಲ್ಲರಿಗೂ ಕೊಡುತ್ತಾ ಇದ್ದಂತಹ ಪದ್ಧತಿ. ನಾವೆಲ್ಲ ಕೈತುತ್ತಿಗೆ ಬಾಯಿ ಚಾಚುತ್ತಾ ಬೆಳೆದವರು. ಮನೆಯಲ್ಲಿ ಹಿರಿಯರು ಅಮ್ಮ ಇರಬಹುದು, ಅಥವಾ ಇತರ ಹಿರಿಯರು ಕೊಡುತ್ತಿದ್ದ ಕೈತುತ್ತಿನ ಮಹತ್ವ ಏನು ಹಾಗಾದರೆ?

ಕೈತುತ್ತು ನೀಡುತ್ತಿದ್ದ ಆ ಮನೆ ಸುಭಿಕ್ಷವಾಗಿರುತ್ತೆ. ಮನಸ್ತಾಪಗಳಿಂದ ಮುಕ್ತವಾಗಿರುತ್ತದೆ. ಆ ಮನೆಯಲ್ಲಿ ಎಲ್ಲರಲ್ಲೂ ಪ್ರೀತಿ ಪ್ರೇಮ ಹೆಚ್ಚಾಗಿರುತ್ತದೆ. ಎಷ್ಟೇ ವರ್ಷಗಳಾದರೂ ಕೂಡ ಆ ಬಾಂಧವ್ಯಗಳು ಹಾಗೆ ಉಳಿದುಕೊಂಡುಬಿಡುತ್ತದೆ. ಇವಿಷ್ಟೇ ಅಲ್ಲದೆ, ಇನ್ನೂ ಅನೇಕ ಪ್ರಯೋಜನಗಳಿವೆ. ಅವುಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ನೀಡಿರುವ ವಿಡಿಯೋದಲ್ಲಿ ವಿವರಿಸಿದ್ದಾರೆ.