ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ; ಭಕ್ತರಿಂದ ಹರಹರ ಮಹಾದೇವ ಘೋಷಣೆ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ; ಭಕ್ತರಿಂದ ಹರಹರ ಮಹಾದೇವ ಘೋಷಣೆ

ಸುಷ್ಮಾ ಚಕ್ರೆ
|

Updated on: Jan 08, 2025 | 10:29 PM

70 ವರ್ಷಗಳಿಂದ ಬೀಗ ಹಾಕಲಾಗಿದ್ದ ಸ್ಕಂದ ಪುರಾಣದಲ್ಲಿ ವರ್ಣಿಸಲಾದ ಸಿದ್ಧೇಶ್ವರ ಮಹಾದೇವನ ದೇಗುಲವನ್ನು 22 ದಿನಗಳ ಹಿಂದೆ ‘ಧುಂದೆ ಕಾಶಿ’ ತಂಡ ಪತ್ತೆ ಮಾಡಿದೆ. ಇಂದು 7 ದಶಕಗಳ ಬಳಿಕ ಈ ದೇವಾಲಯದ ಬೀಗ ತೆರೆದು ಅವಶೇಷಗಳನ್ನು ತೆಗೆದು ದೇವಾಲಯದ ಗರ್ಭಗುಡಿಯನ್ನು ಗಂಗಾಜಲದಿಂದ ಶುದ್ಧೀಕರಿಸಲಾಯಿತು. ಈ ವೇಳೆ ಭಕ್ತರು ಹರಹರ ಮಹಾದೇವ ಎಂದು ಉದ್ಘರಿಸುತ್ತಾ ಮಹಾದೇವನನ್ನು ಕಣ್ತುಂಬಿಕೊಂಡರು. ಈ ದೇವಾಲಯದಲ್ಲಿ ವೈದಿಕ ವಿಧಿವಿಧಾನಗಳ ಪ್ರಕಾರ ದೇವಾಲಯವನ್ನು ನಿರ್ವಹಿಸಲಾಗುವುದು ಮತ್ತು ತ್ರಿಕಾಲ ಸಂಧ್ಯಾ ವಿಧಿಗಳ ಪ್ರಕಾರ ಪೂಜೆ ನಡೆಯಲಿದೆ.

ವಾರಾಣಸಿ: 70 ವರ್ಷಗಳಿಂದ ಬೀಗ ಹಾಕಲಾಗಿದ್ದ ಸ್ಕಂದ ಪುರಾಣದಲ್ಲಿ ವರ್ಣಿಸಲಾದ ಸಿದ್ದೇಶ್ವರ ಮಹಾದೇವನ ದೇವಸ್ಥಾನವನ್ನು 22 ದಿನಗಳ ಹಿಂದೆ ‘ಧುಂದೆ ಕಾಶಿ’ ತಂಡ ಪತ್ತೆ ಮಾಡಿತ್ತು. ಇಂದು ಈ ದೇವಾಲಯದ ಬೀಗ ತೆರೆದು ಗರ್ಭಗುಡಿಯನ್ನು ಗಂಗಾಜಲದಿಂದ ಶುದ್ಧೀಕರಿಸಿದ ಆಡಳಿತ ಮಂಡಳಿ ಮಕರ ಸಂಕ್ರಾಂತಿಯ ನಂತರ ದೇವಾಲಯವನ್ನು ಶುದ್ಧೀಕರಿಸಿ ಪ್ರಾಣ ಪ್ರತಿಷ್ಠೆ ಮಾಡಿ ನಿತ್ಯ ಪೂಜೆ ಆರಂಭಿಸಲಾಗುವುದು ಎಂದು ಘೋಷಿಸಿತು. ಈ ವೇಳೆ ಭಕ್ತರು ಹರಹರ ಮಹಾದೇವ ಎಂದು ಉದ್ಘರಿಸುತ್ತಾ ಮಹಾದೇವನನ್ನು ಕಣ್ತುಂಬಿಕೊಂಡರು. ಈ ದೇವಾಲಯದಲ್ಲಿ ವೈದಿಕ ವಿಧಿವಿಧಾನಗಳ ಪ್ರಕಾರ ದೇವಾಲಯವನ್ನು ನಿರ್ವಹಿಸಲಾಗುವುದು ಮತ್ತು ತ್ರಿಕಾಲ ಸಂಧ್ಯಾ ವಿಧಿಗಳ ಪ್ರಕಾರ ಪೂಜೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ