‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಈ ಸಿನಿಮಾದಲ್ಲಿ ಸಂಜು ವೆಡ್ಸ್ ಗೀತಾ ಎಂಬ ಶೀರ್ಷಿಕೆಯನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದ್ದಾರೆ. ಆ ಚಿತ್ರದ ಯಾವುದೇ ಸನ್ನಿವೇಶ ಅಥವಾ ಪಾತ್ರವನ್ನು ಮುಂದುವರಿಸಿಲ್ಲ. ನಿರ್ದೇಶಕರು ಹೇಳಬೇಕಾಗಿದ್ದನ್ನು ನಾನೇ ಸ್ಪಷ್ಟಪಡಿಸುತ್ತಿದ್ದೇನೆ’ ಎಂದಿದ್ದಾರೆ ರಚಿತಾ ರಾಮ್. ಈ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಕಾರಣ ಏನು ಎಂದು ಕೂಡ ರಚಿತಾ ಉತ್ತರಿಸಿದ್ದಾರೆ.
‘ಸಂಜು ವೆಡ್ಸ್ ಗೀತಾ’ ಸಿನಿಮಾದಲ್ಲಿ ರಮ್ಯಾ ಅವರು ನಾಯಕಿ ಆಗಿದ್ದರು. ಆದರೆ ‘ಸಂಜು ವೆಡ್ಸ್ ಗೀತಾ 2’ ಸಿನಿಮಾಗೆ ರಚಿತಾ ರಾಮ್ ನಾಯಕಿ. ಆದರೆ ಈ ಸಿನಿಮಾದ ಕಥೆಯೇ ಬೇರೆ ಎಂದು ರಚಿತಾ ರಾಮ್ ಅವರು ಹೇಳಿದ್ದಾರೆ. ಜನವರಿ 10ರಂದು ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಬಿಡುಗಡೆ ಆಗಲಿದೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಕೆಲವು ವಿಚಾರಗಳಿಗೆ ಸ್ಪಷ್ಟನೆ ನೀಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos