ಯಾರ ಜೊತೆಗೂ ಹೋಗಿ ಇರಲ್ಲ ಎಂದು ರಚಿತಾ ರಾಮ್ ಹೇಳಿದ್ದರ ಹಿಂದಿನ ವಿವಾದವೇನು?

ರಚಿತಾ ರಾಮ್ ಅವರ ಮೇಲೆ ರಾಜಕಾರಣಿಗಳೊಂದಿಗಿನ ಸಂಬಂಧದ ಆರೋಪ ಹೊರಿಸಲಾಗಿದೆ. ಲಾಯರ್ ಜಗದೀಶ್ ಅವರು ಈ ಆರೋಪವನ್ನು ಮಾಡಿದ್ದಾರೆ. ಆದರೆ ರಚಿತಾ ರಾಮ್ ಈ ಆರೋಪವನ್ನು ತಳ್ಳಿಹಾಕಿದ್ದು, ತಮ್ಮ 12 ವರ್ಷಗಳ ಚಿತ್ರರಂಗದ ವೃತ್ತಿಜೀವನದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಿದ್ದಾರೆ ಎಂದು ಹೇಳಿದ್ದಾರೆ.

ಯಾರ ಜೊತೆಗೂ ಹೋಗಿ ಇರಲ್ಲ ಎಂದು ರಚಿತಾ ರಾಮ್ ಹೇಳಿದ್ದರ ಹಿಂದಿನ ವಿವಾದವೇನು?
ರಚಿತಾ -ಜಗದೀಶ್
Follow us
ರಾಜೇಶ್ ದುಗ್ಗುಮನೆ
|

Updated on:Jan 08, 2025 | 1:32 PM

ನಟಿ ರಚಿತಾ ರಾಮ್ ಅವರು ಸಾಕಷ್ಟು ಕಷ್ಟಗಳಿಂದ ಮೇಲೆ ಬಂದವರು. ಅವರು ಇಂದು ಕನ್ನಡ ಚಿತ್ರರಂಗದ ಬೇಡಿಕೆಯ ಹೀರೋಯಿನ್ ಎನಿಸಿಕೊಂಡಿದ್ದಾರೆ. ಅವರ ಬಗ್ಗೆ ವದಂತಿಗಳು ಆಗಾಗ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಅದಕ್ಕೆಲ್ಲ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಈಗ ಅವರಿಗೆ ಸಿಟ್ಟು ತರಿಸುವಂತ ಆರೋಪ ಒಂದು ಕೇಳಿ ಬಂದಿತ್ತು. ಈ ಸಂದರ್ಭದಲ್ಲಿ ರಚಿತಾ ರಾಮ್ ಕೂಲ್ ಆಗಿ ನಡೆದುಕೊಂಡಿದ್ದಾರೆ. ಕೂಲ್ ಆಗಿಯೇ ಅವರು ಉತ್ತರ ಕೊಟ್ಟಿದ್ದಾರೆ.

ಲಾಯರ್ ಜಗದೀಶ್ ಮಾಡಿದ ಆರೋಪ?

ಬಿಗ್ ಬಾಸ್ ಮೂಲಕ ಗಮನ ಸೆಳೆದ ಜಗದೀಶ್ ಅವರು ಇತ್ತೀಚೆಗೆ ಮಾಧ್ಯಮಗಳ ಎದುರು ಬಂದು ವಿವಿಧ ವ್ಯಕ್ತಿಗಳ ಬಗ್ಗೆ ವಿವಿಧ ರೀತಿಯ ಆರೋಪಗಳನ್ನು ಮಾಡುತ್ತಾ ಇದ್ದಾರೆ. ಅವರು ರಚಿತಾ ರಾಮ್ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ಒಂದನ್ನು ನೀಡಿದ್ದರು. ‘ರಚಿತಾ ರಾಮ್ ಅವರಿಗೆ ರಾಜಕಾರಣಿಗಳ ಜೊತೆ ಒಡನಾಟ ಇದೆ. ರಾಜಕಾರಣಿಗಳ ಜೊತೆ ವ್ಯವಹಾರ ಮಾಡುತ್ತಾರೆ. ರಾಜಕಾರಣಿಗಳ ಕೃಪಾಕಟಾಕ್ಷದಿಂದ ಬೆಳೆಯುತ್ತಿದ್ದಾರೆ ಎಂಬ ಆರೋಪ ಇದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಈ ಆರೋಪ ಬಂದಮೇಲೆ ಅವರ ಟೆಂಪಲ್ ರನ್ ಹೆಚ್ಚಿದೆ’ ಎಂದಿದ್ದರು ಜಗದೀಶ್.

ರಚಿತಾ ರಾಮ್ ಹೇಳಿದ್ದೇನು?

ಟಿವಿ9 ಕನ್ನಡದ ಜೊತೆ ಮಾತನಾಡಿದ ರಚಿತಾ ರಾಮ್ ಈ ಬಗ್ಗೆ ಉತ್ತರಿಸಿದ್ದರು. ‘ನಾನು ಇಂಡಸ್ಟ್ರಿಯಲ್ಲಿ 12 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಪ್ರತಿ ಸಿನಿಮಾಗೂ ಸಂಭಾವನೆ ಪಡೆಯುತ್ತಿದ್ದೇನೆ. ಚಿತ್ರರಂಗದಲ್ಲಿ ಸತತವಾಗಿ ಕೆಲಸ ಮಾಡಿಕೊಂಡು ಬಂದು, ಅವಶ್ಯಕತೆ ಇದ್ದಲ್ಲಿ ಮಾತ್ರ ಮಾತನಾಡುತ್ತೇನೆ. ನಾನು ಶೂಟಿಂಗ್​ನಲ್ಲಿ ಬ್ಯುಸಿ ಇರುತ್ತೇನೆ. ಶೂಟ್ ಇಲ್ಲ ಎಂದರೆ ಕುಟುಂಬದವರ ಜೊತೆ ಸಮಯ ಕಳೆಯುತ್ತೇನೆ’ ಎಂದಿದ್ದಾರೆ ಅವರು.

‘ಅವರು (ಜಗದೀಶ್) ವಯಸ್ಸಲ್ಲಿ ದೊಡ್ಡವರು. ನನಗೆ ಅವರನ್ನು ಅಗೌರವಿಸುವ ಅಗತ್ಯವಿಲ್ಲ. ಅವೆಲ್ಲ ಅಂತೆ-ಕಂತೆ. ಈ ಆರೋಪಕ್ಕೆ ಏನು ಮಾತನಾಡಬೇಕು ಎಂದು ಗೊತ್ತಿಲ್ಲ. ನಾನು ಅಂತ ಆ್ಯಕ್ಟಿವಿಟಿಯಲ್ಲಿ ಭಾಗವಹಿಸಿದ್ರೆ ನನ್ನ ಲೈಫ್ ನನ್ನ ಇಷ್ಟ ಎಂದು ಹೇಳುತ್ತಿದ್ದೆ. ಇಲ್ಲವೇ ಈ ಬಗ್ಗೆ ಪ್ರಶ್ನಿಸಬೇಡಿ ಎನ್ನುತ್ತಿದ್ದೆ. ತಪ್ಪು ಮಾಡಿದ್ರೆ ಒಪ್ಪಿಕೊಳ್ಳುತ್ತೇನೆ. ನಾನು ತಪ್ಪು ಮಾಡಿಲ್ಲ. ಆರೋಪಗಳಿಗೆ ಉತ್ತರ ಸಿಕ್ಕಿತು ಎಂದುಕೊಳ್ಳುತ್ತೇನೆ’ ಎಂದಿದ್ದಾರೆ ರಚಿತಾ ರಾಮ್.

ಇದನ್ನೂ ಓದಿ: ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ ರಾಮ್

‘ನನ್ನ ಸ್ಟಾಫ್​, ನನ್ನ ಮಾಧ್ಯಮದವರಿಗೆ ನಾನು ಏನು ಅಂತ ಗೊತ್ತಿದೆ. ನನ್ನ ಆಪ್ತರಿಗೆ ನನ್ನ ಬಗ್ಗೆ ಗೊತ್ತಿದೆ. ಸ್ಪಾನ್ಸರ್ ಇದ್ದಿದ್ರೆ 12 ವರ್ಷ ಯಾಕೆ ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ? ಸ್ಪಾನ್ಸರ್ಸ್ ಇದ್ದಿದ್ದರೆ ಹಾಯಾಗಿ ವಿದೇಶಿ ಪ್ರವಾಸ ಮಾಡುತ್ತಿದ್ದೆ. ನನಗೆ ಕಷ್ಟ ಬಂದು ಎಲ್ಲಾ ಕಳೆದುಕೊಂಡರೂ ದೇವಸ್ಥಾನದಲ್ಲಿನ ಪ್ರಸಾದ ತಿಂದುಕೊಂಡು ಇರುತ್ತೇನೆ ಹೊರತು, ಯಾರ ಜೊತೆಯೂ ಹೋಗಿ ಇರೋದಿಲ್ಲ’ ಎಂದಿದ್ದಾರೆ ರಚಿತಾ ರಾಮ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:49 pm, Wed, 8 January 25

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?