ಮ್ಯುಚುವಲ್ ಫಂಡ್ ಹೂಡಿಕೆ ಅರ್ಥಮಾಡಿಕೊಳ್ಳದೆ ಅದರ ಬಗ್ಗೆ ಬೇಕಾಬಿಟ್ಟಿ ವರದಿ ಮಾಡುವುದು ಅರ್ಥಹೀನ: ಡಾ ಬಾಲಾಜಿ ರಾವ್
ನಮ್ಮಿಂದ ಹಣ ಸಂಗ್ರಹಿಸುವ ಹಣವನ್ನು ಮ್ಯುಚುವಲ್ ಫಂಡ್ ಗಳಲ್ಲಿನ ಫಂಡ್ಮ್ಯಾನೇಜರ್ ಗಳು ಉತ್ತಮ ರಿಟರ್ನ್ಸ್ ನೀಡುವ ಕಂಪನಿಗಳಲ್ಲಿ ಹೂಡಲು ನಾವು ಊಹಿಸಲು ಸಾಧ್ಯವಾಗದಷ್ಟು ಶ್ರಮಪಡುತ್ತಾರೆ.
ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ಅವರು ಈ ಸಂಚಿಕೆಯಲ್ಲಿ ಪುನಃ ಮ್ಯುಚುವಲ್ ಫಂಡ್ಗಳಲ್ಲಿ ಹಣ ಹೂಡಿಕೆಯ ಕುರಿತು ಮಾತಾಡಿದ್ದಾರೆ. ಮ್ಯುಚುವಲ್ ಫಂಡ್ಗಳಲ್ಲಿ ಹಣ ಹೂಡುವುದು ಆಪಾಯಕಾರಿ, ಅದರಲ್ಲಿ ಹಣ
ಹೂಡುವುದು ವ್ಯರ್ಥ, ನೀವು ಹಣ ಹೂಡಿದ್ದರೆ ಕೂಡಲೇ ವಾಪಸ್ಸು ತೆಗೆದುಕೊಂಡು ಬಿಡಿ ಅಂತ ಮಾಧ್ಯಮಗಳಲ್ಲಿ ಪ್ರಕಟ ಮತ್ತು ಬಿತ್ತರವಾಗುವ ವರದಿಗಳ ಬಗ್ಗೆ ಡಾ ರಾವ್ ಕಿಡಿ ಕಾರಿದ್ದಾರೆ. ಇಂಥ ವರದಿಗಳಲ್ಲಿ ಸತ್ಯಾಂಶವಿರೋದಿಲ್ಲ, ಅವು ಹೇಳುವುದನ್ನು ನಂಬಿ ಹಣ ವಾಪಸ್ಸು ತೆಗೆದುಕೊಳ್ಳುವ ಪ್ರಯತ್ನ ಮಾಡಬೇಡಿ ಅಂತ ಅವರ ಸಲಹೆ ನೀಡುತ್ತಾರೆ. ಕೇವಲ ಮ್ಯುಚುವಲ್ ಫಂಡ್ಗಳನ್ನು ಟಾರ್ಗೆಟ್ ಮಾಡಲೆಂದೇ ಈ ವರದಿಗಳನ್ನು ಬರೆದಿರಬಹುದು ಅಂತೆನಿಸುತ್ತದೆ ಎಂದು ಡಾ ರಾವ್ ಹೇಳುತ್ತಾರೆ.
ಹಾಗಂತ, ತಾನು ಹೇಳುವುದೆಲ್ಲ ಸತ್ಯ ಅನ್ನೋದು ತಮ್ಮ ವಾದವಲ್ಲ, ಮ್ಯುಚುವಲ್ ಫಂಡ್ ಒಂದು ಸಂಕೀರ್ಣ ವಿಷಯವಾಗಿರುವುದರಿಂದ ಮೊದಲು ಅದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿ ಅರ್ಥಮಾಡಿಕೊಳ್ಳುವ ಪ್ರಬುದ್ಧತೆಯನ್ನು ಬೆಳಸಿಕೊಳ್ಳಬೇಕು ಎಂದು ರಾವ್ ಹೇಳುತ್ತಾರೆ.
ನಮ್ಮಿಂದ ಹಣ ಸಂಗ್ರಹಿಸುವ ಹಣವನ್ನು ಮ್ಯುಚುವಲ್ ಫಂಡ್ ಗಳಲ್ಲಿನ ಫಂಡ್ಮ್ಯಾನೇಜರ್ ಗಳು ಉತ್ತಮ ರಿಟರ್ನ್ಸ್ ನೀಡುವ ಕಂಪನಿಗಳಲ್ಲಿ ಹೂಡಲು ನಾವು ಊಹಿಸಲು ಸಾಧ್ಯವಾಗದಷ್ಟು ಶ್ರಮಪಡುತ್ತಾರೆ. ಪ್ರತಿಯೊಂದು ಅಂಶವನ್ನು ಆಳವಾಗಿ ಅಧ್ಯಯನ ಮಾಡಿದ ನಂತರವೇ ನಮ್ಮ ಹಣವನ್ನು ಹೂಡಿಕೆ ಮಾಡುತ್ತಾರೆ.
ಒಂದು ಮ್ಯುಚುವಲ್ ಫಂಡ್ ಸಂಸ್ಥೆಯ ಮ್ಯಾನೇಜರ್ನ ಲೆಕ್ಕಾಚಾರ ತಪ್ಪಾಗುವ ಸಾಧ್ಯತೆಯೂ ಇರುತ್ತದೆ. ಅದೇ ಸಮಯದಲ್ಲಿ ಬೇರೊಂದು ಮ್ಯುಚುವಲ್ ಫಂಡ್ ನ ಮ್ಯಾನೇಜರ್ ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ರಿಟರ್ನ್ಸ್ ಸಿಕ್ಕರೆ, ಈತ ಭಗವಂತ ನಮ್ಮ ಹಣ ಹೂಡಿಕೆ ಮಾಡಿದಾತ ವಿಲನ್ ಆಂತಲ್ಲ. ಅಂಥ ಸಂದರ್ಭದಲ್ಲಿ ನಮ್ಮ ಹಣವನ್ನು ತೆಗೆದು ಜಾಸ್ತಿ ರಿಟರ್ನ್ಸ್ ಬಂದ ಮ್ಯುಚುವಲ್ ಫಂಡ್ ಕಂಪನಿಯಲ್ಲಿ ಹೂಡುವ ಪ್ರಯತ್ನ ಮಾಡುವುದು ಸರ್ವಥಾ ತಪ್ಪು ಎಂದು ಡಾ ಬಾಲಾಜಿ ಹೇಳುತ್ತಾರೆ.
ಶೇರು ಮಾರ್ಕೆಟ್ನಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ಕ್ರಿಕೆಟ್ ಆಟದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಒಬ್ಬ ಬ್ಯಾಟರ್ ಸತತವಾಗಿ ಅಂದರೆ ಆಡುವ ಎಲ್ಲಾ ಮ್ಯಾಚ್ಗಳಲ್ಲಿ ರನ್ ಗಳಿಸುವುದು ಸಾಧ್ಯವಿಲ್ಲ. ಒಬ್ಬ ಬೌಲರ್ ಕೂಡ ಎಲ್ಲ ಪಂದ್ಯಗಳಲ್ಲಿ ಗೊಂಚಲು ಗೊಂಚ ವಿಕೆಟ್ ಪಡೆಯಲಾರ. ಮ್ಯುಚುವಲ್ ಫಂಡ್ ನಲ್ಲೂ ಇದೇ ನಿಯಮ ಅನ್ವಯವಾಗುತ್ತದೆ.
ದೀರ್ಘಾವಧಿಗಾಗಿ ನೀವು ಒಂದು ಕಂಪನಿಯಲ್ಲಿ ಹೂಡುವ ಹಣ ಮತ್ತು ಬೇರೆಯವರು ಮತ್ತೊಂದು ಕಂಪನಿಯಲ್ಲಿ ಹೂಡುವ ಹಣದ ರಿಟರ್ನ್ಸ್ನಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇರದು ಅಂತ ಡಾ ರಾವ್ ಹೇಳುತ್ತಾರೆ. ನಮ್ಮ ದೇಶದಲ್ಲಿ 41 ಮ್ಯುಚುವಲ್ ಫಂಡ್ ಸಂಸ್ಥೆಗಳಿವೆ; ಒಂದು ಉತ್ತಮ ಮತ್ತೊಂದು ಕೆಟ್ಟದ್ದು ಅಂತಿರಲ್ಲ, ಎಲ್ಲವೂ ಉತ್ತಮ ಕಂಪನಿಗಳೇ. ಹಾಗಾಗಿ, ಸ್ಟೇ ಇನ್ವೆಸ್ಟೆಡ್ ಎಂದು ಡಾ ರಾವ್ ಹೇಳುತ್ತಾರೆ.
ಇದನ್ನೂ ಓದಿ: Matthew Wade Sixes: 6, 6, 6- ಪಾಕಿಸ್ತಾನವನ್ನು ಮನೆಗಟ್ಟಿದ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ ಸಿಕ್ಸ್ ವಿಡಿಯೋ ಇಲ್ಲಿದೆ ನೋಡಿ