ಫ್ರಾನ್ಸ್​​ನಲ್ಲಿ ಕೋವಿಡ್-19 ಐದನೇ ಅಲೆ ಆರಂಭವಾಗಿರುವುದನ್ನು ಖಚಿತಪಡಿಸಿದರು ಅಲ್ಲಿನ ಆರೋಗ್ಯ ಸಚಿವ ವೆರನ್

ಫ್ರಾನ್ಸ್​​ನಲ್ಲಿ ಕೋವಿಡ್-19 ಐದನೇ ಅಲೆ ಆರಂಭವಾಗಿರುವುದನ್ನು ಖಚಿತಪಡಿಸಿದರು ಅಲ್ಲಿನ ಆರೋಗ್ಯ ಸಚಿವ ವೆರನ್

TV9 Web
| Updated By: shivaprasad.hs

Updated on:Nov 13, 2021 | 9:09 AM

ಫ್ರಾನ್ಸಿನ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಬುಧವಾರ ದೇಶದಲ್ಲಿ 11,883 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಸತತವಾಗಿ ಎರಡನೇ ದಿನ ಸೋಂಕಿನ ಪ್ರಕರಣಗಳ ಸಂಖ್ಯೆ 10,000 ಕ್ಕಿಂತ ಜಾಸ್ತಿಯಿತ್ತು.

ಭಾರತದಲ್ಲಿ ಕೊರೋನಾ ಮೂರನೇ ಅಲೆಯ ಭೀತಿಯಿದ್ದರೆ ಯುರೋಪಿನ ಫ್ರಾನ್ಸ್ನಲ್ಲಿ 5 ನೇ ಅಲೆ ಲಗ್ಗೆಯಿಟ್ಟಿದೆ ಮತ್ತು ಇದು ಹಿಂದಿನ ಅಲೆಗಳಿಗಿಂತ ಭೀಕರವಾಗಿದೆ ಎಂದು ಆ ದೇಶದ ಆರೋಗ್ಯ ಸಚಿವ ಆಲಿವರ್ ವೆರನ್ ಹೇಳಿದ್ದಾರೆ. ಟಿವಿ ಚ್ಯಾನಲೊಂದಕ್ಕೆ ಬುಧವಾರ ನೀಡಿದ ಸಂದರ್ಶನದಲ್ಲಿ ವೆರನ್, ಕೊರೊನಾ ಪಿಡುಗಿನ 5 ನೇ ಅಲೆ ಫ್ರಾನ್ಸ್ ಅನ್ನು ಪ್ರವೇಶಿಸಿದೆ ಎಂದು ಹೇಳಿದರು. ಈ ದೇಶ ನೆರೆಹೊರೆ ರಾಷ್ಟ್ರಗಳಲ್ಲೂ 5 ನೇ ಅಲೆ ದಾಂಗುಡಿಯಿಟ್ಟಿದೆ ಮತ್ತು ವೈರಸ್ ಬಹಳ ವೇಗವಾಗಿ ಹಬ್ಬುತ್ತಿದೆ ಎಂದು ಹೇಳಿದ್ದಾರೆ.

‘ಅಕ್ಕಪಕ್ಕದ ಹಲವಾರು ದೇಶಗಳಲ್ಲಿ 5ನೇ ಅಲೆ ಹಬ್ಬಲಾರಂಭಿಸಿದೆ ಮತ್ತು ಫ್ರಾನ್ಸ್ನಲ್ಲಿನ ವಿದ್ಯಮಾನಗಳನ್ನು ಗಮನಿಸಿದರೆ, ಇಲ್ಲೂ 5ನೇ ಅಲೆ ಆರಂಭವಗಿರುವ ಸೂಚನೆಗಳು ಸ್ಪಷ್ಟವಾಗುತ್ತಿವೆ,’ ಎಂದು ವೇರನ್ ಹೇಳಿದ್ದಾರೆ.

ಫ್ರಾನ್ಸಿನ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಬುಧವಾರ ದೇಶದಲ್ಲಿ 11,883 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಸತತವಾಗಿ ಎರಡನೇ ದಿನ ಸೋಂಕಿನ ಪ್ರಕರಣಗಳ ಸಂಖ್ಯೆ 10,000 ಕ್ಕಿಂತ ಜಾಸ್ತಿಯಿತ್ತು. ಅಕ್ಟೋಬರ್ ಮಧ್ಯಭಾಗದಿಂದ ಸೋಂಕಿನ ಪ್ರಕರಣಗಳಲ್ಲಿ ಎರಡಂಕಿ ಶೇಕಡದಷ್ಟು ಹೆಚ್ಚಳ ಕಂಡು ಬರುತ್ತಿದೆ. ಇದರರ್ಥ ಸ್ಪಷ್ಟವಾಗಿದೆ, ಫ್ರಾನ್ಸ್ನಲ್ಲಿ ಕೋವಿಡ್-19 ಸೋಂಕು ಕ್ಷಿಪ್ರ ಗತಿಯಲ್ಲಿ ಹರಡುತ್ತಿದೆ ಎಂದು ವೇರನ್ ಹೇಳಿದ್ದಾರೆ

65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರು ರೆಸ್ಟುರಾಂಟ್ ಗಳಿಗೆ ಭೇಟಿ ನೀಡಬೇಕಾದರೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾದರೆ ಮತ್ತು ಇಂಟರ್ ಸಿಟಿ ಟ್ರೇನ್ಗಳಲ್ಲಿ ಪ್ರಯಾಣಿಸಬೇಕಾದರೆ ತಮ್ಮೊಂದಿಗೆ ಕೊವಿಡ್-19 ವ್ಯಾಕ್ಸಿನ್ ಹಾಕಿಸಿಕೊಂಡಿರುವ ದಾಖಲೆಯನ್ನು ಕ್ಯಾರಿ ಮಾಡಬೇಕೆಂದು ಈ ವಾರದ ಆರಂಭದಲ್ಲಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೇಲ್ ಮ್ಯಾಕ್ರನ್ ಹೇಳಿದ್ದರು.

ಹಾಗೆಯೇ, ಇನ್ನೂ ವ್ಯಾಕ್ಸಿನ್ ಹಾಕಿಸಿಕೊಳ್ಳದವರು ಕೂಡಲೇ ಹಾಕಿಸಿಕೊಂಡು ಜವಾಬ್ದಾರಿ ಮೆರೆಯಲು ಮ್ಯಾಕ್ರನ್ ಕರೆ ನೀಡಿದ್ದಾರೆ.

ಇದನ್ನೂ ಓದಿ:   Shocking Video: 22 ಅಂತಸ್ತಿನ‌‌ ಕಟ್ಟಡದ ಮೇಲೆ ಮಕ್ಕಳ ಹುಡುಗಾಟ; ಪೋಷಕರನ್ನು ಬೆಚ್ಚಿಬೀಳಿಸಿರುವ ವಿಡಿಯೋ ಇಲ್ಲಿದೆ

Published on: Nov 13, 2021 09:09 AM