AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಯಾವತ್ತೂ ಸೈಡ್​ಲೈನ್ ಆಗಿಲ್ಲ, ಪರಮೇಶ್ವರ್ ಕರೆದಿದ್ದ ಸಭೆ ಪೋಸ್ಟ್​ಪೋನ್ ಆಗಿದೆ, ರದ್ದಾಗಿಲ್ಲ: ಸತೀಶ್ ಜಾರಕಿಹೊಳಿ

ನಾನು ಯಾವತ್ತೂ ಸೈಡ್​ಲೈನ್ ಆಗಿಲ್ಲ, ಪರಮೇಶ್ವರ್ ಕರೆದಿದ್ದ ಸಭೆ ಪೋಸ್ಟ್​ಪೋನ್ ಆಗಿದೆ, ರದ್ದಾಗಿಲ್ಲ: ಸತೀಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 08, 2025 | 9:28 PM

Share

ಗಾಂಧಿ ಭಾರತ ಕಾರ್ಯಕ್ರಮದ ಮುಂದುವರಿದ ಭಾಗ ಬೆಳಗಾವಿಯಲ್ಲೇ ನಡೆಯುವುದರಿಂದ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ತಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ, ಮೊದಲು ನೀಡಿದ್ದ ಜಬಾಬ್ದಾರಿಯನ್ನೇ ಮುಂದುವರಸುತ್ತಿದ್ದೇವೆ, ತನಗೆ ಜನರನ್ನು ಕಾರ್ಯಕ್ರಮಕ್ಕೆ ತರುವ ಜವಾಬ್ದಾರಿ ನೀಡಲಾಗಿತ್ತು, ಈಗಲೂ ಅದೇ ಕೆಲಸ ಮಾಡಬೇಕಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸತೀಶ್ ಜಾರಕಿಹೊಳಿ, ತಾನು ಯಾವತ್ತೂ ಸೈಡ್​ಲೈನ್ ಆಗಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಈಗ ಕೈಗೆತ್ತಿಕೊಂಡಿರೋದು ಬೆಳಗಾವಿಯಲ್ಲಿ ಅರ್ಧಕ್ಕೆ ನಿಂತುಹೋಗಿದ್ದ ಕಾರ್ಯಕ್ರಮ, ಗಾಂಧಿ ಮೊದಲಬಾರಿಗೆ ಕಾಂಗ್ರೆಸ್ ನೇತೃತ್ವ ವಹಿಸಿದ ಸಂದರ್ಭದ ಶತಮಾನೋತ್ಸವ ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಶುರುಮಾಡಲಾಗುತ್ತಿದೆ, ಪರಮೇಶ್ವರ್ ಅವರು ಕರೆದಿದ್ದ ಡಿನ್ನರ್ ಮೀಟಿಂಗ್ ರದ್ದೇನೂ ಅಗಿಲ್ಲ, ಮುಂದೂಡಲಾಗಿದೆ, ದಲಿತರ ಸಮಸ್ಯೆಗಳ ಚರ್ಚೆಗೆ ಮೀಸಲಾಗಿದ್ದ ಸಭೆಯನ್ನು ಅನುಮತಿ ಪಡೆದೇ ಮಾಡುವುದು ಒಳ್ಳೆಯದು ಅಂತ ತಾನು ಮೊದಲೇ ಹೇಳಿದ್ದೇ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹಿಂದೆ ಹೇಳಿದ್ದನ್ನೇ ಪುನರಾವರ್ತಿಸಿದರು!