Mutual Funds Investment: ಮ್ಯೂಚುವಲ್ ಫಂಡ್ ಎಸ್ಐಪಿ ತಿಂಗಳ 10 ಸಾವಿರ ಹೂಡಿಕೆಗೆ 5 ವರ್ಷದಲ್ಲಿ 12 ಲಕ್ಷ ರಿಟರ್ನ್ಸ್
ಈ ಮ್ಯೂಚುವಲ್ ಫಂಡ್ನಲ್ಲಿ ತಿಂಗಳಿಗೆ 10 ಸಾವಿರ ರೂಪಾಯಿಯಂತೆ ಎಸ್ಐಪಿ ವಿಧಾನದಲ್ಲಿ 5 ವರ್ಷಗಳ ಕಾಲ ಹೂಡಿಕೆ ಮಾಡಿದಲ್ಲಿ 11.98 ಲಕ್ಷ ರೂಪಾಯಿ ರಿಟರ್ನ್ಸ್. ಯಾವುದು ಆ ಫಂಡ್ ಎಂಬುದರ ವಿವರ ಇಲ್ಲಿದೆ.
ಮ್ಯೂಚುವಲ್ ಫಂಡ್ಸ್ (Mutual Funds) ಎಸ್ಐಪಿ (ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ಎಂಬುದು ತುಂಬ ಅನುಕೂಲಕರವಾದ ಹೂಡಿಕೆ ಸಾಧನ. ಈಕ್ವಿಟಿ ಷೇರು ಮಾರುಕಟ್ಟೆಯ ಏರಿಳಿತದ ಮಧ್ಯೆ ಹೂಡಿಕೆಗೆ ಯಾವುದು ಸರಿಯಾದ ಅವಕಾಶ ಎಂದು ಆಲೋಚನೆ ಮಾಡದೆ ಎಸ್ಐಪಿ ವಿಧಾನದಲ್ಲಿ ಹಣ ಹೂಡಬಹುದು. ಅನುಕೂಲ ಸೇರ್ಪಡೆ ಆಗುತ್ತಾ ಸಾಗುವುದು ದೀರ್ಘಾವಧಿ ಹೂಡಿಕೆದಾರರನ್ನು ಇದರತ್ತ ಸೆಳೆಯಲು ಇರುವ ಪ್ರಮುಖ ಆಕರ್ಷಣೆ ಆಗಿದೆ. ಆದರೆ ಕೆಲವು ಈಕ್ವಿಟಿ ಮ್ಯೂಚುವಲ್ ಫಂಡ್ ಪ್ಲಾನ್ಗಳಿದ್ದು, ಸೂಚ್ಯಂಕದ ರಿಟರ್ನ್ ಅನ್ನು ಮೀರಿಸುವಂತೆ ಭಾರೀ ಗಳಿಕೆಯನ್ನು ಮಾಡಿಕೊಟ್ಟಿವೆ. ಮಾರ್ಜಿನ್ ಕೂಡ ಭಾರೀ ಅಂತರದಲ್ಲಿದೆ. ಆ ರೀತಿಯ ಮ್ಯೂಚುವಲ್ ಫಂಡ್ಗಳಲ್ಲಿ ಪಿಜಿಐಎಂ ಇಂಡಿಯಾ ಮಿಡ್ಕ್ಯಾಪ್ ಆಪರ್ಚುನಿಟೀಸ್ ಫಂಡ್- ಡೈರೆಕ್ಟ್ ಪ್ಲಾನ್- ಗ್ರೋಥ್ ಸಹ ಒಂದು.
ಈ ಮಿಡ್ಕ್ಯಾಪ್ ಫಂಡ್ ಆರಂಭವಾದದ್ದು 2013ನೇ ಇಸವಿಯ ಡಿಸೆಂಬರ್ 2ನೇ ತಾರೀಕು. ಒಂದು ಸಲದ ಇಡಿಗಂಟನ್ನು ಅದರ ಆರಂಭದಲ್ಲಿ ಹೂಡಿಕೆ ಮಾಡಿದ್ದಲ್ಲಿ ಶೇ 355ರಷ್ಟು ರಿಟರ್ನ್ ನೀಡಿದ್ದರೆ, ಈ ಅವಧಿಯಲ್ಲಿನ ಸರಾಸರಿ ರಿಟರ್ನ್ ಶೇ 17.55ರಷ್ಟಾಗಿದೆ. ಒಂದು ಸಲದ ಇಂಡಿಗಂಟನ್ನು ಹೂಡಿಕೆ ಮಾಡಿದ ಹೂಡಿಕೆದಾರರಿಗೆ ಈ ಸ್ಕೀಮ್ನಲ್ಲಿ ಶೇ 32.50ರಷ್ಟು ರಿಟರ್ನ್ ಸಿಕ್ಕಿದ್ದರೆ, ನಿಫ್ಟಿ-50 ಸೂಚ್ಯಂಕ ನೀಡಿರುವ ಶೇ 19ರ ರಿಟರ್ನ್ ಗಮನಿಸಿದರೆ ಭಾರೀ ಅಂತರ ಎದ್ದು ಕಾಣುತ್ತದೆ.
ಮ್ಯೂಚುವಲ್ ಫಂಡ್ ಎಸ್ಐಪಿ ವಿಧಾನ ಮ್ಯೂಚುವಲ್ ಫಂಡ್ನಲ್ಲಿ ಎಸ್ಐಪಿ ವಿಧಾನದಲ್ಲೂ ಹೂಡಿಕೆ ಮಾಡಬಹುದು. ಪಿಜಿಐಎಂ ಇಂಡಿಯಾ ಮಿಡ್ಕ್ಯಾಪ್ ಆಪರ್ಚುನಿಟೀಸ್ ಫಂಡ್- ಡೈರೆಕ್ಟ್ ಪ್ಲಾನ್- ಗ್ರೋಥ್ ಇದರಲ್ಲಿ ಕನಿಷ್ಠ 1000 ರೂಪಾಯಿ ಮಾಸಿಕ ಹೂಡಿಕೆಯೊಂದಿಗೆ ಆರಂಭಿಸಬಹುದು. ಈ ಮ್ಯೂಚುವಲ್ ಫಂಡ್ನ ಮಿಡ್ಕ್ಯಾಪ್ ಪ್ಲಾನ್ ಎಸ್ಐಪಿ ವಿಧಾನದಲ್ಲಿ ಹಣ ಹೂಡಿಕೆ ಮಾಡಿದವರಿಗೆ ಅಮೋಘವಾದ ರಿಟರ್ನ್ ನೀಡಿದೆ. ಕಳೆದ ಒಂದು ವರ್ಷದಲ್ಲಿ, ಈ ಮ್ಯೂಚುವಲ್ ಫಂಡ್ ಯೋಜನೆ ಶೇ 6.85ರಷ್ಟು ರಿಟರ್ನ್ (Absolute Return) ನೀಡಿದೆ. ವಾರ್ಷಿಕ ರಿಟರ್ನ್ ಶೇ 12.98ರಷ್ಟಾಗಿದೆ. ಕಳೆದ ಎರಡು ವರ್ಷದಲ್ಲಿ ಈ ಮ್ಯೂಚುವಲ್ ಫಂಡ್ಸ್ ಎಸ್ಐಪಿ ಶೇ 56 ರಷ್ಟು ರಿಟರ್ನ್ (Absolute Return) ನೀಡಿದೆ. ಈ ಅವಧಿಯ ವಾರ್ಷಿಕ ರಿಟರ್ನ್ ಹತ್ತಿರ ಹತ್ತಿರ ಶೇ 49.50ರಷ್ಟಿದೆ. ಕಳೆದ 5 ವರ್ಷದಲ್ಲಿ ಈ ಮ್ಯೂಚುವಲ್ ಫಂಡ್ನ ಎಸ್ಐಪಿ ಪ್ಲಾನ್ ಶೇ 104.50ರಷ್ಟು ರಿಟರ್ನ್ (Absolute Return) ನೀಡಿದೆ. ಇನ್ನು ವಾರ್ಷಿಕ ರಿಟರ್ನ್ ಗಮನಿಸಿದರೆ ಶೇ 29ಕ್ಕಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿಗಿದೆ.
ಮ್ಯೂಚುವಲ್ ಫಂಡ್ ಕ್ಯಾಲ್ಕುಲೇಟರ್ ವ್ಯಾಲ್ಯೂ ರೀಸರ್ಚ್ ಡೇಟಾದ ಪ್ರಕಾರ, ಹೂಡಿಕೆದಾರರು ಇದರಲ್ಲಿ 10 ಸಾವಿರ ರೂಪಾಯಿ ಒಂದು ತಿಂಗಳಿಗೆ ಎಂಬಂತೆ ಎಸ್ಐಪಿ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾ ಸಾಗಿದ್ದರೆ 10 ಸಾವಿರ ರೂಪಾಯಿಯ ಪ್ರತಿ ತಿಂಗಳ ಹೂಡಿಕೆ ಒಂದು ವರ್ಷಕ್ಕೆ 1.25 ಲಕ್ಷ ರೂಪಾಯಿ ಆಗಿರುತ್ತದೆ. 3 ವರ್ಷಕ್ಕೆ 6.49 ಲಕ್ಷ ರೂಪಾಯಿ, ಇನ್ನು 5 ವರ್ಷದ ಹಿಂದಿನಿಂದ ತಿಂಗಳಿಗೆ 10 ಸಾವಿರ ರೂಪಾಯಿಯಂತೆ 5 ವರ್ಷದ ಅವಧಿಗೆ ಹೂಡಿದ್ದರೆ ಅದು ಇವತ್ತಿಗೆ 11.98 ಲಕ್ಷ ರೂಪಾಯಿ ಆಗಿರುತ್ತಿತ್ತು. ಈ ಮಿಡ್-ಕ್ಯಾಪ್ ಮ್ಯೂಚುವಲ್ ಫಂಡ್ಗೆ ವ್ಯಾಲ್ಯೂ ರೀಸರ್ಚ್ನಿಂದ 5 ಸ್ಟಾರ್ ರೇಟಿಂಗ್ ನೀಡಲಾಗಿದೆ.
ಪಿಜಿಐಎಂ ಇಂಡಿಯಾ ಮಿಡ್ಕ್ಯಾಪ್ ಆಪರ್ಚುನಿಟೀಸ್ ಫಂಡ್- ಡೈರೆಕ್ಟ್ ಪ್ಲಾನ್- ಗ್ರೋಥ್ -ಇದನ್ನು ಹೊರತುಪಡಿಸಿ ಇನ್ನೂ ಕೆಲವು ಮಿಡ್ಕ್ಯಾಪ್ ಫಂಡ್ಗಳು ಹೂಡಿಕೆದಾರರಿಗೆ ಆಲ್ಫಾ ರಿಟರ್ನ್ ನೀಡಿವೆ. ಎಡೆಲ್ವೀಸ್ ಮಿಡ್ಕ್ಯಾಪ್ ಡೈರೆಕ್ಟ್, ಎಚ್ಡಿಎಫ್ಸಿ ಮಿಡ್ ಕ್ಯಾಪ್ ಆಪರ್ಚುನಿಟೀಸ್ ಡೈರೆಕ್ಟ್, ಐಸಿಐಸಿಐ ಪ್ರುಡೆನ್ಷಿಯನ್ ಮಿಡ್ಕ್ಯಾಪ್ ಅಂಥವುಗಳಲ್ಲಿ ಒಂದಾಗಿವೆ.
(ಎಚ್ಚರಿಕೆ: ಈ ಲೇಖನವು ಮಾಹಿತಿ ಉದ್ದೇಶಕ್ಕೆ ವಿನಾ ಖರೀದಿಗೆ ಶಿಫಾರಸಲ್ಲ. ಮ್ಯೂಚುವಲ್ ಫಂಡ್ ಹೂಡಿಕೆಯು ಹಣಕಾಸು ವಿಷಯವನ್ನು ಹಾಗೂ ಮಾರುಕಟ್ಟೆ ಅಪಾಯವನ್ನು ಒಳಗೊಂಡಿರುತ್ತದೆ. ಆದ್ದರಿಂದ ಕೂಲಂಕಷವಾಗಿ ಆಲೋಚನೆ ಮಾಡಿದ ಮೇಲೆ ಹೂಡಿಕೆ ಮಾಡಬೇಕು)
ಇದನ್ನೂ ಓದಿ: Mutual funds AUM: 2030ರ ಹೊತ್ತಿಗೆ ಭಾರತದ ಮ್ಯೂಚುವಲ್ ಫಂಡ್ಸ್ ಎಯುಎಂ 90 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆ