AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mutual funds AUM: 2030ರ ಹೊತ್ತಿಗೆ ಭಾರತದ ಮ್ಯೂಚುವಲ್ ಫಂಡ್ಸ್ ಎಯುಎಂ 90 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆ

ಈ ದಶಕದ ಕೊನೆಗೆ ಭಾರತದ ಮ್ಯೂಚುವಲ್ ಫಂಡ್ ವಲಯದ ಅಸೆಟ್ಸ್ ಅಂಡರ್ ಮ್ಯಾನೇಜ್​ಮೆಂಟ್ (AUM) 90 ಲಕ್ಷ ಕೋಟಿ ರೂಪಾಯಿ ಆಗಿರಲಿದೆ ಎಂದು ವರದಿಯೊಂದು ತಿಳಿಸಿದೆ.

Mutual funds AUM: 2030ರ ಹೊತ್ತಿಗೆ ಭಾರತದ ಮ್ಯೂಚುವಲ್ ಫಂಡ್ಸ್ ಎಯುಎಂ 90 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 11, 2022 | 9:02 PM

Share

ಭಾರತದ ಮ್ಯೂಚುವಲ್ ಫಂಡ್ (Mutual Fund) ಕ್ಷೇತ್ರದ ಒಟ್ಟಾರೆ ಅಸೆಟ್ಸ್ ಅಂಡರ್ ಮ್ಯಾನೇಜ್​ಮೆಂಟ್ (AUM) ಈ ದಶಕದ ಕೊನೆಗೆ 90 ಲಕ್ಷ ಕೋಟಿ ರೂಪಾಯಿ ದಾಟಬಹುದು, ಎಂದು ಅಮೆರಿಕ ಮೂಲದ ಇನ್ವೆಸ್ಟ್​ಮೆಂಟ್ ಬ್ಯಾಂಕ್ ಜೆಫೆರೀಸ್​ನ ಜಾಗತಿಕ ಈಕ್ವಿಟಿ ಸ್ಟ್ರಾಟೆಜಿ ಮುಖ್ಯಸ್ಥರಾದ ಕ್ರಿಸ್ಟೋಫರ್ ವುಡ್ ಹೇಳಿದ್ದಾರೆ. ಜನವರಿಯ ಡೇಟಾ ಪ್ರಕಾರ, ವಲಯದ ಒಟ್ಟಾರೆ ಎಯುಎಂ 34.10 ಲಕ್ಷ ಕೋಟಿ ರೂಪಾಯಿ ಇದೆ. ಈಚಿನ ಜೆಫೆರೀಸ್ ನೋಟ್ ಪ್ರಕಾರ, ಮ್ಯೂಚುವಲ್ ಫಂಡ್ ಅಸೆಟ್ಸ್ ಅಂಡರ್ ಮ್ಯಾನೇಜ್​ಮೆಂಟ್​ ಜಿಡಿಪಿಯ ಶೇ 16ರಷ್ಟಕ್ಕೆ ಬೆಳವಣಿಗೆ ಸಾಮರ್ಥ್ಯ ಇದೆ ಎಂದು ಕ್ರಿಸ್ಟೋಫರ್ ವುಡ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಎಚ್​ಡಿಎಫ್​ಸಿ ಅಸೆಟ್ ಮ್ಯಾನೇಜ್​ಮೆಂಟ್​ ಬಹಳ ಆಸಕ್ತಿಕರವಾದದ್ದು ಎಂದು ಗ್ರೀಡ್ ಅಂಡ್​ ಫಿಯರ್ (Greed and Fear) ವರದಿಯಲ್ಲಿ ತಿಳಿಸಲಾಗಿದೆ. ಈ ಸದ್ಯಕ್ಕೆ ಭಾರತದ ದೀರ್ಘಾವಧಿ ಮಾತ್ರ ಪೋರ್ಟ್​ಫೋಲಿಯೋದಲ್ಲಿ ಯಾವುದೇ ಭಾರತದ ಲಿಸ್ಟೆಡ್ ಫಂಡ್​ ಹೌಸ್​ಗಳು ಇಲ್ಲ ಎಂದು ಸೇರಿಸಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಹಲವು ದೇಶಗಳಲ್ಲಿ ರೀಟೇಲ್ ಹೂಡಿಕೆದಾರರ ಸಂಖ್ಯೆ ಹೆಚ್ಚಾಗಿದೆ. ಈಚಿನ ಎಎಂಎಫ್​ಐ ಡೇಟಾದ ಪ್ರಕಾರ, 26.51 ಲಕ್ಷ ಹೊಸ ಹೂಡಿಕೆದಾರರು ಸೇರ್ಪಡೆ ಆಗಿದ್ದಾರೆ. ಎಸ್​ಐಪಿ (Systematic Investment Plan) ಖಾತೆಗಳ ಸಂಖ್ಯೆ ಐತಿಹಾಸಿಕವಾಗಿಯೇ ಮೊದಲ ಬಾರಿಗೆ 5 ಕೋಟಿಯನ್ನು ದಾಟಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು ಸಿಗುತ್ತಿರುವ ಕಾರಣ ಏನೆಂದರೆ ಸೇವೆಗಳು ಮತ್ತು ಉತ್ಪನ್ನಗಳು ಆನ್​ಲೈನ್​ನಲ್ಲಿ ಲಭ್ಯ ಆಗುತ್ತಿರುವುದು. ರೀಟೇಲ್​ ಹೂಡಿಕೆದಾರರ ಖಾತೆ ಸಂಖ್ಯೆಯಲ್ಲೂ ಖಂಡಿತವಾಗಿಯೂ ನಾಟಕೀಯವಾದ ಏರಿಕೆ ಆಗಿದೆ. 2019ರ ಮಾರ್ಚ್​ನ ಕೊನೆಯಲ್ಲಿ ಇದ್ದ 3.5 ಕೋಟಿಯಿಂದ 2021ರ ನವೆಂಬರ್​ಗೆ 7.7 ಕೋಟಿ ಹೆಚ್ಚಳ ಆಗಿದೆ ಎಂದು ಗ್ರೀಡ್ ಅಂಡ್ ಫಿಯರ್ ವರದಿಯಲ್ಲಿದೆ.

ಜೆಫೆರೀಸ್ ಇಂಡಿಯಾ ಕಚೇರಿಯು ಬಿಎಸ್​ಇ500 ಕಂಪೆನಿಗಳ ಷೇರ್​ ಹೋಲ್ಟಿಂಗ್​ ಡೇಟಾದ ವಿಶ್ಲೇಷಣೆ ಮೇಲೆ ಆಧಾರ ಪಟ್ಟಿದ್ದು, ದೇಶೀಯ ರೀಟೇಲ್ ಹೋಲ್ಡಿಂಗ್ಸ್ ಅಂದಾಜು (ಮ್ಯೂಚುವಲ್ ಫಂಡ್​ಗಳು ಮತ್ತು ರೀಟೇಲ್ ಹೂಡಿಕೆದಾರರು) ಷೇರು ಮಾರುಕಟ್ಟೆಯಲ್ಲಿ 2021ರ ಕೊನೆಯ ಹೊತ್ತಿಗೆ ಬಹು ವರ್ಷಗಳ ದಾಖಲೆಯ ಎತ್ತರವಾದ ಶೇ 17.3ರಲ್ಲಿತ್ತು. 2014ರ ಕೊನೆಗೆ ಇದು 11.4 ರಷ್ಟಿತ್ತು. ಅಂದಹಾಗೆ ಅಸೆಟ್ಸ್​ ಅಂಡರ್ ಮ್ಯಾನೇಜ್​ಮೆಂಟ್​ ಅಂದರೆ ಒಂದು ನಿರ್ದಿಷ್ಟ ಸಮಯದಲ್ಲಿ ಮ್ಯೂಚುವಲ್ ಫಂಡ್ ನಿರ್ವಹಿಸುವ ಆಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯ. AUM ತನ್ನ ಹೂಡಿಕೆ ಮೇಲೆ ಮ್ಯೂಚುವಲ್ ಫಂಡ್ ಮಾಡಿದ ಆದಾಯವನ್ನು ಮತ್ತು ಹೊಸ ಹೂಡಿಕೆಗಳನ್ನು ಮಾಡಲು ವ್ಯವಸ್ಥಾಪಕರು ಹೊಂದಿರುವ ಬಂಡವಾಳವನ್ನು ಒಳಗೊಂಡಿದೆ.

ಇದನ್ನೂ ಓದಿ: ELSS Mutual Fund Tax Savings Planning: ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಹೂಡಿಕೆ ವರ್ಷದ ಆರಂಭದಲ್ಲೇ ಯೋಚಿಸಿ

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ