ಮ್ಯೂಚುವಲ್ ಫಂಡ್​ನ ಫಂಡ್ ಮ್ಯಾನೇಜರ್​ಗಳು ಬಸ್ಸಿನ ಡ್ರೈವರ್ ಅಥವಾ ವಿಮಾನದ ಪೈಲಟ್​ಗಳಿದ್ದಂತೆ: ಡಾ ಬಾಲಾಜಿ ರಾವ್

ಮ್ಯೂಚುವಲ್ ಫಂಡ್​ನ ಫಂಡ್ ಮ್ಯಾನೇಜರ್​ಗಳು ಬಸ್ಸಿನ ಡ್ರೈವರ್ ಅಥವಾ ವಿಮಾನದ ಪೈಲಟ್​ಗಳಿದ್ದಂತೆ: ಡಾ ಬಾಲಾಜಿ ರಾವ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 16, 2021 | 4:16 PM

ಪ್ರಯಾಣಿಕರು ಡ್ರೈವರ್ ಹಾಗೂ ಪೈಲಟ್ ಗಳು ಸುರಕ್ಷಿತವಾಗಿ ಮುಟ್ಟಬೇಕಾದ ಸ್ಥಳವನ್ನು ಸುರಕ್ಷಿತವಾಗಿ ಮುಟ್ಟಿಸುತ್ತಾರೆ ಅಂತ ನಂಬಿಕೆ ಇಟ್ಟಿರುವ ಹಾಗೆಯೇ, ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡುವವರು ಫಂಡ್ ಮ್ಯಾನೇಜರ್ ಗಳ ಮೇಲೆ ವಿಶ್ವಾಸವಿಡಬೇಕು

ಖ್ಯಾತ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಅವರು ಹೂಡಿಕೆ ಮಂತ್ರ ಕಾರ್ಯಕ್ರಮದಲ್ಲಿ ಇಂದು ಮ್ಯೂಚುವಲ್ ಫಂಡ್ ಅಂದರೇನು, ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಅನ್ನೋದರ ಬಗ್ಗೆ ತಿಳಿಸಿದ್ದಾರೆ. ನಾವು ಪ್ರತಿನಿತ್ಯ ಮ್ಯೂಚುವಲ್ ಫಂಢ್ ನಲ್ಲಿ ಹೂಡಿಕೆ ಮಾಡುವುದು, ಅದರಲ್ಲೂ ರಿಸ್ಕ್ ಅಂಶ ಇರೋದು, ಹೂಡಿಕೆಗೆ ಮೊದಲು ಸರಿಯಾಗಿ ಯೋಚನೆ ಮಾಡಿ ಹಣ ಇನ್ವೆಸ್ಟ್ ಮಾಡಬೇಕು ಅಂತೆಲ್ಲ ಸೆಲಿಬ್ರಿಟಿಗಳಾದ ಸಚಿನ್ ತೆಂಡೂಲ್ಕರ್, ಎಮ್ ಎಸ್ ಧೋನಿ, ಶಿಖರ್ ಧವನ್, ರೋಹಿತ್ ಶರ್ಮ ಮೊದಲಾದವರೆಲ್ಲ ನೀಡುವ ಸಲಹೆಗಳನ್ನು ಕೇಳಿಸಿಕೊಂಡು ‘ಸಹಿ ಹೈ!’ ಅಂತ ಹೇಳುವ ಜಾಹೀರಾತನ್ನು ನೋಡುತ್ತಿರುತ್ತೇವೆ. ಜನಸಾಮಾನ್ಯರಿಗೆ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಕುರಿತು ಇರುವ ಗೊಂದಲಗಳನ್ನು ನಿವಾರಿಸುವ ಪ್ರಯತ್ನ ಡಾ ರಾವ್ ಮಾಡಿದ್ದಾರೆ.

ಮ್ಯೂಚುವಲ್ ಫಂಡ್ ಅನ್ನೋದು ಒಂದು ಹೂಡಿಕೆದಾರರ ಗುಂಪು ಅಂತ ಡಾ ರಾವ್ ಹೇಳುತ್ತಾರೆ. ಯುನಿಟ್ ಟ್ರಸ್ಟ್ ಆಫ್ ಇಂಡಿಯ ಭಾರತದ ಮೊಟ್ಟಮೊದಲ ಮ್ಯೂಚುವಲ್ ಫಂಡ್ ಸಂಸ್ಥೆಯಾಗಿದ್ದು ಅದು 1964ರಲ್ಲಿ ಅಸ್ತಿತ್ವಕ್ಕೆ ಬಂತು. ಈ ಗುಂಪಿಗೆ ಒಬ್ಬ ಫಂಡ್ ಮ್ಯಾನೇಜರ್ ಇರುತ್ತಾರೆ ಮತ್ತು ಅವರಿಗೆ ಷೇರು ಮಾರುಕಟ್ಟೆ ಮತ್ತು ಲಿಸ್ಟೆಡ್ ಕಂಪನಿಗಳು, ಎಲ್ಲ 55 ಸೆಕ್ಟರ್ ಕಂಪನಿಗಳ ಜಾತಕ ಅವರಲ್ಲಿ ಇರುತ್ತದೆ ಎಂದು ಡಾ ರಾವ್ ಹೇಳುತ್ತಾರೆ. ಫಂಡ್ ಮ್ಯಾನೇಜರ್ಗಳನ್ನು ಅವರು ಪೈಲಟ್, ಲೊಕೊಮೋಟಿವ್ ಪೈಲಟ್ ಮತ್ತು ಬಸ್ ಡ್ರೈವರ್ ಗಳಿಗೆ ಹೋಲಿಸುತ್ತಾರೆ.

ಪ್ರಯಾಣಿಕರು ಡ್ರೈವರ್ ಹಾಗೂ ಪೈಲಟ್ ಗಳು ಸುರಕ್ಷಿತವಾಗಿ ಮುಟ್ಟಬೇಕಾದ ಸ್ಥಳವನ್ನು ಸುರಕ್ಷಿತವಾಗಿ ಮುಟ್ಟಿಸುತ್ತಾರೆ ಅಂತ ನಂಬಿಕೆ ಇಟ್ಟಿರುವ ಹಾಗೆಯೇ, ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡುವವರು ಫಂಡ್ ಮ್ಯಾನೇಜರ್ ಗಳ ಮೇಲೆ ವಿಶ್ವಾಸವಿಡಬೇಕು, ಅವರಿಗೆ ಯಾವ ಕಂಪನಿಯಲ್ಲಿ ಹಣ ಹೂಡಿದರೆ ರಿಟರ್ನ್ಸ್ ಜಾಸ್ತಿ ಅನ್ನೋದರ ಬಗ್ಗೆ ಪಕ್ಕಾ ತಿಳುವಳಿಕೆ ಇರುತ್ತಾದ್ದರಿಂದ ಹೂಡಿಕೆದಾರರು ನಿಶ್ಚಿಂತೆಯಿಂದ ಇರಬೇಕು ಅಂತ ಅವರು ಹೇಳುತ್ತಾರೆ.

ಹೂಡಿಕೆದಾರರ ಹಣವನ್ನು ಫಂಡ್ ಮ್ಯಾನೇಜರ್ ಗಳು ಹೇಗೆ ನಿರ್ವಹಣೆ ಮಾಡುತ್ತಾರೆ, ಅವರು ಹೂಡಿಕೆಗೆ ಕಂಪನಿಗಳನ್ನು ಹೇಗೆ ಆರಿಸಿಕೊಳ್ಳುತ್ತಾರೆ ಮತ್ತು ಮ್ಯೂಚುವಲ್ ಫಂಡ್ ಗೆ ಸಂಬಂಧಿಸಿದ ಉಳಿದೆಲ್ಲ ವಿಷಯಗಳನ್ನು ಡಾ ರಾವ್ ಮುಂದಿನ ಸಂಚಿಕೆಯಲ್ಲಿ ತಿಳಿಸಲಿದ್ದಾರೆ.

ಇದನ್ನೂ ಓದಿ: ಮುಂದಿನ ವಾರದಿಂದಲೇ ಬಿಸಿಯೂಟ ಪುನರಾರಂಭ: ಆದರೆ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಹುಳು ಹಿಡಿದ ಆಹಾರ ಪತ್ತೆ! ವಿಡಿಯೋ ವೈರಲ್