AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ವಾರದಿಂದಲೇ ಬಿಸಿಯೂಟ ಪುನರಾರಂಭ: ಆದರೆ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಹುಳು ಹಿಡಿದ ಆಹಾರ ಪತ್ತೆ! ವಿಡಿಯೋ ವೈರಲ್

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಯ ವಿದ್ಯಾರ್ಥಿಗಳಿಗೆ ನೀಡಿದ ಆಹಾರದಲ್ಲಿ ಹುಳುಗಳು ಇರುವುದನ್ನ ಕಂಡು ವಿದ್ಯಾರ್ಥಿನಿಯೊಬ್ಬಳು ವಿಡಿಯೋ ಮಾಡಿ ವೈರಲ್ ಮಾಡಿದ್ದಾಳೆ. ಕಳಪೆ ಅಕ್ಕಿ ಹಾಗೂ ಬೇಳೆ ಬಗ್ಗೆ ವಿದ್ಯಾರ್ಥಿ ನಿ ಮಾಹಿತಿ ನೀಡಿದ್ದು ಇದನ್ನ ನಾವು ಹೇಗೆ ತಿನ್ನೋದು ಅಂತಾ ಪ್ರಶ್ನೆ ಮಾಡಿದ್ದಾಳೆ.

ಮುಂದಿನ ವಾರದಿಂದಲೇ ಬಿಸಿಯೂಟ ಪುನರಾರಂಭ: ಆದರೆ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಹುಳು ಹಿಡಿದ ಆಹಾರ ಪತ್ತೆ! ವಿಡಿಯೋ ವೈರಲ್
ಮುಂದಿನ ವಾರದಿಂದಲೇ ಬಿಸಿಯೂಟ ಪುನರಾರಂಭ: ಆದರೆ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಹುಳು ಹಿಡಿದ ಆಹಾರ ಪತ್ತೆ! ವಿದ್ಯಾರ್ಥಿನಿ ವಿಡಿಯೋ ವೈರಲ್
TV9 Web
| Edited By: |

Updated on:Oct 16, 2021 | 1:32 PM

Share

ತುಮಕೂರು: ಇನ್ನೇನು ಮುಂದಿನ ವಾರದಿಂದಲೇ ವರ್ಷಗಳ ಬಳಿಕ ರಾಜ್ಯದಲ್ಲಿ ಶಾಲೆಗಳು ಆರಂಭವಾಗಲಿವೆ. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಮತ್ತೆ ಜಾರಿ ಮಾಡುವುದಾಗಿ ಸ್ವತಃ ರಾಜ್ಯದ ಶಿಕ್ಷಣ ಸಚಿವರೇ ಹೇಳಿದ್ದಾರೆ. ಆದರೆ ಈ ಮಧ್ಯೆ ಬಿಟಿಯೂಟ ಎಷ್ಟು ಕಳಪೆಯಾಗಿದೆ ಎಂಬುದಕ್ಕೆ ವಿದ್ಯಾರ್ಥಿನಿಯೊಬ್ಬಳು ನಿದರ್ಶನ ಒದಗಿಸಿದ್ದಾಳೆ. ಅದೂ ಶಿಕ್ಷಣ ಸಚಿವರ ಕ್ಷೇತ್ರದಲ್ಲಿಯೇ ಇದನ್ನು ಪತ್ತೆ ಹಚ್ಚಲಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಪ್ರತಿನಿಧಿಸುವ ಅಸೆಂಬ್ಲಿ ಕ್ಷೇತ್ರದಲ್ಲೇ ಹುಳು ಹಿಡಿದ ಆಹಾರ ಪತ್ತೆಯಾಗಿದೆ. ಶಿಕ್ಷಣ ಸಚಿವರ ಕ್ಷೇತ್ರದಲ್ಲಿಯೇ ಹೀಗಾದರೇ ಇನ್ನೂ ರಾಜ್ಯದ ಉಳಿದ ಭಾಗಗಳ ಗತಿಯೇನು? ಸಚಿವರೇ ಇತ್ತ ಗಮನಹರಿಸಿ ಎಂದು ವಿದ್ಯಾರ್ಥಿನಿಯೊಬ್ಬರು ಮಾಡಿರುವ ವಿಡಿಯೋ ಸಂದೇಶ ವೈರಲ್ ಆಗಿದೆ. ಹೌದು‌. ಶಿಕ್ಷಣ ಸಚಿವ ಬಿಸಿ ನಾಗೇಶ್ ಪ್ರತಿನಿಧಿಸುವ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಹುಳು ಹಿಡಿದಿರುವ ಆಹಾರ ಪತ್ತೆಯಾಗಿದೆ. ಬೇಳೆ ಹಾಗೂ ಅಕ್ಕಿಯಲ್ಲಿ ವಿಪರೀತ ಹುಳು ಇರುವ ವಿಡಿಯೋವನ್ನ ವಿದ್ಯಾರ್ಥಿನಿ ವೈರಲ್ ಮಾಡಿದ್ದಾಳೆ.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಯ ವಿದ್ಯಾರ್ಥಿಗಳಿಗೆ ನೀಡಿದ ಆಹಾರದಲ್ಲಿ ಹುಳುಗಳು ಇರುವುದನ್ನ ಕಂಡು ವಿದ್ಯಾರ್ಥಿನಿಯೊಬ್ಬಳು ವಿಡಿಯೋ ಮಾಡಿ ವೈರಲ್ ಮಾಡಿದ್ದಾಳೆ. ಕಳಪೆ ಅಕ್ಕಿ ಹಾಗೂ ಬೇಳೆ ಬಗ್ಗೆ ವಿದ್ಯಾರ್ಥಿ ನಿ ಮಾಹಿತಿ ನೀಡಿದ್ದು ಇದನ್ನ ನಾವು ಹೇಗೆ ತಿನ್ನೋದು ಅಂತಾ ಪ್ರಶ್ನೆ ಮಾಡಿದ್ದಾಳೆ. ಅದರಲ್ಲೂ ಶಿಕ್ಷಣ ಸಚಿವರ ಬಿಸಿ ನಾಗೇಶ್ ಕ್ಷೇತ್ರದಲ್ಲಿಯೇ ಹೀಗಾದರೇ ಇನ್ನು ರಾಜ್ಯದ ಶಾಲೆಗಳ ಗತಿಯೇನು ಅಂತಾ ಆಕ್ಷೇಪ ವ್ಯಕ್ತವಾಗಿದೆ. ಸದ್ಯ ಸಚಿವರು ಇದನ್ನ ಗಮನಹರಿಸಿ ಸರಿಪಡಿಸಲು ವಿದ್ಯಾರ್ಥಿ ಗಳು ಹಾಗೂ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ಇನ್ನಾದರೂ ಶಾಲೆಗಳಿಗೆ ಉತ್ತಮ ಆಹಾರ ನೀಡಲಿ ಎಂಬುದು ಎಲ್ಲರ ಆಶಯವಾಗಿದೆ.

ಇದನ್ನೂ ಓದಿ: ಅಪಾಯದಂಚಿನಲ್ಲಿರುವ ಮನೆ ಮಾಲೀಕರಿಗೆ ನೋಟಿಸ್ ನೀಡಿ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಗೋಪಾಲಯ್ಯ ಸೂಚನೆ

ಇದನ್ನೂ ಓದಿ: ಬೆಂಗಳೂರಲ್ಲಿ ಬಿಬಿಎಂಪಿ ಎಡವಟ್ಟಿಗೆ 9 ವರ್ಷದ ಬಾಲಕ ಬಲಿ!

Another Multi Storey Building Tilts In Bengaluru! ಬೆಂಗಳೂರಿನಲ್ಲಿ ಕುಸಿಯುವ ಹಂತದಲ್ಲಿರುವ 7ಅಂತಸ್ತಿನ ಕಟ್ಟಡ

(worms found in bisi uta in karnataka education minister constituency in tiptur)

Published On - 11:41 am, Sat, 16 October 21

ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ