ಅಪಾಯದಂಚಿನಲ್ಲಿರುವ ಮನೆ ಮಾಲೀಕರಿಗೆ ನೋಟಿಸ್ ನೀಡಿ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಗೋಪಾಲಯ್ಯ ಸೂಚನೆ

ಕಮಲನಗರದ ಶಂಕರ್​ನಾಗ್​ ಬಸ್ ನಿಲ್ದಾಣದ ಬಳಿಯ ಕಟ್ಟಡವನ್ನು ಪರಿಶೀಲಿಸಿದ ಬಳಿಕ ಸಚಿವ ಗೋಪಾಲಯ್ಯ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಈ ಕಟ್ಟಡಗಳಲ್ಲಿ ವಾಸವಿರುವವರನ್ನು ಖಾಲಿ ಮಾಡಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಗೋಪಾಲಯ್ಯ ತಿಳಿಸಿದ್ದಾರೆ.

ಅಪಾಯದಂಚಿನಲ್ಲಿರುವ ಮನೆ ಮಾಲೀಕರಿಗೆ ನೋಟಿಸ್ ನೀಡಿ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಗೋಪಾಲಯ್ಯ ಸೂಚನೆ
ಸಚಿವ ಗೋಪಾಲಯ್ಯ
Follow us
TV9 Web
| Updated By: preethi shettigar

Updated on:Oct 13, 2021 | 8:01 AM

ಬೆಂಗಳೂರು: ಕಮಲಾನಗರದಲ್ಲಿ ಕಟ್ಟಡ ಕುಸಿತದ ಹಂತ ತಲುಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಗೋಪಾಲಯ್ಯ ಮಾತನಾಡಿದ್ದು, ಬೆಂಗಳೂರು ನಗರದಲ್ಲಿ 3 ಅಂತಸ್ತಿನ ಕಟ್ಟಡವನ್ನು ಅಧಿಕಾರಿಗಳು ಪರಿಶೀಲಿಸಬೇಕು. ಬಳಿಕ ಅಪಾಯದಂಚಿನಲ್ಲಿರುವ ಮನೆ ಮಾಲೀಕರಿಗೆ ನೋಟಿಸ್ ನೀಡಿ. ಕುಸಿತದ ಹಂತದಲ್ಲಿರುವ ಕಟ್ಟಡಗಳನ್ನು ಗುರುತಿಸಿ, ತಕ್ಷಣ ತೆರವು ಮಾಡಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಸೂಚನೆ ನೀಡಿದ್ದಾರೆ.

ಕಮಲನಗರದ ಶಂಕರ್​ನಾಗ್​ ಬಸ್ ನಿಲ್ದಾಣದ ಬಳಿಯ ಕಟ್ಟಡವನ್ನು ಪರಿಶೀಲಿಸಿದ ಬಳಿಕ ಸಚಿವ ಗೋಪಾಲಯ್ಯ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಈ ಕಟ್ಟಡಗಳಲ್ಲಿ ವಾಸವಿರುವವರನ್ನು ಖಾಲಿ ಮಾಡಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

ಕಮಲನಗರದ ಶಂಕರ್​ನಾಗ್​ ಬಸ್ ನಿಲ್ದಾಣದ ಬಳಿಯ ಮೂರು ಅಂತಸ್ತಿನ ಮನೆಯ ಗ್ರೌಂಡ್ ಪ್ಲೋರ್ ಗೋಡೆ ಕುಸಿತವಾಗಿದ್ದು, ಭಯಭೀತರಾಗಿ ಕಟ್ಟಡದಲ್ಲಿ ವಾಸವಿದ್ದ ನಾಲ್ಕು ಕುಟುಂಬಗಳು ಹೊರ ಬಂದಿದ್ದಾರೆ. ಅಲ್ಲದೆ ಅಕ್ಕಪಕ್ಕದ ಮನೆಯವರು ಕೂಡ ಮನೆಯಿಂದ ಹೊರ ಬಂದಿದ್ದಾರೆ. ಸದ್ಯ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಾನೂನಾತ್ಮಕವಾಗಿ ಕಟ್ಟಡ ತೆರವಿಗೆ ಬಿಬಿಎಂಪಿ ಸಿದ್ಧತೆ ಕಮಲಾನಗರದಲ್ಲಿ ಇನ್ನೂ ಸಹ ಮೂರು ಅಂತಸ್ತಿನ ಕಟ್ಟಡ ಕುಸಿಯುವ ಹಂತದಲ್ಲಿದೆ. ಹೀಗಾಗಿ ರಾತ್ರಿ ಸ್ಥಳದಲ್ಲೇ ಎನ್​ಡಿಆರ್​ಎಫ್​, ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ರಾತ್ರಿಯೇ ಡೆಮಾಲಿಷನ್ ಕಂಟ್ರ್ಯಾಕ್ಟರ್​ಗಳ ಸಲಹೆ ಪಡೆದಿದ್ದಾರೆ. ಬೆಳಿಗ್ಗೆ ಹಂತ ಹಂತವಾಗಿ ತೆರವು ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಕ್ಕಪಕ್ಕದವರನ್ನೂ ಖಾಲಿ ಮಾಡಿಸಲಾಗಿದೆ. ಆದರೆ ಕಟ್ಟಡದ ಮಾಲಿಕರು ಪತ್ತೆಯಿಲ್ಲದ ಕಾರಣ ತೆರವಿಗೆ ಅನುಮತಿ ನೀಡುವವರು ಇಲ್ಲದಾಗಿದೆ. ಹೀಗಾಗಿ ಸಾರ್ವಜನಿಕ ಸುರಕ್ಷತೆ ಗಮನದಲ್ಲಿರಿಸಿಕೊಂಡು ಕಾನೂನಾತ್ಮಕವಾಗಿ ಕಟ್ಟಡ ತೆರವಿಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.

ಭಾರಿ ಮಳೆಯಿಂದ ಕಟ್ಟಡದ ಪಾಯ ಕುಸಿದಿದೆ: ಗೌರವ್ ಗುಪ್ತಾ ಕಮಲನಗರದ ಶಂಕರ್ನಾಗ್ ಬಸ್ ನಿಲ್ದಾಣದ ಬಳಿಯ 3 ಅಂತಸ್ತಿನ ಕಟ್ಟಡ ಕುಸಿಯುವ ಹಂತದಲ್ಲಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದು, ಭಾರಿ ಮಳೆಯಿಂದ ಕಟ್ಟಡದ ಪಾಯ ಕುಸಿದಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಅಪಾಯದಂಚಿನಲ್ಲಿರುವ ಮನೆಗಳ ಪಟ್ಟಿ ತಯಾರಿ ಮಾಡಲಾಗಿದೆ. ಬಿಬಿಎಂಪಿ ತಯಾರಿಸಿದ್ದ ಪಟ್ಟಿಯಲ್ಲಿ ಈ ಕಟ್ಟಡವೂ ಇದೆ. ಸದ್ಯ ಮೂರಂತಸ್ತಿನ ಕಟ್ಟಡದಲ್ಲಿದ್ದವರನ್ನು ಖಾಲಿ ಮಾಡಿಸಿದ್ದೇವೆ. ಕಟ್ಟಡ ತೆರವು ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

ಸಬ್ ಡಿವಿಷನ್ ಅಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಲಾಗಿದೆ. ಕಟ್ಟಡ ಸಾಧಾರಣವಾಗಿ ಕುಸಿದರೆ ಯಾವುದೇ ಅಪಾಯವಿಲ್ಲ. ಇಲ್ಲವಾದರೆ ಬೆಳಿಗ್ಗೆ 9ರ ನಂತರ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು. ಕಟ್ಟಡದ ಮಾಲೀಕ ಇರದಿದ್ದರೆ ಸಾರ್ವಜನಿಕ ಹಿತಾಸಕ್ತಿಯನ್ವಯ ಅಧಿಕಾರ ಚಲಾವಣೆ ಮಾಡಿ ಕಟ್ಟಡ ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ:

ಅನ್​ಲಾಕ್ ಮಾಡುವುದು ಸುಲಭ ಆದರೆ, ಅನ್​ಲಾಕ್ ನಂತರ ವೈರಸ್ ಹರಡುವ ಸಾಧ್ಯತೆ‌ಯಿದೆ: ಗೌರವ್​ ಗುಪ್ತಾ

ಕಸ್ತೂರಿನಗರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ; ಸೆಕ್ಯೂರಿಟಿ ಗಾರ್ಡ್ ಸಮಯಪ್ರಜ್ಞೆಯಿಂದ 15 ಜನ ಪಾರು

Published On - 7:47 am, Wed, 13 October 21