Bengaluru Power Cut: ಬೆಂಗಳೂರಿನ ಜಯನಗರ, ವೈಟ್​ಫೀಲ್ಡ್, ರಾಜಾಜಿನಗರ ಸೇರಿ ಈ ಏರಿಯಾಗಳಲ್ಲಿ ಇಂದು ಪವರ್ ಕಟ್

Bangalore BESCOM: ಇಂದು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ಬೆಂಗಳೂರಿನ ರಾಜಾಜಿನಗರ, ಆರ್​ಆರ್​ ನಗರ,ಜಯನಗರ, ಮಲ್ಲೇಶ್ವರಂ ಸೇರಿ ಹಲವು ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

Bengaluru Power Cut: ಬೆಂಗಳೂರಿನ ಜಯನಗರ, ವೈಟ್​ಫೀಲ್ಡ್, ರಾಜಾಜಿನಗರ ಸೇರಿ ಈ ಏರಿಯಾಗಳಲ್ಲಿ ಇಂದು ಪವರ್ ಕಟ್
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಚರಂಡಿ, ರಸ್ತೆಗಳು, ರಾಜಕಾಲುವೆಗಳೆಲ್ಲ ತುಂಬಿ ಹರಿಯುತ್ತಿವೆ. ಇದರಿಂದ ಸಿಲಿಕಾನ್ ಸಿಟಿಯ (Bangalore Rain) ಜನರು ಪರದಾಡುವಂತಾಗಿದೆ. ಭಾರೀ ಮಳೆಯಿಂದ ಮರಗಳು ಬಿದ್ದು, ವಿದ್ಯುತ್ ತಂತಿಗಳು ಕೂಡ ಕಟ್ ಆಗಿವೆ. ನಗರದಲ್ಲಿ ಇಂದು ಕೂಡ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ಇಂದು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ರಾಜಾಜಿನಗರ, ಆರ್​ಆರ್​ ನಗರ,ಜಯನಗರ, ಮಲ್ಲೇಶ್ವರಂ ಸೇರಿ ಹಲವು ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ (BESCOM) ತಿಳಿಸಿದೆ.

ಇಂದು ಬೆಂಗಳೂರಿನ ರಾಜಾಜಿನಗರ, ಆರ್​ಆರ್​ ನಗರ, ಕೆಂಗೇರಿ, ಜಯನಗರ, ಕೋರಮಂಗಲ, ಮಲ್ಲೇಶ್ವರಂ, ಜಾಲಹಳ್ಳಿ, ಹೆಬ್ಬಾಳ, ಪೀಣ್ಯ, ಇಂದಿರಾ ನಗರ, ವೈಟ್​ಫೀಲ್ಡ್, ಶಿವಾಜಿನಗರ, ವಿಧಾನಸೌಧ, ಎಚ್ಎಸ್ಆರ್ ಲೇಔಟ್, ಚಂದಾಪುರ, ಮಾಗಡಿ, ನೆಲಮಂಗಲ, ಹೊಸಕೋಟೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

ನಾಳೆ (ಅಕ್ಟೋಬರ್ 14) ಕೂಡ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ. ಮಲ್ಲೇಶ್ವರಂ, ಜಾಲಹಳ್ಳಿ, ಹೆಬ್ಬಾಳ, ಪೀಣ್ಯ, ಜಯನಗರ, ಕೋರಮಂಗಲ, ಹೆಚ್.ಎಸ್.ಆರ್ ಲೇಔಟ್ ವಿಭಾಗಗಳಲ್ಲಿ ನಾಳೆ ಪವರ್ ಕಟ್ ಇರಲಿದೆ. ಹಾಗೇ, ರಾಜಾಜಿನಗರ, ಆರ್.ಆರ್ ನಗರ, ಕೆಂಗೇರಿಯಲ್ಲಿ ಕೂಡ ಗುರುವಾರ ವಿದ್ಯುತ್ ವ್ಯತ್ಯಯಾಗಲಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಪವರ್ ಕಟ್ ಇಲ್ಲ; ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ ನೀಡುತ್ತೇವೆ: ಬಸವರಾಜ ಬೊಮ್ಮಾಯಿ

Bengaluru News: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಕರೆಂಟ್ ಇರೋದಿಲ್ಲ; ನಿಮ್ಮ ಏರಿಯಾದಲ್ಲೂ ಪವರ್ ಕಟ್ ಇದೆಯಾ?

Read Full Article

Click on your DTH Provider to Add TV9 Kannada