ಕಸ್ತೂರಿನಗರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ; ಸೆಕ್ಯೂರಿಟಿ ಗಾರ್ಡ್ ಸಮಯಪ್ರಜ್ಞೆಯಿಂದ 15 ಜನ ಪಾರು

ಕಟ್ಟಡದ ಬಲ ಭಾಗದ ಪಿಲ್ಲರ್ ಕೆಳಗೆ ಕುಸಿಯುತ್ತಿದ್ದಂತೆ. ಸೆಕ್ಯೂರಿಟಿ ಗಾರ್ಡ್ ಮನೆ ಮನೆಗೆ ಹೋಗಿ ಎಲ್ಲರನ್ನು ಕೆಳಗಡೆ ಇಳಿಸಿದ್ದಾರೆ. ಪಕ್ಕದ ಮನೆಯ ಮಾಲೀಕರನ್ನ ಕೂಗಿ ಕರೆದಿದ್ದಾರೆ.

ಕಸ್ತೂರಿನಗರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ; ಸೆಕ್ಯೂರಿಟಿ ಗಾರ್ಡ್ ಸಮಯಪ್ರಜ್ಞೆಯಿಂದ 15 ಜನ ಪಾರು
ಕಸ್ತೂರಿನಗರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ; ಸೆಕ್ಯೂರಿಟಿ ಗಾರ್ಡ್ ಸಮಯಪ್ರಜ್ಞೆಯಿಂದ 15 ಜನ ಪಾರು


ಬೆಂಗಳೂರು: ಅಕ್ಟೋಬರ್ 07ರಂದು ನಗರದ ಕಸ್ತೂರಿನಗರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಈ ಘಟನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಸಮಯಪ್ರಜ್ಞೆ ಮೆರೆದಿದ್ದು 15 ಜನರನ್ನು ಪಾರು ಮಾಡಿದ್ದಾರೆ. ಕಟ್ಟಡ ಕುಸಿಯುವ ಸೂಚನೆ ಸಿಗುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಸೆಕ್ಯೂರಿಟಿ ಗಾರ್ಡ್ 15 ಜನರನ್ನು ಸೇಫ್ ಮಾಡಿದ್ದಾರೆ.

ಕಟ್ಟಡದ ಬಲ ಭಾಗದ ಪಿಲ್ಲರ್ ಕೆಳಗೆ ಕುಸಿಯುತ್ತಿದ್ದಂತೆ. ಸೆಕ್ಯೂರಿಟಿ ಗಾರ್ಡ್ ಮನೆ ಮನೆಗೆ ಹೋಗಿ ಎಲ್ಲರನ್ನು ಕೆಳಗಡೆ ಇಳಿಸಿದ್ದಾರೆ. ಪಕ್ಕದ ಮನೆಯ ಮಾಲೀಕರನ್ನ ಕೂಗಿ ಕರೆದಿದ್ದಾರೆ. ಕುಸಿಯುತ್ತಿರುವ ಪಿಲ್ಲರ್ ತೋರಿಸಿ ಮಾಹಿತಿ ನೀಡಿದ್ದಾರೆ. ಕಟ್ಟಡ ಕುಸೀತಿದ್ದಂತೆ ಮೊದಲು ಲಿಫ್ಟ್ ಆಫ್ ಮಾಡಿದ್ದಾರೆ. ಮನೆಯಲ್ಲಿದ್ದ ಎಲ್ಲಾ ಬಾಡಿಗೆದಾರರನ್ನು ಮೆಟ್ಟುಲುಗಳ ಸಾಹಯದಿಂದ ಕೆಳಗೆ ಇಳಸಿದ್ದಾರೆ. ತಕ್ಷಣವೇ ಮನೆಯ ಮಾಲೀಕರ ಗಮನಕ್ಕೆ ತಂದಿದ್ದಾರೆ. ಈ ರೀತಿ ಸೆಕ್ಯೂರಿಟಿ ಗಾರ್ಡ್ ಬುದ್ಧಿವಂತಿಕೆಯಿಂದ 15 ಜನ ಬದುಕುಳಿದಿದ್ದಾರೆ.

ಸಮಯಪ್ರಜ್ಞೆಯಿಂದ ತಪ್ಪಿತು ಘೋರ ದುರಂತ
ರಾಮಮರ್ತಿ ನಗರದ ಕಸ್ತೂರಿ ನಗರದಲ್ಲಿ ನಿನ್ನೆ 3 ಅಂತಸ್ತಿನ ಕಟ್ಟಡ ಕುಸಿದಿದೆ. ಕಸ್ತೂರಿ ನಗರದ ಡಾಕ್ಟರ್ಸ್ ಲೇ ಔಟ್‌ನಲ್ಲಿ ಈ ಕಟ್ಟಡವಿದ್ದು ಬೆಳಗ್ಗೆಯೇ ಸ್ವಲ್ಪ ವಾಲಿತ್ತು. ಕಟ್ಟಡ ವಾಲ್ತಿದ್ದಂತೆ ನಿವಾಸಿಗಳು ಮನೆಬಿಟ್ಟು ಹೊರಬಂದಿದ್ರು. ಹೀಗೆ ನಿವಾಸಿಗಳು ಹೊರಬಂದಿದ್ದೇ ತಡ, ಮಧ್ಯಾಹ್ನದ ವೇಳೆಗೆ ಇಡೀ ಕಟ್ಟಡವೇ ವಾಲಿ ನಿಂತಿತ್ತು.

ಫಾರೂಕ್ ಬೇಗ್ ಅನ್ನೋರಿಗೆ ಸೇರಿದ್ದ ಈ ಕಟ್ಟಡದಲ್ಲಿ 2 ಬಿಹೆಚ್‌ಕೆಯ ಒಟ್ಟು 8 ಪ್ಲಾಟ್‌ಗಳಿದ್ದವು. ಈ ಪೈಕಿ 3 ಮನೆಗಳಲ್ಲಿ ಮಾತ್ರ ಜನ ವಾಸವಿದ್ರೆ ಉಳಿದ ಫ್ಲಾಟ್‌ ಖಾಲಿಯಾಗಿದ್ವು. ನಿನ್ನೆ ಬೆಳಗ್ಗೆ ಕಟ್ಟಡದ 1 ಭಾಗ ವಾಲೋದಕ್ಕೆ ಶುರುವಾಗಿತ್ತು. ಇದನ್ನ ಗಮನಿಸಿದ ಸೆಕ್ಯೂರಿಟಿಗಾರ್ಡ್‌, ಮಾಹಿತಿ ನೀಡಿದ್ದ. ಹೀಗಾಗಿ ಎಲ್ರೂ ಮನೆಬಿಟ್ಟು ಹೊರ ಬಂದಿದ್ರು. ಇಡೀ ಬಿಲ್ಡಿಂಗ್‌ ಖಾಲಿಯಾಗ್ತಿದ್ದಂತೆ, ನೋಡ ನೋಡ್ತಿದ್ದಂತೆ ಇಡೀ ಕಟ್ಟಡ ಬಲಭಾಗಕ್ಕೆ ವಾಲಿಕೊಂಡಿದೆ.

3 ಅಂತಸ್ತಿಗೆ ಪರ್ಮಿಷನ್‌.. 4ನೇ ಮಹಡಿ ಕನ್‌ಸ್ಟ್ರಕ್ಷನ್‌
ಅಷ್ಟಕ್ಕೂ 2014 ರಲ್ಲಿ ಫಾರುಕ್ ಈ ಕಟ್ಟಡ ಕಟ್ಟಿದ್ರು. ಗ್ರೌಂಡ್‌ ಪ್ಲಸ್‌ 2ಗೆ ಫರ್ಮಿಷನ್‌ ಪಡೆದಿದ್ದ ಫಾರೂಕ್‌, ಸದ್ಯ ನಾಲ್ಕನೇ ಮಹಡಿಗೂ ಕೈಹಾಕಿದ್ರು. ಈ ಕಟ್ಟಡದ ಅರ್ಧಕಾಮಗಾರಿ ನಡೆದಿರುವಾಗ್ಲೇ ಕಟ್ಟಡ ಉರುಳಿಬಿದ್ದಿದೆ. ಸದ್ಯ ಕಟ್ಟದಲ್ಲಿನ ನಿವಾಸಿಗಳು ಬಚಾವ್‌ ಆಗಿದ್ದು, ಅಕ್ಕಪಕ್ಕದ ಬಿಲ್ಡಿಂಗ್ಗಳ ನಿವಾಸಿಗಳನ್ನೂ ತೆರವುಗೊಳಿಸಲಾಗಿದೆ. ಇನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ರು. ಅಕ್ರಮವಾಗಿ ಮತ್ತೊಂದು ಅಂತಸ್ತು ಕಟ್ಟಿದ್ದಕ್ಕೆ ಕ್ರಿಮಿನಲ್‌ ಕೇಸ್‌ ಹಾಕಿ ಕ್ರಮ ಕೈಗೊಳ್ತೀವಿ ಅಂತಾ ಖಡಕ್ ಎಚ್ಚರಿಕೆ ಕೊಟ್ರು.

ಇದನ್ನೂ ಓದಿ: Bengaluru: ಕಸ್ತೂರಿನಗರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ

Read Full Article

Click on your DTH Provider to Add TV9 Kannada