ಪ್ರಿಯತಮೆಗೆ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿ ಗಿಫ್ಟ್‌ ಕೊಡಿಸಲು ಕಳ್ಳತನ, ಕಿಲಾಡಿ ಜೋಡಿ ಅರೆಸ್ಟ್

ರೌಡಿಶೀಟರ್ ವಿನಯ್ ನನ್ನ ಪ್ರಿಯತಮೆ ಕೀರ್ತನಾಳನ್ನು ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಲು ಹಾಗೂ ಗಿಫ್ಟ್‌ ಕೊಡಿಸಲು ಹಣಕ್ಕಾಗಿ ಇಬ್ಬರು ದಂಪತಿ ಸೋಗಿನಲ್ಲಿ ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ಮಾರುತಿನಗರದ ಕುಲಶೇಖರ್ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.

ಪ್ರಿಯತಮೆಗೆ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿ ಗಿಫ್ಟ್‌ ಕೊಡಿಸಲು ಕಳ್ಳತನ, ಕಿಲಾಡಿ ಜೋಡಿ ಅರೆಸ್ಟ್
ಪ್ರಿಯತಮೆಗೆ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿ ಗಿಫ್ಟ್‌ ಕೊಡಿಸಲು ಕಳ್ಳತನ, ಕಿಲಾಡಿ ಜೋಡಿ ಅರೆಸ್ಟ್

ಬೆಂಗಳೂರು: ಲಾಂಗ್‌ ಡ್ರೈವ್‌ ಹೋಗಲಿಕ್ಕೆ ಹಾಗೂ ಗಿಫ್ಟ್‌ ಕೊಡಿಸಲು ಹಣಕ್ಕಾಗಿ ಕಳ್ಳತನ ಮಾಡಿದ ಹಿನ್ನೆಲೆಯಲ್ಲಿ ಚಂದ್ರಾಲೇಔಟ್ ಠಾಣೆ ಪೊಲೀಸರು ಪ್ರೇಮಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನ ರಾಜಾಜಿನಗರ ರೌಡಿಶೀಟರ್ ವಿನಯ್ ಹಾಗೂ ಪ್ರಿಯತಮೆ ಕೀರ್ತನಾ ಬಂಧಿತರು.

ರೌಡಿಶೀಟರ್ ವಿನಯ್ ನನ್ನ ಪ್ರಿಯತಮೆ ಕೀರ್ತನಾಳನ್ನು ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಲು ಹಾಗೂ ಆಕೆಗೆ ಗಿಫ್ಟ್‌ ಕೊಡಿಸಲು ಹಣಕ್ಕಾಗಿ ಇಬ್ಬರು ದಂಪತಿ ಸೋಗಿನಲ್ಲಿ ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ಮಾರುತಿನಗರದ ಕುಲಶೇಖರ್ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ಸದ್ಯ ಪೊಲೀಸರು ಕಿಲಾಡಿ ಜೋಡಿಯನ್ನು ಅರೆಸ್ಟ್ ಮಾಡಿದೆ.

ರೌಡಿಶೀಟರ್ ವಿನಯ್ನನ್ನು ಆತನ ಪ್ರಿಯತಮೆ ಕೀರ್ತನಾ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗು, ಗಿಫ್ಟ್ ಕೊಡ್ಸು ಎಂದು ಪೀಡಿಸುತ್ತಿದ್ದಳಂತೆ. ಆಗ ವಿನಯ್ ನಾನೇ ಕಳ್ಳ ನಿನಗೇನೆ ಗಿಫ್ಟ್ ಕೊಡಿಸ್ಲಿ, ನಾನೊಬ್ಬ ರೌಡಿಶೀಟರ್ ಅಂತ ಕೀರ್ತನಾಳನ್ನ ಕಿಚಾಯಿಸುತ್ತಿದ್ದನಂತೆ. ನೀನ್ ರೌಡಿ ಆದ್ರು ನಿನ್ನನ್ನೆ ಲವ್ ಮಾಡಿದ್ದೀನಿ ನಿನ್ ಜೊತೆ ಜೈಲಿಗೆ ಬೇಕಾದ್ರು ಬರ್ತಿನಿ ಅಂತ ಕೀರ್ತನ ವಿನಯ್ ಬಳಿ ತನ್ನ ಪ್ರೀತಿ ತೋರ್ಪಡಿಸುತ್ತಿದ್ದಳಂತೆ. ಅದರಂತೆ ರೌಡಿಶೀಟರ್ ವಿನಯ್ ತನ್ನ ಲವರ್ ಕೀರ್ತನಾ ಜೊತೆ ಸೇರಿ ಕಳ್ಳತನಕ್ಕೆ ಮುಂದಾಗಿದ್ದಾರೆ. ಗಂಡ ಹೆಂಡತಿ ರೂಪದಲ್ಲಿ ಬಾಡಿಗೆ ಮನೆ ಕೇಳಲು ಹೋಗುವ ನೆಪದಲ್ಲಿ ಮನೆ ಕಳ್ಳತನಕ್ಕೆ ಮುಂದಾಗಿದ್ದಾರೆ.

ಮಾರುತಿನಗರದ ಕುಲಶೇಖರ್ ಎನ್ನುವವರ ಮನೆಗೆ ಬಾಡಿಗೆಗೆ ಕೇಳುವ ನೆಪದಲ್ಲಿ ತೆರಳಿದ್ರು ಮನೆ ಮಾಲೀಕನ ಮನೆಯಲ್ಲಿ ಬಾಡಿಗೆ ಮಾತಾಡುವ ನೆಪದಲ್ಲಿ ವಿನಯ್ ಮಾತಿಗಿಳಿತಿದ್ದ. ಈ ವೇಳೆ ಮಾಲೀಕರ ಮನೆ ತುಂಬಾ ಚೆನ್ನಾಗಿದೆ ಅಂತ ಮನೆ ನೋಡಲು ಕೀರ್ತನಾ ಮುಂದಾಗ್ತಿದ್ದಳು. ಆಗ ವಿನಯ್ ಮಾತಾಡಿಸುತ್ತ ಡೈವರ್ಟ್ ಮಾಡ್ತಿದ್ರೆ ಇತ್ತ ಕೈಗೆ ಸಿಕ್ಕ ವಸ್ತುಗಳನ್ನ ಕೀರ್ತನಾ ಎಗರಿಸ್ತಿದ್ದಳು. ಕಳೆದ ಅಕ್ಟೋಬರ್ 4 ರಂದು ಕುಲಶೇಖರ್ ಮನೆಯಲ್ಲಿ 1 ಮೊಬೈಲ್ 1 ಲ್ಯಾಪ್ ಟಾಪ್ ಹಾಗೂ 15 ಸಾವಿರ ಹಣ ಎಗರಿಸಿದ್ದಾರೆ. ಸದ್ಯ ಮನೆ ಮಾಲೀಕ ಕುಲಶೇಖರ್ ಕೊಟ್ಟ ದೂರಿನನ್ವಯ ಕಿಲಾಡಿ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಪ್ರಿಯತಮೆಯನ್ನು ಕರೆಸಿಕೊಳ್ಳಲು 10 ತಿಂಗಳ ಮಗುವನ್ನೇ ಕಿಡ್ನಾಪ್ ಮಾಡಿದ್ದ ಪಾಗಲ್ ಪ್ರೇಮಿ ಅರೆಸ್ಟ್

Read Full Article

Click on your DTH Provider to Add TV9 Kannada