ಐಟಿ ದಾಳಿ ಹಿನ್ನೆಲೆ ಸಿಎಂ ಕಚೇರಿ ಡ್ಯೂಟಿಯಿಂದ ಬಿಎಸ್‌ವೈ ಆಪ್ತ ಉಮೇಶ್​ಗೆ ಗೇಟ್​ ಪಾಸ್​ ನೀಡಿದ ಸಿಎಂ ಬೊಮ್ಮಾಯಿ

ಸಿಎಂ ಸೂಚನೆ ಮೇರೆಗೆ ಬಿಎಂಟಿಸಿ ಅನ್ಯಸೇವೆ ನಿಮಿತ್ತ ನಿಯೋಜನೆ ಆದೇಶ ವಾಪಸ್ ಪಡೆದಿದೆ. ಸಿಎಂ ಆಪ್ತ ಸಹಾಯಕನಾಗಿ ಸಿಎಂ ಕಚೇರಿಗೆ ಉಮೇಶ್ ನಿಯೋಜನೆಗೊಂಡಿದ್ದರು. ಆದ್ರೆ ಈಗ ಉಮೇಶ್ ಎಂ.ಆರ್. ಮಾತೃ ಇಲಾಖೆಗೆ ವಾಪಸ್ ಆಗಿದ್ದಾರೆ.

ಐಟಿ ದಾಳಿ ಹಿನ್ನೆಲೆ ಸಿಎಂ ಕಚೇರಿ ಡ್ಯೂಟಿಯಿಂದ ಬಿಎಸ್‌ವೈ ಆಪ್ತ ಉಮೇಶ್​ಗೆ ಗೇಟ್​ ಪಾಸ್​ ನೀಡಿದ ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ‌ ಮತ್ತು ಬಿ.ಎಸ್. ಯಡಿಯೂರಪ್ಪ ಆಪ್ತ ಉಮೇಶ್
Follow us
TV9 Web
| Updated By: ಆಯೇಷಾ ಬಾನು

Updated on:Oct 08, 2021 | 1:23 PM

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಆಪ್ತ ಉಮೇಶ್ ನಿವಾಸದ ಮೇಲೆ ನಿನ್ನೆ ಮುಂಜಾನೆ ನುಗ್ಗಿದ್ದ ಐಟಿ ಆಫಿಸರ್ಸ್ ತಡರಾತ್ರಿವರೆಗೂ ಶೋಧ ಕಾರ್ಯ ಮುಂದುವರಿಸಿದ್ದಾರೆ. ಮ್ಯಾರಥಾನ್ ತಲಾಶ್ ವೇಳೆ ಹಲವು ಮಹತ್ವದ ದಾಖಲೆಗಳನ್ನು ಸೀಜ್ ಮಾಡಿ ಕೊಂಡು ಹೋಗಿದ್ದಾರೆ. ಉಮೇಶ್ ಗಳಿಸಿರೋ ಆಸ್ತಿ ಹಾಗೂ ಟೆಂಡರ್ಗೆ ಸಂಬಂಧಪಟ್ಟ ಡಾಕ್ಯುಮೆಂಟ್ಗಳನ್ನ ವಶಪಡಿಸಿಕೊಂಡಿದ್ದಾರೆ. ಉಮೇಶ್ ಹಾಗೂ ಕುಟುಂಬಸ್ಥರು ಮನೆಯೊಳಗೇ ಲಾಕ್ ಆಗಿದ್ದು, ಎಲ್ಲರ ಮೊಬೈಲ್ ಸೀಜ್ ಮಾಡಲಾಗಿದೆ. ಉಮೇಶ್ ಮನೆಗೇ ಊಟ ತರಿಸಿಕೊಂಡ ಅಧಿಕಾರಿಗಳು ಮೆಗಾ ತಲಾಶ್ ಮುಂದುವರಿಸಿದ್ದಾರೆ. ಆದ್ರೆ ಈಗ ಮತ್ತೊಂದು ಬೆಳವಣಿಗೆಯಾಗಿ ಉಮೇಶ್ರ ಅನ್ಯ ಸೇವೆ ನಿಯೋಜನೆಯನ್ನು ಬಿಎಂಟಿಸಿ ವಾಪಸ್ ಪಡೆದಿದೆ.

ಐಟಿ ದಾಳಿ ಹಿನ್ನೆಲೆಯಲ್ಲಿ ಯಡಿಯೂರಪ್ಪ ಆಪ್ತ ಉಮೇಶ್ ಅನ್ಯ ಸೇವೆ ನಿಯೋಜನೆಯನ್ನು ಬಿಎಂಟಿಸಿ ವಾಪಸ್ ಪಡೆದಿದೆ. ಸಿಎಂ ಕಚೇರಿಯಿಂದ ಬಿಡುಗಡೆಗೊಳಿಸಲು ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ‌ ಸೂಚಿಸಿದ್ರು. ಹೀಗಾಗಿ ಸಿಎಂ ಸೂಚನೆ ಮೇರೆಗೆ ಬಿಎಂಟಿಸಿ ಅನ್ಯಸೇವೆ ನಿಮಿತ್ತ ನಿಯೋಜನೆ ಆದೇಶ ವಾಪಸ್ ಪಡೆದಿದೆ. ಸಿಎಂ ಆಪ್ತ ಸಹಾಯಕನಾಗಿ ಸಿಎಂ ಕಚೇರಿಗೆ ಉಮೇಶ್ ನಿಯೋಜನೆಗೊಂಡಿದ್ದರು. ಆದ್ರೆ ಈಗ ಉಮೇಶ್ ಎಂ.ಆರ್. ಮಾತೃ ಇಲಾಖೆಗೆ ವಾಪಸ್ ಆಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಆಯನೂರು ಮೂಲದ ಉಮೇಶ್, 2007ರಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಕಂ ಡ್ರೈವರ್ ಆಗಿದ್ದ. ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಡಿಪೋದಲ್ಲಿ ಕೆಲಸಕ್ಕಿದ್ದ. ಈ ಮಧ್ಯೆ ಬಿಎಸ್ವೈ ಜೊತೆ ಗುರುತಿಸಿಕೊಂಡು ಬಳಿಕ ಆಪ್ತನಾಗಿದ್ದಾನೆ. ಯಡಿಯೂರಪ್ಪಗೆ ಅತಿ ಆಪ್ತನಂತೆ ಇದ್ದ ಉಮೇಶ್, ಬಿಎಸ್ವೈ ವಿಪಕ್ಷ ನಾಯಕರಾಗಿದ್ದಾಗಲೂ ಪಿಎ ಆಗಿದ್ದ. ಬಿಎಸ್ವೈ ಸಿಎಂ ಆಗಿದ್ದಾಗಲೂ ಉಮೇಶನೇ ಪಿಎ ಆಗಿದ್ದ. ಯಡಿಯೂರಪ್ಪನವರ ವ್ಯವಹಾರಗಳನ್ನ ನೋಡಿಕೊಳ್ಳುತ್ತಿದ್ದ. ಯಾವಾಗಲೂ ಬಿಎಸ್ವೈ ಮನೆಯಲ್ಲೇ ಇರುತ್ತಿದ್ದ.

ಬಿಎಸ್ವೈ ಕುಟುಂಬಕ್ಕೇ ಪಿಎ ಕೇವಲ ಯಡಿಯೂರಪ್ಪಗೆ ಅಷ್ಟೇ ಅಲ್ಲ, ಬಿಎಸ್ವೈ ಪುತ್ರ ಸಂಸದ ರಾಘವೇಂದ್ರಗೂ ಉಮೇಶ್ ಪಿಎ ಆಗಿದ್ದ. ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರಗೂ ಉಮೇಶನೇ ಪಿಎ ಆಗಿದ್ದ. ರಾಘವೇಂದ್ರ ಬೆಂಗಳೂರಿಗೆ ಬಂದಾಗ ಅವರ ಕೆಲಸ ನೋಡಿಕೊಳ್ತಿದ್ದ. ಇನ್ನು ಸಿಎಂ ಸಚಿವಾಲಯದ ಆಪ್ತಸಹಾಯಕನಾಗಿಯೂ ಮುಂದುವರಿದಿದ್ದ ಉಮೇಶ್. ಆದ್ರೆ ಬೊಮ್ಮಾಯಿ ಜೊತೆಗೆ ಉಮೇಶ್ ಕೆಲಸ ಮಾಡ್ತಿರಲಿಲ್ಲ.

ಎರಡೇ ವರ್ಷದಲ್ಲಿ ಉಮೇಶ್ ಆದಾಯ ಶೇ. 300ರಷ್ಟು ಏರಿಕೆ? ಉಮೇಶ್ ಆದಾಯದಲ್ಲಿ ದಿಢೀರ್ ಏರಿಕೆ ಕಂಡು ಐಟಿ ಅಧಿಕಾರಿಗಳೇ ಶಾಕ್​ಗೆ ಒಳಗಾಗಿದ್ದಾರೆ. ಕೇವಲ 2 ವರ್ಷದಲ್ಲಿ ಉಮೇಶ್ ಆದಾಯ ಶೇಕಡಾ 300ರಷ್ಟು ಏರಿಕೆಯಾಗಿದೆ ಅಂತಾ ಹೇಳಲಾಗ್ತಿದೆ. ಕಾವೇರಿ ನೀರಾವರಿ ನಿಗಮ ಟೆಂಡರ್ನಲ್ಲಿ ಗೋಲ್ಮಾಲ್ ಆರೋಪ ಉಮೇಶ್ ಮೇಲಿದೆ. ಕೃಷ್ಣ ಭಾಗ್ಯ ಜಲ ನಿಗಮ ಟೆಂಡರ್ನಲ್ಲೂ ಭ್ರಷ್ಟಾಚಾರ ನಡೆಸಿರೋ ಆರೋಪವಿದೆ. ಯಾಕಂದ್ರೆ ಬಿಡುಗಡೆ ಮಾಡಿರುವ ಹಣಕ್ಕೂ ವರ್ಕ್ ಅರ್ಡರ್ಗೂ ವ್ಯತ್ಯಾಸವಿದೆ. ಎರಡೂ ಯೋಜನೆ ಪೂರ್ಣವಾದ ಬಳಿಕ ದಾಖಲೆಗಳಲ್ಲಿ ವ್ಯತ್ಯಾಸವಿದೆ. ಹೀಗಾಗಿ ಉಮೇಶ್ ಮನೆ ಮೇಲೆ ಐಟಿ ದಾಳಿ ನಡೆಸಿರೋದಾಗಿ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ರಾಹುಲ್ ಎಂಟರ್​ಪ್ರೈಸಸ್, ಉಮೇಶ್ ಮನೆ ಮೇಲಿನ ಐಟಿ ದಾಳಿ ಅಂತ್ಯ; ಹಲವು ಕಡತಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು

Published On - 8:35 am, Fri, 8 October 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ