ಆನ್ಲೈನ್ ಗೇಮ್ ಬ್ಯಾನ್: ಅನ್ನಪೂರ್ಣೇಶ್ವರಿ ನಗರದಲ್ಲಿ ಡ್ರೀಮ್ 11 ಆನ್ಲೈನ್ ಗೇಮ್ ಆ್ಯಪ್ ವಿರುದ್ಧ ಎಫ್ಐಆರ್
ರಾಜ್ಯ ಸರ್ಕಾರ ಕೂಡ ಆನ್ ಲೈನ್ ಗೇಮ್ ಬ್ಯಾನ್ಗೆ ಮುಂದಾಗಿತ್ತು. ಆನ್ ಲೈನ್ನಲ್ಲಿ ಗೇಮ್ ಆಡಿ ಕೋಟಿ ಕೋಟಿ ಹಣ ಗೆಲ್ಲಬಹುದು ಎಂದು ಪ್ರಚೋದನೆ ಮಾಡುವ ಮೂಲಕ ಮೋಸ ಮಾಡಲಾಗುತ್ತಿತ್ತು.
ಬೆಂಗಳೂರು: ಡ್ರೀಮ್ 11 ಆನ್ಲೈನ್ ಗೇಮ್ ಆ್ಯಪ್ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಂಜುನಾಥ್ ಎಂಬುವವರ ದೂರು ಆಧಾರದ ಮೇಲೆ ಡ್ರೀಮ್ 11 ಆನ್ಲೈನ್ ಗೇಮ್ ಆ್ಯಪ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಾಜ್ಯ ಸರ್ಕಾರ ಕೂಡ ಆನ್ ಲೈನ್ ಗೇಮ್ ಬ್ಯಾನ್ಗೆ ಮುಂದಾಗಿತ್ತು. ಆನ್ ಲೈನ್ನಲ್ಲಿ ಗೇಮ್ ಆಡಿ ಕೋಟಿ ಕೋಟಿ ಹಣ ಗೆಲ್ಲಬಹುದು ಎಂದು ಪ್ರಚೋದನೆ ಮಾಡುವ ಮೂಲಕ ಮೋಸ ಮಾಡಲಾಗುತ್ತಿತ್ತು. ಡ್ರೀಮ್11 ಕಂಪನಿ ಸಂಸ್ಥಾಪಕರು & ನಿರ್ದೇಶಕರು ಆಗಿರುವ ಭವಿತ್ ಸೇತ್ ಹಾಗೂ ಹರೀಶ್ ಜೈನ್ ಎಂಬ ಇಬ್ಬರು ಜನರಿಗೆ ಆನ್ಲೈನ್ನಲ್ಲಿ ಗೇಮ್ ಆಡಿ ಹಣ ಮಾಡಬಹುದು ಎಂದು ಪ್ರಚೋದನೆ ಮಾಡುತ್ತಿದ್ದರು. ಈ ರೀತಿ ಆಸೆ ತೋರಿಸಿ ಹಣ ಮಾಡುತ್ತಿದ್ದರು. ಹಲವರು ಗೆದ್ದಿದ್ದಾರೆ ನೀವು ಕೂಡ ಗೆದ್ದು ಹಣ ಮಾಡಬಹುದು. ಶ್ರೀಮಂತರಾಗಬಹುದು ಎಂದು ಸುಳ್ಳು ಹೇಳಿ ಜನರನ್ನು ಯಾಮಾರಿಸುತ್ತಿದ್ದರು. ಸದ್ಯ ಮಂಜುನಾಥ್ ಎಂಬುವವರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭವಿತ್ ಸೇಟ್ ಹಾಗೂ ಹರೀಶ್ ಜೈನ್ ವಿರುದ್ಧ ದೂರು ದಾಖಲಾಗಿದೆ. ಕರ್ನಾಟಕ ಪೊಲೀಸ್ ಆ್ಯಕ್ಟ್ 2021 ಪ್ರಕಾರ ಕಾನೂನು ಬಾಹಿರ ಹಾಗೂ ಸಾವಿರಾರು ಜನರ ಹಣವನ್ನ ರಿಸ್ಕ್ ಗೆ ಇಟ್ಟು ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿಕೊಂಡು ಅನ್ನಪೂರ್ಣೇಶ್ವರಿ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಮೊಟ್ಟೆ ದಿನ: ಮೈಸೂರಿನಲ್ಲಿ ಉಚಿತವಾಗಿ ಒಂದು ಸಾವಿರ ಬೇಯಿಸಿದ ಮೊಟ್ಟೆ ವಿತರಣೆ