ಐಪಿಎಲ್-2020 ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕು ಡ್ರೀಮ್11 ಮಡಿಲಿಗೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಪ್ರಸಕ್ತ ಸಾಲಿನ ಐಪಿಎಲ್-2020 ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು ಕಾಲ್ಪನಿಕ ಕ್ರಿಕೆಟ್ ಲೀಗ್ ಌಪ್​ಗಳಲ್ಲಿ ಮುಂಚೂಣಿಯಲ್ಲಿರುವ ಡ್ರೀಮ್11ಗೆ ವಹಿಸಿದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಇಂದು ಹೇಳಿದರು. ಈಗಾಗಲೇ, ಬಿಸಿಸಿಐನ ಪಾಲುದಾರನಾಗಿರುವ ಡ್ರೀಮ್11 ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು, ರೇಸ್​ನಲ್ಲಿದ್ದ ಟಾಟಾ ಸನ್ಸ್ ಹಾಗೂ ಶೈಕ್ಷಣಿಕ ರಂಗದ ಪ್ಲಾಟ್​ಫಾರಂಗಳಾದ ಬೈಜೂಸ್ ಮತ್ತು ಅನ್​ಅಕಾಡೆಮಿ ಸಂಸ್ಥೆಗಳನ್ನು ಬಿಡ್​ನಲ್ಲಿ ಹಿಂದಿಕ್ಕಿ ತನ್ನದಾಗಿಸಿಕೊಂಡಿತು. ಮೂಲಗಳ ಪ್ರಕಾರ, ಡ್ರೀಮ್11, ರೂ. 250 ಕೋಟಿಗಳಿಗೆ ಬಿಡ್ ಸಲ್ಲಿಸಿದರೆ, ಟಾಟಾ […]

ಐಪಿಎಲ್-2020 ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕು ಡ್ರೀಮ್11 ಮಡಿಲಿಗೆ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 18, 2020 | 4:20 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಪ್ರಸಕ್ತ ಸಾಲಿನ ಐಪಿಎಲ್-2020 ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು ಕಾಲ್ಪನಿಕ ಕ್ರಿಕೆಟ್ ಲೀಗ್ ಌಪ್​ಗಳಲ್ಲಿ ಮುಂಚೂಣಿಯಲ್ಲಿರುವ ಡ್ರೀಮ್11ಗೆ ವಹಿಸಿದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಇಂದು ಹೇಳಿದರು.

ಈಗಾಗಲೇ, ಬಿಸಿಸಿಐನ ಪಾಲುದಾರನಾಗಿರುವ ಡ್ರೀಮ್11 ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು, ರೇಸ್​ನಲ್ಲಿದ್ದ ಟಾಟಾ ಸನ್ಸ್ ಹಾಗೂ ಶೈಕ್ಷಣಿಕ ರಂಗದ ಪ್ಲಾಟ್​ಫಾರಂಗಳಾದ ಬೈಜೂಸ್ ಮತ್ತು ಅನ್​ಅಕಾಡೆಮಿ ಸಂಸ್ಥೆಗಳನ್ನು ಬಿಡ್​ನಲ್ಲಿ ಹಿಂದಿಕ್ಕಿ ತನ್ನದಾಗಿಸಿಕೊಂಡಿತು.

ಮೂಲಗಳ ಪ್ರಕಾರ, ಡ್ರೀಮ್11, ರೂ. 250 ಕೋಟಿಗಳಿಗೆ ಬಿಡ್ ಸಲ್ಲಿಸಿದರೆ, ಟಾಟಾ ಸನ್ಸ್ ರೂ 180 ಕೋಟಿ, ಬೈಜೂಸ್ 125 ಕೋಟಿ ಮತ್ತು ಅನ್​ಅಕಾಡೆಮಿ ರೂ 210 ಕೋಟಿಗಳಿಗೆ ಬಿಡ್​ಗಳನ್ನು ಸಲ್ಲಿಸಿದ್ದವು. ಕ್ರಿಕೆಟ್ ಮಂಡಳಿಯ ಆಂತರಿಕ ಮೂಲಗಳು ತಿಳಿಸಿರುವಂತೆ, ಆರ್ಥಿಕವಾಗಿ ಸಧೃಡವಾಗಿರುವ ಸಂಸ್ಥೆಯನ್ನು ಆಯ್ಕೆ ಮಾಡುವುದಕ್ಕೆ ಒತ್ತು ನೀಡಲಾಯಿತು.

ಭಾರತ ಮತ್ತು ಚೀನಾಗಳ ಮಧ್ಯೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ, ಚೀನಾ ಮೂಲದ ವಿವೊ ಕಂಪನಿಯು ಪ್ರಾಯೋಜಕತ್ವದಿಂದ ಹಿಂದೆ ಸರಿದ ಕಾರಣ ಐಪಿಎಲ್ 2020 ಶೀರ್ಷಿಕೆ ಪ್ರಾಯೋಜಕತ್ವ ಬೇರೆ ಸಂಸ್ಥೆಗೆ ವಹಿಸುವ ಅನಿವಾರ್ಯತೆ ಬಿಸಿಸಿಐಗೆ ಎದುರಾಗಿತ್ತು.

ಸೋಮವಾರದಂದು ಸುದ್ದಿಗಾರರೊಂದಿಗೆ ಮತಾಡಿದ್ದ ಪಟೇಲ್, ‘‘ವಿವೊ ಸಂಸ್ಥೆ ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದು ಮಂಡಳಿಗೆ ಸಮಸ್ಯೆಯೇನೂ ಅಲ್ಲ. ಅದಾಗಲೇ ಹಲವಾರು ಕಂಪನಿಗಳು ಇದಕ್ಕಾಗಿ ಮುಂದೆ ಬಂದಿವೆ. ಬಿಡ್​ನಲ್ಲಿ ಬಾಗವಹಿಸುವ ಕಂಪನಿ ಸ್ವದೇಶದ್ದಾಗಿರಲಿ ಅಥವಾ ವಿದೇಶಿ ಮೂಲದ್ದು, ಜಾಸ್ತಿ ಮೊತ್ತಕ್ಕೆ ಬಿಡ್ ಮಾಡುವ ಕಂಪನಿಗೆ ಶೀರ್ಷಿಕೆ ಪ್ರಯೋಜಕತ್ವದ ಹಕ್ಕು ನೀಡಲಾಗುತ್ತದೆ. ಈ ಪ್ರಕ್ರಿಯೆ ಆಗಸ್ಟ18ರೊಳಗಾಗಿ ಅಂತಿಮಗೊಳ್ಳುತ್ತದೆ,’’ ಎಂದಿದ್ದರು.

ಈಗಾಗಲೇ ವರದಿಯಾಗಿರುವಂತೆ, ಐಪಿಎಲ್-2020 ಸೆಪ್ಟಂಬರ್ 19ರಿಂದ ನವೆಂಬರ್ 10 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್​ನ ಮೂರು ನಗರಗಳುಶಾರ್ಜಾ, ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿದೆ.