ಚೌಹಾನ್​ಗೆ ನೀಡಿದ ಶ್ರದ್ಧಾಂಜಲಿಯಲ್ಲಿ ಗವಾಸ್ಕರ್ ಆ ಅಹಿತಕರ ಘಟನೆ ಬಗ್ಗೆ ಹೇಳಿಲ್ಲ

ಭಾರತದ ಮಾಜಿ ಆರಂಭ ಆಟಗಾರ ಮತ್ತು ನಿವೃತ್ತಿಯ ನಂತರ ಕ್ರಿಕೆಟ್ ಆಡಳಿತ ಹಾಗೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಎರಡು ಬಾರಿ ಅಮ್ರೊಹ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ನಂತರ ಉತ್ತರ ಪ್ರದೇಶದ ನೌಗಾವನ್ ಸಾದತ್ ಕ್ಷೇತ್ರದಿಂದ ವಿಧಾನ ಸಭೆಗೆ ಆರಿಸಿಬಂದಿದ್ದೂ ಅಲ್ಲದೆ ಯೋಗಿ ಆದಿತ್ಯನಾಥ್ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿದ್ದಾಗಲೇ ಕೊವಿಡ್ ಸೋಂಕಿಗೆ ಬಲಿಯಾದ ಚೇತನ್ ಚೌಹಾನ್ ಈಗ ನೆನಪು ಮಾತ್ರ. ತಾನಾಡಿದ 40 ಟೆಸ್ಟ್​ಗಳಲ್ಲಿ ಒಂದೂ ಶತಕ ದಾಖಲಿಸದೆ, 2000 ರನ್ ಪೂರೈಸಿದ ಏಕೈಕ ಆರಂಭ […]

ಚೌಹಾನ್​ಗೆ ನೀಡಿದ ಶ್ರದ್ಧಾಂಜಲಿಯಲ್ಲಿ ಗವಾಸ್ಕರ್ ಆ ಅಹಿತಕರ ಘಟನೆ ಬಗ್ಗೆ ಹೇಳಿಲ್ಲ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Aug 24, 2020 | 4:38 PM

ಭಾರತದ ಮಾಜಿ ಆರಂಭ ಆಟಗಾರ ಮತ್ತು ನಿವೃತ್ತಿಯ ನಂತರ ಕ್ರಿಕೆಟ್ ಆಡಳಿತ ಹಾಗೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಎರಡು ಬಾರಿ ಅಮ್ರೊಹ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ನಂತರ ಉತ್ತರ ಪ್ರದೇಶದ ನೌಗಾವನ್ ಸಾದತ್ ಕ್ಷೇತ್ರದಿಂದ ವಿಧಾನ ಸಭೆಗೆ ಆರಿಸಿಬಂದಿದ್ದೂ ಅಲ್ಲದೆ ಯೋಗಿ ಆದಿತ್ಯನಾಥ್ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿದ್ದಾಗಲೇ ಕೊವಿಡ್ ಸೋಂಕಿಗೆ ಬಲಿಯಾದ ಚೇತನ್ ಚೌಹಾನ್ ಈಗ ನೆನಪು ಮಾತ್ರ.

ತಾನಾಡಿದ 40 ಟೆಸ್ಟ್​ಗಳಲ್ಲಿ ಒಂದೂ ಶತಕ ದಾಖಲಿಸದೆ, 2000 ರನ್ ಪೂರೈಸಿದ ಏಕೈಕ ಆರಂಭ ಆಟಗಾರನೆಂಬ ಅಷ್ಟೇನು ಖುಷಿ ನೀಡದ ದಾಖಲೆಯಂದಿಗೆ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದ ಚೌಹಾನ್, ತಮ್ಮ ಕರೀಯರ್​ನಲ್ಲಿ ವಿಶ್ವದ ಶ್ರೇಷ್ಠ ಓಪನರ್​ಗಳಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ಅವರೊಂದಿಗಿನ ಕೆಲವು ಅದ್ಭುತ ಜೊತೆಗಾರಿಕೆಗಳಿಗಾಗಿ ಜಾಸ್ತಿ ಜನಪ್ರಿಯರು. ಚೌಹಾನ್​ಗೆ ಶ್ರದ್ಧಾಂಜಲಿ ಅರ್ಪಿಸುತ್ತಾ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಗವಾಸ್ಕರ್ ಒಂದು ಲೇಖನವನ್ನು ಸೋಮವಾರ ಬರೆದಿದ್ದಾರೆ.

ಅವರೊಂದಿಗಿನ ಕೆಲವು ಸ್ಮರಣೀಯ ಜೊತೆಯಾಟಗಳನ್ನು ಮೆಲಕು ಹಾಕಿರುವ ಗವಾಸ್ಕರ್, ತನ್ನಿಂದಾಗೇ ಚೌಹಾನ್ ಎರಡು ಬಾರಿ ಶತಕ ಗಳಿಸುವುದನ್ನು ತಪ್ಪಿಸಿಕೊಂಡರು ಅಂತ ಹೇಳಿದ್ದಾರೆ. ಆ ಎರಡು ಸಂದರ್ಭಗಳ ಕ್ಲುಪ್ತ ವಿವರಣೆಯನ್ನು ಸಹ ಸನ್ನಿ ನೀಡಿದ್ದಾರೆ.

ಟೀಮು ಗೆಲ್ಲುವ ಹಂತದಲ್ಲಿದ್ದಾಗ, ಬ್ಯಾಟ್ಸ್​ಮನ್​ನೊಬ್ಬ ಸೆಂಚುರಿ ಬಾರಿಸುವ ಹತ್ತಿರಕ್ಕೆ ಬಂದಾಗ, ಇಲ್ಲವೇ ಕ್ರೀಸ್​ನಲ್ಲಿರುವ ಇಬ್ಬರು ಬ್ಯಾಟ್ಸ್​ಮನ್​ಗಳ ನಡುವೆ ಉತ್ತಮ ಜೊತೆಯಾಟ ನಡೆಯುತ್ತಿರುವಾಗ, ಡ್ರೆಸಿಂಗ್​ರೂಮಿನಿಂದ ಆಟ ವೀಕ್ಷಿಸುವ ತಂಡದ ಇತರ ಆಟಗಾರರು ತಾವು ಕುಳಿತ ಸ್ಥಳದಿಂದ ಮೇಲೇಳುವುದಿಲ್ಲ. ಅದು ಮೂಢ ನಂಬಿಕೆಯಾದರೂ, ಹಾಗೆ ಮಾಡಿದರೆ ಆಡುತ್ತಿರುವವರಿಗೆ, ತಂಡಕ್ಕೆ ಅಪಶಕುನವುಂಟಾಗುತ್ತದೆ ಅಂತ ಬಹಳಷ್ಟು ಆಟಗಾರರು ಭಾವಿಸಿತ್ತಾರೆ. ಗವಾಸ್ಕರ್ ಕೂಡ ಹಾಗೆ ನಂಬಿದವರು.

1981ರ ಆಸ್ಟ್ರೇಲಿಯ ಪ್ರವಾಸದ ಎರಡನೇ ಟೆಸ್ಟ್ (ಅಡಿಲೇಡ್ ಓವಲ್) ಪಂದ್ಯದಲ್ಲಿ ಚೌಹಾನ್ ಶತಕ ಬಾರಿಸುವ ತೀರ ಹತ್ತಿರಕ್ಕೆ ಬಂದಿದ್ದನ್ನು ಡ್ರೆಸಿಂಗ್​ರೂಮಿನಲ್ಲಿ ಕೂತು ತದೇಕಚಿತ್ತದಿಂದ ನೋಡುತ್ತಿದ್ದ ಗವಾಸ್ಕರ್ ಯಾರೋ ಕರೆದ ಕಾರಣ ಸ್ಥಳಬಿಟ್ಟು ಎದ್ದರಂತೆ. ಅದಾದ ಸ್ವಲ್ಪ ಹೊತ್ತಿಗೆ 97 ರನ್ ಗಳಿಸಿದ್ದ ಚೌಹಾನ್ ಡೆನಿಸ್ ಲಿಲ್ಲಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್​ಗೆ ಮರಳಿದರೆಂದು ಗವಾಸ್ಕರ್ ಬರೆಯುತ್ತಾರೆ. ಅವರು ಔಟಾಗಿದ್ದಕ್ಕೆ ತಾನೇ ಕಾರಣನಾದೆ ಅಂತ ದೂಷಿಸಿಕೊಳ್ಳುತ್ತಾರೆ. ಗಮನಿಸಬೇಕಾದ ಸಂಗತಿಯೆಂದರೆ, ಚೌಹಾನ್ ಬದುಕಿದ್ದಾ ಸನ್ನಿ ಈ ವಿಷಯವನ್ನು ಯಾವತ್ತೂ ಹೇಳಲಿಲ್ಲ.

ಮತ್ತೊಂದು ಸಂದರ್ಭ ಕೂಡ ಅದೇ ಸರಣಿಯ ಮೂರನೇ ಟೆಸ್ಟ್​ನಲ್ಲಿ ನಡೆಯಿತೆಂದು ಗವಾಸ್ಕರ್ ಬರೆಯುತ್ತಾರೆ. ಮೆಲ್ಬರ್ನ್ ನಲ್ಲಿ ನಡೆದ ಆ ಪಂದ್ಯದಲ್ಲಿ ಅವರಿಬ್ಬರ ನಡುವಿನ ಆರಂಭಿಕ ಜೊತೆಯಾಟದಲ್ಲಿ 165 ರನ್ ಬಂದಿದ್ದವು. ಆಗ 70 ರನ್ ಗಳಿಸಿ ಆಡುತ್ತಿದ್ದ ಗವಾಸ್ಕರ್ ಅವರನ್ನು ಅದೇ ಲಿಲ್ಲಿ ಎಲ್ ಬಿ ಡಬ್ಲ್ಯು ಬಲೆಗೆ ಕೆಡವಿದರು. ಅಂಪ್ಯೆರ್​ನ ತೀರ್ಪನ್ನು ಗವಾಸ್ಕರ್ ಒಪ್ಪಿಕೊಳ್ಳಲೇ ಇಲ್ಲ. ತಾನು ಔಟಾಗಿಲ್ಲ ಅಂತ ವಾದಿಸುತ್ತಾ ಪಿಚ್ ಮೇಲೆ ನಿಂತುಬಿಟ್ಟರು. ಚೌಹಾನ್ ಸಮಾಧಾನಪಡಿಸಿ ವಾಪಸ್ಸು ಕಳಿಸುವ ಪ್ರಯತ್ನ ಮಾಡಿದರಾದರೂ ತಂಡದ ನಾಯಕ ಕೂಡ ಆಗಿದ್ದ ಗವಾಸ್ಕರ್, ಅವರ ಮಾತು ಕೇಳದೆ, ಆಟ ಇಲ್ಲಿಗೆ ನಿಲ್ಲಿಸಿಬಿಡೋಣ ಎಂದು ಹೇಳಿ, ಚೌಹಾನ್​ರನ್ನು ಅಕ್ಷರಶಃ ಪೆವಿಲಿಯನ್​ನತ್ತ ತಳ್ಳಿಕೊಂಡು ಬಂದರು. ಚೌಹಾನ್​ಗೆ ನಾಯಕನ ಮಾತು ಪಾಲಿಸದೆ ವಿಧಿಯಿರಲಿಲ್ಲ.

ಆ ಸನ್ನಿವೇಶ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾಗಿ ಉಳಿದುಬಿಟ್ಟಿದೆ.

ಗವಾಸ್ಕರ್ ವರ್ತನೆ, ಭಾರತದ ಡ್ರೆಸಿಂಗ್​ರೂಮಲ್ಲಿ ಆತಂಕ ಸೃಷ್ಟಿಸಿತ್ತು. ತಂಡದ ಮ್ಯಾನೇಜರ್ ಹಾಗೂ ಇತರ ಆಟಗಾರರು ಕೂಡಲೇ ಮೈದಾನದ ಕಡೆ ಧಾವಿಸಿ, ಚೌಹಾನ್​ರನ್ನು ವಾಪಸ್ಸು ಕಳಿಸಿ ಆಟ ಮುಂದುವರೆಯುವಂತೆ ನೋಡಿಕೊಂಡರು. ಈ ಘಟನೆಯಿಂದ ಚೌಹಾನ್ ಏಕಾಗ್ರತೆ ಕಳೆದುಕೊಂಡು ಅವರ ವೈಯಕ್ತಿಕ ಸ್ಕೋರ್ 85 ಆಗಿದ್ದಾಗ ಔಟಾದರೆಂದು ಗವಾಸ್ಕರ್ ಬರೆದಿದ್ದಾರೆ ಮತ್ತು ಅದು ಕೂಡ ತನ್ನಿಂದಲೇ ಆಯಿತು ಎಂದಿದ್ದಾರೆ. ಅದರೆ, ತನ್ನಿಂದ ಸೃಷ್ಟಿಯಾದ ಆ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲ. 

ಈ ಪಂದ್ಯದಲ್ಲಿ ಮತ್ತೊಬ್ಬ ಶ್ರೇಷ್ಠ ಆಟಗಾರ ಜಿ ಆರ್ ವಿಶ್ವನಾಥ ಅವರ ಅಮೋಘ ಹಾಗೂ ಅಷ್ಟೇ ಕಲಾತ್ಮಕ ಶತಕ ಮತ್ತು ಕಪಿಲ್ ದೇವ್ ಅವರ ಉತ್ಕೃಷ್ಟ ಬೌಲಿಂಗ್ ನೆರವಿನಿಂದ ಭಾರತ ಗೆಲುವು ಸಾಧಿಸಿ ಸರಣಿಯನ್ನು ಸಮ ಮಾಡಿಕೊಂಡಿದ್ದು ಭಾರತೀಯರಿಗೆ ಆ ಅಹಿತಕರ ಸನ್ನಿವೇಶದ ನೆನಪು ಮಾಸುವಂತೆ ಮಾಡಿತಾದರೂ, ವೀದೇಶಿ ಮಾಧ್ಯಮಗಳು ತೀವ್ರವಾಗಿ ಖಂಡಿಸಿದವು.

ಗವಾಸ್ಕರ್ ಮಹಾನ್ ಆಟಗಾರನಾಗಿದ್ದರೂ ಸ್ವಾರ್ಥಿಯಾಗಿದ್ದರೆಂದು ಅನೇಕ ಆರೋಪಗಳಿವೆ. ಮತ್ಯಾವಾಗಲಾದರೂ ಈ ವಿಷಯವನ್ನು ಚರ್ಚಿಸುವ ಬಿಡಿ.

Published On - 8:21 pm, Mon, 17 August 20

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ