ಮೊಟ್ಟೆ ದಿನ: ಮೈಸೂರಿನಲ್ಲಿ ಉಚಿತವಾಗಿ ಒಂದು ಸಾವಿರ ಬೇಯಿಸಿದ ಮೊಟ್ಟೆ ವಿತರಣೆ

ಎನ್ಇಸಿಸಿ ವತಿಯಿಂದ ಮೊಟ್ಟೆ ದಿನದ ಅಂಗವಾಗಿ ಒಂದು ಸಾವಿರ ಮೊಟ್ಟೆಯನ್ನು ಬೇಯಿಸಿ ಉಚಿತವಾಗಿ ವಿತರಿಸಲಾಯಿತು ಎಂದು ಎನ್‌ಇಸಿಸಿ ಅಧ್ಯಕ್ಷರಾದ ಸತೀಶ್ ಬಾಬು ತಿಳಿಸಿದ್ದಾರೆ.

ಮೊಟ್ಟೆ ದಿನ: ಮೈಸೂರಿನಲ್ಲಿ ಉಚಿತವಾಗಿ ಒಂದು ಸಾವಿರ ಬೇಯಿಸಿದ ಮೊಟ್ಟೆ ವಿತರಣೆ
ಮೈಸೂರಿನಲ್ಲಿ ಮೊಟ್ಟೆ ದಿನ ಆಚರಿಸಲಾಯಿತು


ಮೈಸೂರು: ಫೆಬ್ರವರಿ 14 ಬಂತೆಂದರೆ ಸಾಕು ಪ್ರೇಮಿಗಳಿಗೆ ಹಬ್ಬವೋ ಹಬ್ಬ. ಮಾರ್ಚ್ 8 ಮಹಿಳೆಯರ ದಿನ, ಇನ್ನು ಸ್ನೇಹಿತರ ದಿನ, ಅಮ್ಮಂದಿರ ದಿನ, ಈ ರೀತಿ ನಾನಾ ದಿನಗಳು ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮೊಟ್ಟೆ ದಿ‌ನ ಅಂತಾನೂ ಒಂದು ಇದೆ ಎಂದು ನಿಮಗೆ ಗೊತ್ತಾ ? ಏನು ಮೊಟ್ಟೆ ದಿನನಾ ಎಂದು ಹುಬ್ಬೇರಿಸುವವರು ಈ ವರದಿಯನ್ನೊಮ್ಮೆ ಓದಿ.

ಇಂದು (ಅಕ್ಟೋಬರ್ 8) ಮೈಸೂರಿನಲ್ಲಿ ಮೊಟ್ಟೆ ದಿನ ಆಚರಿಸಲಾಯಿತು. ಪ್ರತಿ ವರ್ಷ ಸೆಪ್ಟೆಂಬರ್ 2ನೇ ಶುಕ್ರವಾರ ಮೊಟ್ಟೆ ದಿನ ಆಚರಿಸಲಾಗುತ್ತದೆ. ಇವತ್ತು ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿ, ಮೊಟ್ಟೆ ದಿನ ಆಚರಿಸಲಾಯಿತು. ಎನ್ಇಸಿಸಿ ವತಿಯಿಂದ ಮೊಟ್ಟೆ ದಿನದ ಅಂಗವಾಗಿ ಒಂದು ಸಾವಿರ ಮೊಟ್ಟೆಯನ್ನು ಬೇಯಿಸಿ ಉಚಿತವಾಗಿ ವಿತರಿಸಲಾಯಿತು ಎಂದು ಎನ್‌ಇಸಿಸಿ ಅಧ್ಯಕ್ಷರಾದ ಸತೀಶ್ ಬಾಬು ತಿಳಿಸಿದ್ದಾರೆ.

ಬೆಳ್ಳಂಬೆಳಗ್ಗೆ ವಾಕ್ ಬಂದಿದ್ದ ಎಲ್ಲರಿಗೂ ಮೊಟ್ಟೆ ಜತೆಗೆ ಈರುಳ್ಳಿ, ಟೊಮೆಟೋ ವಿತರಿಸಲಾಯಿತು. ಉಚಿತವಾಗಿ ಸಿಕ್ಕ ಮೊಟ್ಟೆ ತಿಂದವರು ಸಂತೋಷಪಟ್ಟಿದ್ದಾರೆ. ಮೊಟ್ಟೆ ಆರೋಗ್ಯಕ್ಕೆ ಉತ್ತಮ ಪೌಷ್ಟಿಕಾಹಾರ. ಇದನ್ನು ಜನರಿಗೆ ತಿಳಿಸಲು ಮೊಟ್ಟೆ ದಿನ ಆಚರಿಸಲಾಯಿತು. ಈ ನಿಟ್ಟಿನಲ್ಲಿ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶದ ವಿವರಗಳ ಬ್ಯಾನರ್ ಸಹಾ ಹಾಕಲಾಗಿತ್ತು. ಒಟ್ಟಾರೆ ಮೊಟ್ಟೆ ದಿನ ಜನರ ಗಮನ‌ ಸೆಳೆಯುವಲ್ಲಿ ಯಶಸ್ವಿಯಾಯಿತು.

ವರದಿ: ರಾಮ್

ಇದನ್ನೂ ಓದಿ:
ಕೋಳಿಯ ಹೊಟ್ಟೆಯಲ್ಲಿ ಕಬ್ಬಿಣದ ಚೂರು ಹೋಗಬಹುದು, ಮೊಟ್ಟೆಯಲ್ಲಿ ಹೇಗೆ ಹೋಗಿರಲು ಸಾಧ್ಯ?

Boiled Eggs: ಬೇಯಿಸಿದ ಮೊಟ್ಟೆಗಳನ್ನು ಎಷ್ಟು ಗಂಟೆಗಳೊಳಗೆ ಸೇವಿಸಬೇಕು? ದೀರ್ಘಕಾಲದವರೆಗೆ ಇದನ್ನು ಶೇಖರಿಸಬಹುದೇ?

Read Full Article

Click on your DTH Provider to Add TV9 Kannada