ಬೆಂಗಳೂರಲ್ಲಿ ಬಿಬಿಎಂಪಿ ಎಡವಟ್ಟಿಗೆ 9 ವರ್ಷದ ಬಾಲಕ ಬಲಿ!

ಮಳೆಯಿಂದ ಪಾರ್ಕ್​ನ ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು. ಬಾಲಕ ಆಟವಾಡುವಾಗ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಮೃತ ಬಾಲಕನ ಕುಟುಂಬಕ್ಕೆ 50 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ.

ಬೆಂಗಳೂರಲ್ಲಿ ಬಿಬಿಎಂಪಿ ಎಡವಟ್ಟಿಗೆ 9 ವರ್ಷದ ಬಾಲಕ ಬಲಿ!
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಬಿಎಂಪಿ ಎಡವಟ್ಟಿನಿಂದ ಬೆಂಗಳೂರಿನಲ್ಲಿ ಒಂಬತ್ತು ವರ್ಷದ ಬಾಲಕ ಬಲಿಯಾಗಿದ್ದಾನೆ. ನಿರ್ವಹಣೆ ಇಲ್ಲದ ಪಾರ್ಕ್ನ ಹೊಂಡದಲ್ಲಿ ಬಿದ್ದು ಬಾಲಕ ಮೃತಪಟ್ಟಿದ್ದಾನೆ. ಆಟವಾಡುವ ವೇಳೆ ನೀರಿನ ಹೊಂಡದಲ್ಲಿ ಬಿದ್ದು ಪ್ರತಾಪ್ ಎಂಬ ಬಾಲಕ ಸಾವನ್ನಪ್ಪಿದ್ದು, ಮಲ್ಲಸಂದ್ರದ ಕೆಂಪೇಗೌಡ ಪಾರ್ಕ್​ನಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಬಾಲಕ ರುದ್ರಮುನಿ, ಕಾಂತಮಣಿ ದಂಪತಿ ಪುತ್ರ. ಮಳೆಯಿಂದ ಪಾರ್ಕ್​ನ ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು. ಬಾಲಕ ಆಟವಾಡುವಾಗ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ದಾಸರಹಳ್ಳಿ ಶಾಸಕ ಆರ್​ ಮಂಜುನಾಥ್ ಮೃತ ಬಾಲಕನ ಕುಟುಂಬಕ್ಕೆ 50 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ. ಜೊತೆಗೆ ಬಿಬಿಎಂಪಿ ವತಿಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಕಳೆದ ವರ್ಷ ಆಗಸ್ಟ್ 28 ರಂದು ಶಾಸಕ ಆರ್ ಮಂಜುನಾಥ್ ವಿರೋಧದ ನಡುವೆಯೂ ಸಂಸದ ಡಿವಿ ಸದಾನಂದ ಗೌಡ ಈ ಪಾರ್ಕ್​ನ ಉದ್ಘಾಟನೆ ಮಾಡಿದ್ದರು. ಇದೀಗ ಈ ಪಾರ್ಕ್‌ನಲ್ಲಿ 9 ವರ್ಷ ಬಾಲಕ ಆಟ ಆಡಲು ಹೋಗಿ ಪಕ್ಕದಲ್ಲೆ ಇದ್ದ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಕಳೆದ 20 ವರ್ಷಗಳ‌ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದ ದಂಪತಿಗಳು, ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಮಲ್ಲಸಂದ್ರ ವಾರ್ಡ್ 13ರಲ್ಲಿ ಸರ್ವೆ ನಂ 33ರಲ್ಲಿ ಸುಮಾರು 7 ಎಕರೆ ಭೂಮಿಯಲ್ಲಿ ನಿರ್ಮಾಣವಾಗಿದ್ದ ನಾಡ ಪ್ರಭು ಕೆಂಪಗೌಡ ಉದ್ಯಾನವನ ಅಂದಿನಿಂದಲೂ ನಿರ್ವಹಣೆ ಇಲ್ಲದೆ, ಸೂಕ್ತ ಭದ್ರತಾ ಸಿಬ್ಬಂದಿ‌ ಇಲ್ಲದೆ ಅವ್ಯವಸ್ಥೆಗಳ ಆಗರವಾಗಿತ್ತು. ಈಗ ಬಾಲಕನ ಸಾವಿಗೆ ಪಾರ್ಕ್ ನಿರ್ವಹಣೆ ಮಾಡದ ಬಿಬಿಎಂಪಿ ಅಧಿಕಾರಿಗಳೇ ಕಾರಣ ಎಂದು ಸ್ಥಳೀಯರು ಕಿಡಿ ಕಾರಿದ್ದಾರೆ.

ಮೂವರ ಬಂಧನ
ಮೈಸೂರು: ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮೂವರನ್ನು ಬಂಧಿಸಲಾಗಿದೆ. ಬನ್ನೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 59 ಗ್ರಾಂ ಚಿನ್ನಾಭರಣನ್ನು ವಶಕ್ಕೆ ಪಡೆದಿದ್ದಾರೆ. ಕೇತುಪುರ ಗ್ರಾಮದ ತಾಯಮ್ಮ ಮನೆಯಲ್ಲಿ ಕಳವು ನಡೆದಿತ್ತು. 36 ಗ್ರಾಂ ಸರ. 10 ಗ್ರಾಂ ಬ್ರಾಸ್ಲೈಟ್. 3 ಗ್ರಾಂ ಉಂಗುರ, 4 ಗ್ರಾಂ ಓಲೆ, 6 ಗ್ರಾಂ ಹ್ಯಾಂಗಿಂಗ್ ಸೇರಿ 59 ಗ್ರಾಂ ಚಿನ್ನ ಕಳವು ಮಾಡಿದ್ದರು. ಜೊತೆಗೆ 15 ಸಾವಿರ ನಗದು ಕಳ್ಳತನ ಮಾಡಿದ್ದರು. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ

ಮನೆಯಲ್ಲಿ ಮುರಿದ ಸಾಮಾನು ಇದ್ದರೆ ಆ ಮನೆಯಲ್ಲಿ ಕುಟುಂಬದವರ ಮನಸುಗಳೂ ಮುರಿದುಬೀಳುತ್ತವೆ, ಎಚ್ಚರಾ

ಕಲಬುರಗಿ: ಮತ್ತೆ ಲಘು ಭೂಕಂಪನ; ಆತಂಕದಲ್ಲಿ ಮನೆಯಿಂದ ಹೊರ ಬಂದು ಮಳೆಯಲ್ಲಿಯೇ ಕಾಲ ಕಳೆದ ಗ್ರಾಮಸ್ಥರು

Read Full Article

Click on your DTH Provider to Add TV9 Kannada