ಬೆಂಗಳೂರು: ಡ್ರಾಪ್ ಕೇಳುವ ನೆಪದಲ್ಲಿ ಮೊಬೈಲ್, ಹಣ ದರೋಡೆ; ಸಿಮ್ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ

TV9 Digital Desk

| Edited By: shivaprasad.hs

Updated on: Oct 09, 2021 | 7:32 AM

ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಹಣ ಹಾಗೂ ಮೊಬೈಲ್ ದರೋಡೆ ಮಾಡಿರುವ ಪ್ರಕರಣ ನಡೆದಿದೆ.

ಬೆಂಗಳೂರು: ಡ್ರಾಪ್ ಕೇಳುವ ನೆಪದಲ್ಲಿ ಮೊಬೈಲ್, ಹಣ ದರೋಡೆ; ಸಿಮ್ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ
ಸಾಂಕೇತಿಕ ಚಿತ್ರ
Follow us

ಬೆಂಗಳೂರು: ಡ್ರಾಪ್​ ಕೇಳುವ ನೆಪದಲ್ಲಿ ವ್ಯಕ್ತಿಗೆ ಚಾಕು ಇರಿದು ದರೋಡೆ ನಡೆಸಿರುವ ಪ್ರಕರಣ ನಡೆದಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಬಳಿ ಘಟನೆ ನಡೆದಿದ್ದು, ಶಿವಕುಮಾರ್ ಎಂಬುವವರಿಂದ​ ಮೊಬೈಲ್​, ಹಣವನ್ನು ಕಿತ್ತುಕೊಳ್ಳಲಾಗಿದೆ. ಈ ವೇಳೆ ಮೊಬೈಲ್​ನಲ್ಲಿರುವ ಸಿಮ್ ವಾಪಸ್ ಕೊಡಿ ಎಂದು ಕೇಳಿದ್ದಕ್ಕೆ ಗ್ಯಾಂಗ್ ಹಲ್ಲೆ ನಡೆಸಿದೆ.

ಗ್ಯಾಂಗ್​ನಲ್ಲಿ ಮೂವರಿದ್ದರು ಎನ್ನಲಾಗಿದ್ದು, ಶಿವಕುಮಾರ್ ಅವರು ಸಿಮ್ ಕೇಳಿದಾಗ ಹಲ್ಲೆ ನಡೆಸಿದ್ದಾರೆ. ಗಾಯಾಳುವನ್ನು ಟೋಲ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿವಕುಮಾರ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನೈಸ್ ರೋಡ್​ನಲ್ಲಿ ಪದೇ ಪದೇ ನಡೆಯುತ್ತಿದೆ ದರೋಡೆ ಪ್ರಕರಣ: ನಗರದ ನೈಸ್ ರಸ್ತೆಗಳಲ್ಲಿ ಪದೇ ಪದೇ ದರೋಡೆ ಪ್ರಕರಣಗಳು ವರದಿಯಾಗುತ್ತಿವೆ. ವಾಹನಗಳನ್ನು ಅಡ್ಡಗಟ್ಟಿ ದರೋಡೆ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪ್ರಸ್ತುತ ಶಿವಕುಮಾರ್ ಮೇಲಿನ ಹಲ್ಲೆ ಹಾಗೂ ದರೋಡೆ ಪ್ರಕರಣದಲ್ಲೂ, ಮೊಬೈಲ್ ಹಾಗೂ ಹಣ ತೆಗೆದುಕೊಂಡ ಗ್ಯಾಂಗ್, ಸಿಮ್ ವಾಪಸ್ ಕೊಡಿ ಎಂದು ಕೇಳಿದಾಗ ಹಲ್ಲೆ ನಡೆಸಿದೆ. ಪ್ರಸ್ತುತ ಆಸ್ಪತ್ರೆಗೆ ಪೊಲೀಸ್ ಸಿಬ್ಬಂದಿ ಆಗಮಿಸಿದ್ದಾರೆ. ಶಿವಕುಮಾರ್ ಕುಟುಂಬಸ್ಥರೂ ಆಸ್ಪತ್ರೆಗೆ ಆಗಮಿಸಿದ್ದಾರೆ.

ಇದನ್ನೂ ಓದಿ:

ಶಾರುಖ್​ ಮಗ ಆರ್ಯನ್​ ಖಾನ್​ ಜೈಲಿನಲ್ಲಿ ಈ ನಿಯಮ ಪಾಲಿಸಲೇಬೇಕು

Karnataka Dams Water Level: ಮಳೆಯಿಂದ ಬಹುತೇಕ ಡ್ಯಾಂಗಳು ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ತಾಜಾ ಸುದ್ದಿ

Related Stories

Click on your DTH Provider to Add TV9 Kannada