ಶಾರುಖ್ ಮಗ ಆರ್ಯನ್ ಖಾನ್ ಜೈಲಿನಲ್ಲಿ ಈ ನಿಯಮ ಪಾಲಿಸಲೇಬೇಕು
ಆರ್ಯನ್ ಖಾನ್ಗೆ ಜಾಮೀನು ನೀಡಬೇಕು ಎಂದು ಅವರ ಪರ ವಕೀಲ ಸತೀಶ್ ಮಾನೇಶಿಂಧೆ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಇದಕ್ಕೆ ಎನ್ಸಿಬಿ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು.
ಶಾರುಖ್ ಖಾನ್ ಮಗ ಆರ್ಯನ್ ಖಾನ್ಗೆ ಸಂಕಷ್ಟ ಹೆಚ್ಚುತ್ತಲೇ ಇದೆ. ಮುಂಬೈ ಕಿಲ್ಲಾ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಮತ್ತೊಂದೆಡೆ ಅವರಿಗೆ ಜಾಮೀನು ಸಿಗುತ್ತಿಲ್ಲ. ಈ ಕಾರಣಕ್ಕೆ ಆರ್ಯನ್ ಖಾನ್ ಅವರನ್ನು ಆರ್ಥರ್ ರೋಡ್ ಜೈಲಿಗೆ ಕಳುಹಿಸಲಾಗಿದೆ. ಅವರು ಸ್ಟಾರ್ ಕಿಡ್ ಆಗಿದ್ದರೂ ಜೈಲಿನಲ್ಲಿ ಸಾಮಾನ್ಯರಂತೆ ನೋಡಿಕೊಳ್ಳಲಾಗುತ್ತಿದೆ.
ಆರ್ಯನ್ ಖಾನ್ಗೆ ಜಾಮೀನು ನೀಡಬೇಕು ಎಂದು ಅವರ ಪರ ವಕೀಲ ಸತೀಶ್ ಮಾನೇಶಿಂಧೆ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಇದಕ್ಕೆ ಎನ್ಸಿಬಿ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ ಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿತು. ಈ ಕಾರಣಕ್ಕೆ ಆರ್ಯನ್ ಅವರು ಜೈಲಿಗೆ ತೆರಳೋದು ಅನಿವಾರ್ಯ ಆಗಿದೆ.
ಆರ್ಯನ್ ಮತ್ತು ಇತರ ಆರೋಪಿಗಳನ್ನು ಆರ್ಥರ್ ರೋಡ್ ಜೈಲಿಗೆ ಕಳುಹಿಸಲಾಗಿದೆ. ಜೈಲಿನ ನಿಯಮದ ಪ್ರಕಾರ 2-5 ದಿನಗಳ ಕಾಲ ಇಲ್ಲಿನ ಸೆಲ್ನಲ್ಲಿ ಕ್ವಾರಂಟೈನ್ ಆಗಬೇಕು. ಕೊವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರೂ ಕ್ವಾರಂಟೈನ್ ಆಗುವುದು ಕಡ್ಡಾಯವಾಗಿದೆ. ಜೈಲಿನಲ್ಲಿ ಇವರಿಗೆ ಸಾಮಾನ್ಯ ಅಡುಗೆಯನ್ನೇ ನೀಡಲಾಗುತ್ತದೆ. ಇನ್ನು, ನಿದ್ರಿಸೋಕೆ ಸಾಮಾನ್ಯ ವ್ಯವಸ್ಥೆ ಇರಲಿದೆ.
ಶಾರುಖ್ ಖಾನ್ ಹೆಂಡತಿ ಗೌರಿ ಖಾನ್ಗೆ ಇಂದು (ಅಕ್ಟೋಬರ್ 8) ಜನ್ಮದಿನ. ಆದರೆ, ಅವರಿಗೆ ಈ ವರ್ಷ ಜನ್ಮದಿನ ಆಚರಿಸಿಕೊಳ್ಳಲು ಆಸಕ್ತಿ ಉಳಿದಿಲ್ಲ. ಮಗ ನ್ಯಾಯಾಂಗ ಬಂಧನದಲ್ಲಿರುವುದರಿಂದ ಗೌರಿ ಬರ್ತ್ಡೇ ಆಚರಿಸಿಕೊಳ್ಳುತ್ತಿಲ್ಲ. ಅವರು ಈ ಜನ್ಮದಿನವನ್ನು ದುಖಃದಲ್ಲೇ ಕಳೆಯುವಂತಾಗಿದೆ. ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಆರ್ಯನ್ ಕೂಡ ಇದ್ದರು. ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್ಸಿಬಿ) ಆರ್ಯನ್ ಅವರನ್ನು ವಶಕ್ಕೆ ಪಡೆದಿತ್ತು. ಈಗ ಆರ್ಯನ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದನ್ನೂ ಓದಿ: ಗೌರಿ ಖಾನ್ ಬರ್ತ್ಡೇ; ಮಗ ಆರ್ಯನ್ ಇಲ್ಲದೆ ಜನ್ಮದಿನಾಚರಣೆ ಮಾಡಿಕೊಳ್ಳಲ್ಲ ಎಂದ ತಾಯಿ