Aryan Khan: ಆರ್ಯನ್​ ಜಾಮೀನು ಅರ್ಜಿ ವಜಾ ಮಾಡಿದ ಮುಂಬೈ ಕೋರ್ಟ್​

Shah Rukh Khan: ನ್ಯಾಯಾಂಗ ಬಂಧನ ವಿಧಿಸಿದ್ದ ಕಾರಣ, ಎನ್​ಸಿಬಿ ಅಧಿಕಾರಿಗಳು ಆರ್ಯನ್ ಖಾನ್ ಇತರ ಆರೋಪಿಗಳನ್ನು ಮೆಡಿಕಲ್ ಟೆಸ್ಟ್​ಗೆ ಒಳಪಡಿಸಿ ಆರ್ಥರ್ ಜೈಲಿಗೆ ಕರೆದೊಯ್ದಿದ್ದರು. ಇದೀಗ ನ್ಯಾಯಾಲಯದ ಆದೇಶದ ಅನ್ವಯ ಆರ್ಯನ್​ಗೆ ಜಾಮೀನು ಸಿಕ್ಕಿಲ್ಲ.  

Aryan Khan: ಆರ್ಯನ್​ ಜಾಮೀನು ಅರ್ಜಿ ವಜಾ ಮಾಡಿದ ಮುಂಬೈ ಕೋರ್ಟ್​
ಆರ್ಯನ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 08, 2021 | 5:38 PM

ಬಾಲಿವುಡ್​ನ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ಇಂದು (ಅಕ್ಟೋಬರ್ 08) ಮುಂಬೈನ ನ್ಯಾಯಾಲಯದಲ್ಲಿ ನಡೆಯಿತು. 23 ವರ್ಷದ ಆರ್ಯನ್ ಪರ ಸತೀಶ್ ಮಾನೆಶಿಂಧೆ ವಾದ ಮಂಡಿಸಿದರು. ಈ ಕುರಿತು ತೀರ್ಪು ನೀಡಿರುವ ನ್ಯಾಯಾಲಯವು ಆರ್ಯನ್​ಗೇ ಜಾಮೀನು ನೀಡಿಲ್ಲ. 

ಗುರುವಾರ ನಡೆದಿದ್ದ ವಿಚಾರಣೆಯಲ್ಲಿ ನ್ಯಾಯಾಲಯವು ಆರ್ಯನ್ ಖಾನ್​ಗೆ ಎನ್​ಸಿಬಿ ಕಸ್ಟಡಿಯನ್ನು ವಿಸ್ತರಿಸಲು ನಿರಾಕರಿಸಿತ್ತು. ಈಗಾಗಲೇ ಅಗತ್ಯವಿದ್ದಷ್ಟು ಸಮಯವನ್ನು ಎನ್​ಸಿಬಿಗೆ ನೀಡಲಾಗಿದೆ ಎಂದು ಹೆಚ್ಚುವರಿ ಮೆಟ್ರೋಪಾಲಿಟನ್ ನ್ಯಾಯಾಧೀಶರಾದ ಆರ್​.ಎಂ.ನಿರ್ಲೇಕರ್ ತಿಳಿಸಿದ್ದರು. ನಂತರ ಅವರು ಆರ್ಯನ್ ಖಾನ್ ಸೇರಿದಂತೆ 8 ಜನರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರು. ಈಗ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿ ಊರ್ಜಿತವಲ್ಲವೆಂದು ಕೋರ್ಟ್​ ಅಭಿಪ್ರಾಯ ಪಟ್ಟಿದೆ. ಪ್ರಕರಣದ 8 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಿದೆ. ಸೆಷನ್ ಕೋರ್ಟ್ ಮೊರೆ ಹೋಗಲು ಆರ್ಯನ್ ಖಾನ್ ಪರ ವಕೀಲರು ಈಗ ಚಿಂತನೆ ನಡೆಸಿದ್ದಾರೆ.  ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಕೈಲುಪುತ್ತಿದ್ದಂತೆ ಮೇಲ್ಮನವಿ ಸಲ್ಲಿಸಲು ಪ್ಲಾನ್ ರೂಪಿಸಲಾಗಿದೆ.

ನ್ಯಾಯಾಂಗ ಬಂಧನ ವಿಧಿಸಿದ್ದ ಕಾರಣ, ಎನ್​ಸಿಬಿ ಅಧಿಕಾರಿಗಳು ಆರ್ಯನ್ ಖಾನ್ ಇತರ ಆರೋಪಿಗಳನ್ನು ಮೆಡಿಕಲ್ ಟೆಸ್ಟ್​ಗೆ ಒಳಪಡಿಸಿ ಆರ್ಥರ್ ಜೈಲಿಗೆ ಕರೆದೊಯ್ದಿದ್ದರು. ಇದೀಗ ನ್ಯಾಯಾಲಯದ ಆದೇಶದ ಅನ್ವಯ ಆರ್ಯನ್​ಗೆ ಜಾಮೀನು ಸಿಕ್ಕಿಲ್ಲ. ಹೀಗಾಗಿ, ಅವರು ಜೈಲಿನಲ್ಲೇ ಇರುವುದು ಅನಿವಾರ್ಯ ಆಗಿದೆ.

ಆರ್ಯನ್ ಖಾನ್​ ಸೇರಿ ಎಲ್ಲಾ ಆರೋಪಿಗಳು ಆರ್ಥರ್ ರೋಡ್​​​ ಜೈಲಿನಲ್ಲಿ 5 ದಿನಗಳ ಕಾಲ ಕ್ವಾರಂಟೈನ್ ಆಗಬೇಕಿದೆ. ಬ್ಯಾರಕ್​ ನಂಬರ್-1ರಲ್ಲಿ ಆರ್ಯನ್ ಹಾಗೂ ಮತ್ತಿತರರು ಇದ್ದಾರೆ.

ಇದನ್ನೂ ಓದಿ:

‘ಪ್ರೀತಿಯ ಆರ್ಯನ್​ ಖಾನ್​..’: ಶಾರುಖ್​ ಪುತ್ರನಿಗೆ ಹೃತಿಕ್​ ರೋಷನ್​ ಬಹಿರಂಗ ಪತ್ರ

ಸಂತೋಷ್ ಚಿತ್ರಮಂದಿರದಲ್ಲಿ ತಾಂತ್ರಿಕ ಸಮಸ್ಯೆ, ಶೋ ಸ್ಥಗಿತ; ಬಿಡುಗಡೆಯ ಸಂಭ್ರಮದಲ್ಲಿದ್ದ ‘ನಿನ್ನ ಸನಿಹಕೆ’ ಚಿತ್ರತಂಡಕ್ಕೆ ನಿರಾಸೆ

Published On - 5:10 pm, Fri, 8 October 21