Aryan Khan: ಆರ್ಥರ್ ಜೈಲಿಗೆ ಆರ್ಯನ್ ಖಾನ್ ಹಾಗೂ ಇತರ ಆರೋಪಿಗಳು
Mumbai Drug Case: ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಇಂದು ಅರ್ಥರ್ ರೋಡ್ ಜೈಲಿಗೆ ಕರೆದೊಯ್ಯಲಾಗಿದೆ. ಈ ಮಡುವೆ ಅವರ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಮುಂಬೈನ ಆರ್ಥರ್ ರೋಡ್ ಜೈಲಿಗೆ ಕರೆದೊಯ್ಯಲಾಗಿದೆ. ಈ ಕುರಿತು ಎಎನ್ಐ ಟ್ವೀಟ್ ಮಾಡಿದ್ದು, ಮಾಹಿತಿ ನೀಡಿದೆ. ಎನ್ಸಿಬಿ ಅಧಿಕಾರಿಗಳು ಆರ್ಯನ್ ಖಾನ್ ಜೊತೆಗೆ ಬಂಧಿಸಿರುವ ಇತರ ಆರೋಪಿಗಳ ಮೆಡಿಕಲ್ ಟೆಸ್ಟ್ ಮಾಡಿಸಿ ನಂತರ ಜೈಲಿಗೆ ಕರೆದೊಯ್ದಿದ್ದಾರೆ.
ಈ ಕುರಿತು ಎಎನ್ಐ ಮಾಡಿರುವ ಟ್ವೀಟ್:
Mumbai | NCB brings Aryan Khan and other accused in the cruise ship drug raid case to Arthur Jail pic.twitter.com/uow3Ukaj0Z
— ANI (@ANI) October 8, 2021
ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ:
ಎನ್ಸಿಬಿಯ ಕಸ್ಟಡಿ ಅವಧಿ ಮುಗಿದ ಕಾರಣ, ನ್ಯಾಯಾಲಯವು ಆರ್ಯನ್ ಖಾನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇಂದು ಮುಂಬೈ ನ್ಯಾಯಾಲಯದಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಆರ್ಯನ್ ಪರ ಖ್ಯಾತ ವಕೀಲ ಸತೀಶ್ ಮಾನೆಶಿಂಧೆ ವಾದ ಮಂಡಿಸುತ್ತಿದ್ದಾರೆ. ‘ಆರ್ಯನ್ ವಿರುದ್ಧ ಸಾಕ್ಷಾಧಾರಗಳ ಕೊರತೆ ಇದೆ. ಜಾಮೀನನ್ನು ಹಕ್ಕಾಗಿ ಕೇಳುತ್ತಿಲ್ಲ. ಇದುವರೆಗೆ ಎನ್ಸಿಬಿ ಕಸ್ಟಡಿಯಲ್ಲಿದ್ದು ವಿಚಾರಣೆಗೆ ಬೇಕಾದ ನೆರವನ್ನು ನೀಡಿಯಾಗಿದೆ. ಅದಾಗ್ಯೂ ಆರೋಪಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ. ಹೀಗಾಗಿ ಜಾಮೀನು ನೀಡಬೇಕು’ ಎಂದು ಅವರು ವಾದ ಮಂಡಿಸಿದ್ದಾರೆ. ನ್ಯಾಯಾಲಯ ಇನ್ನಷ್ಟೇ ತೀರ್ಪನ್ನು ನೀಡಬೇಕಿದೆ.
ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಆರ್ಯನ್ ಕೂಡ ಇದ್ದರು. ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್ಸಿಬಿ) ಆರ್ಯನ್ ಅವರನ್ನು ವಶಕ್ಕೆ ಪಡೆದಿತ್ತು. ಇದುವರೆಗೆ ಎರಡು ಬಾರಿ ಆರ್ಯನ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಒಂದು ವೇಳೆ ಇಂದು ಜಾಮೀನು ದೊರೆತರೆ ಆರ್ಯನ್, ಬಂಧನದಿಂದ ಬಿಡುಗಡೆಯಾಗಲಿದ್ದಾರೆ.
ಇದನ್ನೂ ಓದಿ:
Aryan Khan: ಶಾರುಖ್ ಮಗ ಆರ್ಯನ್ ಖಾನ್ಗೆ ನ್ಯಾಯಾಂಗ ಬಂಧನ
‘ಮಾಫಿಯಾ ಪಪ್ಪುಗಳು ಆರ್ಯನ್ ಖಾನ್ ರಕ್ಷಣೆಗೆ ಬಂದರು’; ಹೃತಿಕ್ಗೆ ತಿರುಗೇಟು ನೀಡಿದ ಕಂಗನಾ
‘ಪ್ರೀತಿಯ ಆರ್ಯನ್ ಖಾನ್..’: ಶಾರುಖ್ ಪುತ್ರನಿಗೆ ಹೃತಿಕ್ ರೋಷನ್ ಬಹಿರಂಗ ಪತ್ರ