ಸೋನು ಸೂದ್ ಚಿತ್ರವನ್ನು ಸಿಮ್ ಕಾರ್ಡ್ ಮೇಲೆ ಚಿತ್ರಿಸಿದ ಅಭಿಮಾನಿ! ‘ಉಚಿತ 10G ನೆಟ್​ವರ್ಕ್’​ ಎಂದು ತಮಾಷೆ ಮಾಡಿದ ಬಾಲಿವುಡ್ ನಟ

Sonu Sood: ಟ್ವೀಟ್ ಬಳಕೆದಾರರು ಇತ್ತೀಚೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಸಿಮ್ ಕಾರ್ಡ್ ಮೇಲೆ ಚಿತ್ರಿಸಿದ ಸೋನು ಸೂದ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಸಿಮ್ ಕಾರ್ಡ್ ಮೇಲಿನ ಪೇಂಟಿಕ್ ಎಂದು ಶೀರ್ಷಿಕೆ ನೀಡುವ ಮೂಲಕ ಟ್ವೀಟ್ ಮಾಡಿದ್ದಾರೆ.

ಸೋನು ಸೂದ್ ಚಿತ್ರವನ್ನು ಸಿಮ್ ಕಾರ್ಡ್ ಮೇಲೆ ಚಿತ್ರಿಸಿದ ಅಭಿಮಾನಿ! 'ಉಚಿತ 10G ನೆಟ್​ವರ್ಕ್'​ ಎಂದು ತಮಾಷೆ ಮಾಡಿದ ಬಾಲಿವುಡ್ ನಟ
ಸಿಮ್​ ಕಾರ್ಡ್​ ಮೇಲೆ ಸೋನು ಸೂದ್​ ಚಿತ್ರ

ಬಾಲಿವುಡ್ ನಟ ಸೋನು ಸೂದ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ವಿಶೇಷ ಅಭಿಮಾನ ಬಳಗವನ್ನು ಸಂಪಾದಿಸಿದ್ದಾರೆ. ಅದೆಷ್ಟೋ ಜನರ ಹೃದಯ ಗೆದ್ದಿದ್ದಾರೆ. ಅವರ ಉದಾತ್ತವಾದ ಸೇವೆಗೆ ಅಭಿಮಾನಿಗಳು ಗೌರವ ಸೂಚಿಸಲು ಜತೆಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಅಂಥಹ ಪಟ್ಟಿಯಲ್ಲಿ ಇದೀಗ ವೈರಲ್ ಆದ ಸುದ್ದಿಯೊಂದು ಸೇರ್ಪಡೆಯಾಗಿದೆ. ಅದೇನೆಂದರೆ, ಸೋನು ಸೂದ್ ಅಭಿಮಾನಿಯೊಬ್ಬರು ಹಳೆಯ ಸಿಮ್​ ಕಾರ್ಡ್​ನಲ್ಲಿ ಚಿತ್ರಿಸಿದ ಫೋಟೋ! ಈ ಚಿತ್ರವನ್ನು ಅಭಿಮಾನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸೊಮಿನ್ ಎಂಬ ಹೆಸರಿನ ಟ್ವೀಟ್ ಬಳಕೆದಾರರು ಇತ್ತೀಚೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಸಿಮ್ ಕಾರ್ಡ್ ಮೇಲೆ ಚಿತ್ರಿಸಿದ ಸೋನು ಸೂದ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಸಿಮ್ ಕಾರ್ಡ್ ಮೇಲಿನ ಪೇಂಟಿಕ್ ಎಂದು ಶೀರ್ಷಿಕೆ ನೀಡುವ ಮೂಲಕ ಟ್ವೀಟ್ ಮಾಡಿದ್ದಾರೆ.

ಸೋನು ಸೂದ್ ಇದನ್ನು ಇಷ್ಟಪಟ್ಟಿದ್ದು, ಫ್ರೀ 10ಜಿ ನೆಟ್ವರ್ಕ್ ಎಂದು ನಗೆಯ ಎಮೋಜಿ ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಸೋನು ಸೂದ್ ಅವರ ಪೋಸ್ಟ್ 6,000 ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. 340 ಕ್ಕೂ ಹೆಚ್ಚು ರೀಟ್ವೀಟ್ ಮಾಡಲಾಗಿದೆ. ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ಹಂಚಿಕೊಂಡಿದ್ದು, ದೇವರು ನಿಮಗೆ ಆಶೀರ್ವದಿಸುತ್ತಾನೆ ಸರ್ .. ಎಂದು ಓರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಅರುಣಾಚಲ ಪ್ರದೇಶದ ಪುಟ್ಟ ಬಾಲಕ ಹಾಡಿದ ಗಲ್ಲಿ ಬಾಯ್ ಚಿತ್ರದ ರ‍್ಯಾಪ್‌ ಸಾಂಗ್ ಫುಲ್ ವೈರಲ್

Viral Video: ಎರಡೇ ಚಕ್ರದಲ್ಲಿ ಆಟೋ ರಿಕ್ಷಾ ಓಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ ಚೆನ್ನೈ ಯುವಕ

Read Full Article

Click on your DTH Provider to Add TV9 Kannada