Viral Video: ತನ್ನ ತಾಯಿಗಾಗಿ ಹುಡುಕಾಡುತ್ತಿರುವ ಆನೆ ಮರಿ; ಮನಮಿಡಿಯುವ ವಿಡಿಯೋ ನೋಡಿ
Baby Elephant: ಈ ವಿಡಿಯೋದಲ್ಲಿ ಕೆಲವು ಅರಣ್ಯ ಅಧಿಕಾರಿಗಳು ಕಾಡಿನಲ್ಲಿ ನಡೆದು ಹೋಗುತ್ತಿರುವುದು ಕಂಡುಬಂದಿದೆ. ಮರಿ ಆನೆ ಕೂಡ ಅವರ ಜೊತೆಗೆ ನಡೆದುಕೊಂಡು ಹೋಗುತ್ತಿರುತ್ತದೆ. ಆ ಅರಣ್ಯ ಅಧಿಕಾರಿಗಳು ಮರಿ ಆನೆಗೆ ಸಹಾಯ ಮಾಡುತ್ತಿದ್ದಾರೆ.
ತಾಯಿ ಮತ್ತು ಮಗುವಿನ ಸಂಬಂಧ ತುಂಬಾ ವಿಶೇಷವಾದದ್ದು. ಆ ಸಂಬಂಧದ ಸೌಂದರ್ಯವನ್ನು ಪದಗಳಲ್ಲಿ ವಿವರಿಸುವುದು ಕಷ್ಟಸಾಧ್ಯ. ಇದು ಮನುಷ್ಯರಲ್ಲಿ ಮಾತ್ರ ಅಲ್ಲ. ಬಹುತೇಕ ಪ್ರಾಣಿಗಳಲ್ಲಿ ಕೂಡ ಈ ಗುಣ ಕಂಡುಬರುತ್ತದೆ. ಈ ಸಂಬಂಧದ ಭಾವನೆಗಳನ್ನು ತೋರಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಈಗ ಅಂತಹದೇ ಒಂದು ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಇದರಲ್ಲಿ ಕೂಡ ಮನುಷ್ಯರ ಬಗ್ಗೆ ಅಲ್ಲ. ಬದಲಾಗಿ ಆನೆಯಲ್ಲಿ ಇರುವ ತಾಯಿ- ಮಗುವಿನ ಸಂಬಂಧದ ಗುಣವನ್ನು ನಾವು ನೋಡಬಹುದು. ಈ ವಿಡಿಯೋ ನೋಡಿ ನೆಟ್ಟಿಗರು ಮನದುಂಬಿ ಪ್ರತಿಕ್ರಿಯೆ ನೀಡಿದ್ದಾರೆ.
ಆನೆಮರಿ ಒಂದು ತನ್ನ ತಾಯಿಯಿಂದ ಬೇರ್ಪಟ್ಟ ನೋವಿನಲ್ಲಿ ಇರುತ್ತದೆ. ಅಂತಹ ಕಷ್ಟದ ಸಂದರ್ಭದಲ್ಲಿ ಆನೆ ತನ್ನ ತಾಯಿಗಾಗಿ ಹುಡುಕಾಟ ನಡೆಸುತ್ತಿರುತ್ತದೆ. ಈ ವೇಳೆ, ಅರಣ್ಯ ಅಧಿಕಾರಿಗಳು ಕಾಡಿನಲ್ಲಿ ನಡೆದು ಆನೆ ಮರಿಯನ್ನು ಆನೆಯ ಕುಟುಂಬಕ್ಕೆ ಮತ್ತೆ ಪರಿಚಯಿಸಿ, ಅದರೊಂದಿಗೆ ಸೇರಿಸಿ ಬಿಡುತ್ತಾರೆ.
ಈ ವಿಡಿಯೋದಲ್ಲಿ ಕೆಲವು ಅರಣ್ಯ ಅಧಿಕಾರಿಗಳು ಕಾಡಿನಲ್ಲಿ ನಡೆದು ಹೋಗುತ್ತಿರುವುದು ಕಂಡುಬಂದಿದೆ. ಮರಿ ಆನೆ ಕೂಡ ಅವರ ಜೊತೆಗೆ ನಡೆದುಕೊಂಡು ಹೋಗುತ್ತಿರುತ್ತದೆ. ಆ ಅರಣ್ಯ ಅಧಿಕಾರಿಗಳು ಮರಿ ಆನೆಗೆ ಸಹಾಯ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ವಿಡಿಯೋ ಇತರ ಸಾಮಾಜಿಕ ಜಾಲತಾಣ ಪುಟದಲ್ಲಿ ಕೂಡ ವೈರಲ್ ಆಗುತ್ತಿದೆ.
A kutty baby elephant was reunited with the family after rescue by TN foresters in Mudumalai. Most heartwarming indeed. Kudos ?? #TNForest #elephants #mudumalai pic.twitter.com/eX9gBd3oK7
— Supriya Sahu IAS (@supriyasahuias) October 6, 2021
Incredible outpouring of love on the kutty baby elephant who was reunited with the herd by #TNForesters. The kutty blows a big trumpet while approaching the mother.Well done Sachin,Vengatesh Prabhu,Prasad,Vijay,George Praveenson,Thamba Kumar,Aneesh,Kumar, & APW teams Pandalur pic.twitter.com/0fQaZKnpDg
— Supriya Sahu IAS (@supriyasahuias) October 7, 2021
ತಮಿಳುನಾಡು ಮುದುಮಲೈ ಅರಣ್ಯ ಅಧಿಕಾರಿಗಳ ಶ್ರಮದಿಂದ ಈ ಮರಿ ಆನೆಯು ತನ್ನ ಕುಟುಂಬದೊಂದಿಗೆ ಸೇರಿಕೊಂಡಿತು ಎಂದು ಅವರು ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಇನ್ನೊಂದು ವಿಡಿಯೋದಲ್ಲಿ ಮರಿ ಆನೆಯು ಓಡುತ್ತಿರುವುದನ್ನು ಗಮನಿಸಬಹುದು. ಈ ಎರಡು ವಿಡಿಯೋಗಳಿಗೂ ಜನರು ವಿಭಿನ್ನ ಪ್ರತಿಕ್ರಿಯೆಯನ್ನು ಕೊಡುತ್ತಿದ್ದಾರೆ. ಒಬ್ಬರು ಈ ಮರಿ ತುಂಬಾ ಕ್ಯೂಟ್ ಆಗಿದೆ ಎಂದು ಬರೆದುಕೊಂಡಿದ್ದಾರೆ. ಅರಣ್ಯ ಅಧಿಕಾರಿಗಳ ಪ್ರಯತ್ನದಿಂದ ಕಾಡು ಪ್ರಾಣಿಗಳು ಚೆನ್ನಾಗಿವೆ ಎಂದು ಹೇಳಿದ್ದಾರೆ. ನಾನು ಈ ಎಲ್ಲಾ ಅರಣ್ಯ ಅಧಿಕಾರಿಗಳಿಗೆ ಗೌರವ ಸಲ್ಲಿಸುತ್ತೇನೆ ಎಂದು ಮತ್ತೊಬ್ಬರು ಬರೆದಿದ್ದಾರೆ.
ಇದನ್ನೂ ಓದಿ: Viral Video: ಅರುಣಾಚಲ ಪ್ರದೇಶದ ಪುಟ್ಟ ಬಾಲಕ ಹಾಡಿದ ಗಲ್ಲಿ ಬಾಯ್ ಚಿತ್ರದ ರ‍್ಯಾಪ್ ಸಾಂಗ್ ಫುಲ್ ವೈರಲ್
ಇದನ್ನೂ ಓದಿ: Viral Video: ಉಕ್ಕಿ ಹರಿಯುತ್ತಿದ್ದ ಕಾಲುವೆಗೆ ಧುಮುಕಿ ತಾಯಿ-ಮಗುವನ್ನು ಕಾಪಾಡಿದ ಪೊಲೀಸ್; ವಿಡಿಯೋ ವೈರಲ್