Viral Video: ಉಕ್ಕಿ ಹರಿಯುತ್ತಿದ್ದ ಕಾಲುವೆಗೆ ಧುಮುಕಿ ತಾಯಿ-ಮಗುವನ್ನು ಕಾಪಾಡಿದ ಪೊಲೀಸ್; ವಿಡಿಯೋ ವೈರಲ್

TV9 Digital Desk

| Edited By: Sushma Chakre

Updated on: Oct 06, 2021 | 4:36 PM

ಕಾಲುವೆಗೆ ಹಾರಿ ಕೊಚ್ಚಿಹೋಗುತ್ತಿದ್ದ ಮಹಿಳೆ ಹಾಗೂ ಆಕೆಯ ಪುಟ್ಟ ಮಗನನ್ನು ಕಾಪಾಡುವ ಮೂಲಕ ಆಂಧ್ರಪ್ರದೇಶದ ಪೊಲೀಸ್ ಹೀರೋ ಎನಿಸಿಕೊಂಡಿದ್ದಾರೆ.

Viral Video: ಉಕ್ಕಿ ಹರಿಯುತ್ತಿದ್ದ ಕಾಲುವೆಗೆ ಧುಮುಕಿ ತಾಯಿ-ಮಗುವನ್ನು ಕಾಪಾಡಿದ ಪೊಲೀಸ್; ವಿಡಿಯೋ ವೈರಲ್
ಆಂಧ್ರದ ಪೊಲೀಸ್ ಅಧಿಕಾರಿ ಸುರೇಶ್ ಬಾಬು
Follow us

ಹೈದರಾಬಾದ್: ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಮಳೆ ಹೆಚ್ಚಾಗಿದೆ. ಮಳೆಯಿಂದ ತುಂಬಿ ಹರಿಯುತ್ತಿದ್ದ ಕಾಲುವೆಗೆ ಹಾರಿ ಕೊಚ್ಚಿಹೋಗುತ್ತಿದ್ದ ಮಹಿಳೆ ಹಾಗೂ ಆಕೆಯ ಪುಟ್ಟ ಮಗನನ್ನು ಕಾಪಾಡುವ ಮೂಲಕ ಆಂಧ್ರಪ್ರದೇಶದ ಪೊಲೀಸ್ ಹೀರೋ ಎನಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯ ಸಾಹಸಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ಜೀವದ ಹಂಗು ತೊರೆದು ತಾಯಿ- ಮಗುವನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ.

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಪೊಲಾವರಂ ಕಾಲುವೆ ಮಳೆಯಿಂದ ಉಕ್ಕಿ ಹರಿಯುತ್ತಿತ್ತು. ಆತ್ಮಹತ್ಯೆ ಮಾಡಿಕೊಳ್ಳಲು ಈ ಕಾಲುವೆಗೆ ಬಿದ್ದಿದ್ದ ಮಹಿಳೆ ಹಾಗೂ ಆಕೆಯ ಮಗನನ್ನು ಜಗ್ಗಂಪೇಟೆ ಸರ್ಕಲ್ ಇನ್​ಸ್ಪೆಕ್ಟರ್ ವಿ. ಸುರೇಶ್ ಬಾಬು ಕಾಪಾಡಿದ್ದಾರೆ. ತಾಯಿ-ಮಗು ಕಾಲುವೆಗೆ ಹಾರಿರುವ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಬಂದ ಸುರೇಶ್ ಬಾಬು ಬೇರೆ ಆಯ್ಕೆ ಇಲ್ಲದ ಕಾರಣ ತಾವೇ ಕಾಲುವೆಗೆ ಧುಮುಕಿದ್ದಾರೆ.

30 ವರ್ಷದ ಬುಜ್ಜಿ ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳಾದ ಸಾಯಿ (8 ವರ್ಷ), ಲಕ್ಷ್ಮೀ ದುರ್ಗ (5 ವರ್ಷ) ಜೊತೆಗೆ ಕಾಲುವೆಗೆ ಹಾರಿದ್ದಳು. ಸುರೇಶ್ ಬಾಬು ಮೊದಲು ತಮ್ಮ ಕೈಗೆ ಸಿಕ್ಕ 8 ವರ್ಷದ ಬಾಲಕನನ್ನು ರಕ್ಷಿಸಿ ದಡಕ್ಕೆ ಎಳೆದು ತಂದಿದ್ದಾರೆ. ನಂತರ ಆ ಮಹಿಳೆಯನ್ನು ರಕ್ಷಿಸಿದ್ದಾರೆ. 5 ವರ್ಷದ ಬಾಲಕಿಯನ್ನು ಕಾಪಾಡಲು ಮತ್ತೊಮ್ಮೆ ಧುಮುಕುವಷ್ಟರಲ್ಲಿ ಆ ಬಾಲಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಳು. ಇಬ್ಬರನ್ನು ಕಾಪಾಡಲು ಸಾಧ್ಯವಾಗಿದ್ದು, ಬಾಲಕಿ ಸಾವನ್ನಪ್ಪಿದ್ದಾಳೆ. ಈ ವೇಳೆ ನೀರಿನ ರಭಸಕ್ಕೆ ಸುರೇಶ್ ಬಾಬು ಕೂಡ ಕೊಚ್ಚಿ ಹೋಗುತ್ತಿದ್ದರು. ಆದರೆ, ಅಷ್ಟರಲ್ಲಿ ಅಲ್ಲಿ ಸೇರಿದ್ದ ಸ್ಥಳೀಯರ ದಂಡು ಸುರೇಶ್ ಬಾಬು ಅವರನ್ನು ರಕ್ಷಿಸಿದೆ.

ಇದನ್ನೂ ಓದಿ: Viral Video: ದೆಹಲಿ ಏರ್​ಪೋರ್ಟ್​ನೊಳಗೆ ನುಗ್ಗಿ ಜ್ಯೂಸ್​ ಕುಡಿದು, ಬಾರ್​ನಲ್ಲಿ ಕುಳಿತ ಕೋತಿ; ವಿಡಿಯೋ ಇಲ್ಲಿದೆ

Shocking Video: ಮೈಕೆಲ್ ಜಾಕ್ಸನ್ ದೆವ್ವವನ್ನೇ ಮದುವೆಯಾದ ಮಹಿಳೆ; ಥ್ರಿಲ್ಲಿಂಗ್ ಲವ್ ಸ್ಟೋರಿ ಇಲ್ಲಿದೆ

ತಾಜಾ ಸುದ್ದಿ

Related Stories

Click on your DTH Provider to Add TV9 Kannada