AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಮೈಕೆಲ್ ಜಾಕ್ಸನ್ ದೆವ್ವವನ್ನೇ ಮದುವೆಯಾದ ಮಹಿಳೆ; ಥ್ರಿಲ್ಲಿಂಗ್ ಪ್ರೇಮ್ ಕಹಾನಿ ಇಲ್ಲಿದೆ

Viral Video: ದೆವ್ವವಾಗಿ ಆಕೆಯ ಮೈ ಮೇಲೆ ಬರುವ ಮೈಕೆಲ್ ಜಾಕ್ಸನ್ ಆಕೆಯ ರೂಪದಲ್ಲಿ ಡ್ಯಾನ್ಸ್ ಮಾಡಿ, ಹಾಡು ಹಾಡಿ, ಊಟ ಮಾಡುತ್ತಾರಂತೆ. ಈ ಬಗ್ಗೆ ಹರಿದಾಡುತ್ತಿರುವ ಸುದ್ದಿ ಈಗ ವೈರಲ್ ಆಗಿದೆ.

Viral News: ಮೈಕೆಲ್ ಜಾಕ್ಸನ್ ದೆವ್ವವನ್ನೇ ಮದುವೆಯಾದ ಮಹಿಳೆ; ಥ್ರಿಲ್ಲಿಂಗ್ ಪ್ರೇಮ್ ಕಹಾನಿ ಇಲ್ಲಿದೆ
ಮೈಕೆಲ್ ಜಾಕ್ಸನ್- ಕ್ಯಾಥಲಿನ್
TV9 Web
| Edited By: |

Updated on:Oct 07, 2021 | 5:18 PM

Share

ಮೈಕೆಲ್ ಜಾಕ್ಸನ್ ಹೆಸರು ಯಾರಿಗೆ ತಾನೇ ಗೊತ್ತಿಲ್ಲ? ವಿವಾದಗಳಿಂದ ಸಾಕಷ್ಟು ಹೆಸರಾಗಿದ್ದ ಖ್ಯಾತ ಗಾಯಕ ಹಾಗೂ ಡ್ಯಾನ್ಸರ್ ಮೈಕೆಲ್ ಜಾಕ್ಸನ್ ಇನ್ನೂ ಜೀವಂತವಾಗಿದ್ದಾರಂತೆ! ದೆವ್ವದ ರೂಪದಲ್ಲಿರುವ ಮೈಕೆಲ್ ಜಾಕ್ಸನ್ ಅವರನ್ನು ಅಮೆರಿಕದ ಮಹಿಳೆಯೊಬ್ಬರು ಮದುವೆಯಾಗಿದ್ದಾರಂತೆ! ದೆವ್ವವಾಗಿ ಆಕೆಯ ಮೈ ಮೇಲೆ ಬರುವ ಮೈಕೆಲ್ ಜಾಕ್ಸನ್ ಆಕೆಯ ರೂಪದಲ್ಲಿ ಡ್ಯಾನ್ಸ್ ಮಾಡಿ, ಹಾಡು ಹಾಡಿ, ಊಟ ಮಾಡುತ್ತಾರಂತೆ. ಈ ಬಗ್ಗೆ ಹರಿದಾಡುತ್ತಿರುವ ಸುದ್ದಿ ಈಗ ವೈರಲ್ ಆಗಿದೆ.

ಮೈಕೆಲ್ ಜಾಕ್ಸನ್ ಅವರ ದೆವ್ವ ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಇಚ್ಛಿಸುವುದಿಲ್ಲ. ನಾನು ಮೈಕೆಲ್ ಹೆಂಡತಿಯಾಗಿದ್ದು, ದೈಹಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಆತನ ಜೊತೆ ಸಂಸಾರ ನಡೆಸುತ್ತಿದ್ದೇನೆ. ಇದೇನೂ ಕಟ್ಟು ಕತೆಯಲ್ಲ. ಇದು ನಮ್ಮ ಜೀವನದಲ್ಲಿ ನಡೆಯುತ್ತಿರುವ ಸತ್ಯ ಕತೆ. ಈ ಜಗತ್ತಿನ ಅತ್ಯಂತ ಪ್ರಸಿದ್ಧ ವ್ಯಕ್ತಿ ನನ್ನ ಗಂಡನಾಗಿದ್ದಾನೆ. ಆದರೆ, ಆತನನ್ನು ಜಗತ್ತಿಗೆ ತೋರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಆತ ಸಾವನ್ನಪ್ಪಿದ ನಂತರ ನನ್ನನ್ನು ವರಿಸಿದ್ದಾನೆ ಎಂದು ಅಮೆರಿಕದ ಮಹಿಳೆ ಕ್ಯಾಥಲಿನ್ ರಾಬರ್ಟ್ಸ್​ ಸಂದರ್ಶನದಲ್ಲಿ ಹೇಳಿದ್ದಾಳೆ.

ಮೈಕೆಲ್ ಜಾಕ್ಸನ್ ನನ್ನ ದೇಹವನ್ನು ಆವರಿಸಿಕೊಂಡಿದ್ದಾನೆ. ಆತ ನನ್ನ ಜೊತೆ ಗಂಡನಾಗಿ ಮಾತನಾಡುತ್ತಾನೆ. ಆದರೆ, ನನ್ನೊಂದಿಗೆ ಸೆಕ್ಸ್ ಮಾಡಲು ಆತನಿಗೆ ಇಷ್ಟವಿಲ್ಲವಂತೆ. ನನ್ನ ರೂಪದಲ್ಲಿದ್ದುಕೊಂಡು ಆತ ತನಗೆ ಇಷ್ಟವಾದುದನ್ನು ತಿನ್ನುತ್ತಾನೆ, ಆತನಿಗೆ ಇಷ್ಟ ಬಂದ ಹಾಡನ್ನು ಹಾಡುತ್ತಾನೆ. ಅವನಿಗೆ ಹಿಂದಿನಿಂದ ಮುಟ್ಟುವುದು ಇಷ್ಟವಿಲ್ಲ. ಮೈಕೆಲ್​ಗೆ ಕುಕೀಸ್ ಎಂದರೆ ಬಹಳ ಇಷ್ಟ. ನಾನು ಆತನೊಂದಿಗೆ ರೊಮ್ಯಾಂಟಿಕ್ ಆಗಿ ಮುಂದುವರೆಯಲು ಪ್ರಯತ್ನಿಸಿದರೆ ಅಥವಾ ಆತನಿಗೆ ಮುತ್ತು ನೀಡಲು ಹೋದರೆ ಅಸ್ಥಿಪಂಜರದ ರೂಪದಲ್ಲಿ, ಜೇಡದ ರೂಪ ತಾಳಿ ನನ್ನನ್ನು ಹೆದರಿಸಲು ನೋಡುತ್ತಾನೆ ಎಂದು ಆ ಮಹಿಳೆ ಸಂದರ್ಶನದಲ್ಲಿ ಹೇಳಿದ್ದಾಳೆ.

My Story Of Becoming A Physical Medium & Michael Jackson The Ghost’s Wife from Kathleen Roberts on Vimeo.

ಈ ಲವ್ ಸ್ಟೋರಿ ಕೇಳಿದವರು ಥ್ರಿಲ್ ಆಗಿದ್ದಾರೆ. ಇಷ್ಟೇ ಅಲ್ಲ ಆಕೆ ಮೈಕೆಲ್ ಜಾಕ್ಸನ್ ಆತ್ಮದ ಜೊತೆ ಮಾತನಾಡುವ ಬಗ್ಗೆ ತನ್ನ ಕತೆಯನ್ನು ಹಂಚಿಕೊಂಡಿರುವ ವಿಡಿಯೋವನ್ನು ಕೂಡ ಆ ಮಹಿಳೆ ಶೇರ್ ಮಾಡಿಕೊಂಡಿದ್ದಾಳೆ. ಮೈಕೆಲ್ ಜಾಕ್ಸನ್ ಮಗುವಿನಂತಹ ಮನಸಿರುವವರು. ಪಾಪ್ ಸಂಗೀತದ ರಾಜನಾಗಿದ್ದ ಮೈಕೆಲ್ ಜಾಕ್ಸನ್ ಅಭಿಮಾನಿಯಾಗಿದ್ದ ಆ ಮಹಿಳೆ 3 ವರ್ಷದವಳಾಗಿದ್ದಾಗಿನಿಂದಲೂ ಆತನ ಅಭಿಮಾನಿಯಾಗಿದ್ದಳು.

ಇದನ್ನೂ ಓದಿ: Viral News: ಪ್ರೇಯಸಿಗಾಗಿ ಹುಡುಗಿಯಂತೆ ಡ್ರೆಸ್ ಧರಿಸಿ, ಮೇಕಪ್ ಮಾಡಿಕೊಂಡು ಪರೀಕ್ಷೆ ಬರೆದ ಪ್ರೇಮಿ!

Shocking Video: ಮಾಸ್ಕ್ ಧರಿಸದ್ದಕ್ಕೆ ದಂಡ ವಿಧಿಸಿದ ಅಧಿಕಾರಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ; ವಿಡಿಯೋ ವೈರಲ್

Published On - 8:52 pm, Wed, 18 August 21

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ